ಸೂರ್ಯನ ಅಧ್ಯಾಯ ನಡೆಸಲು ನಭಕ್ಕೆ ಚಿಮ್ಮಿದ ಆದಿತ್ಯ ಎಲ್-1 ವಿಶೇಷತೆ ಏನು ಗೊತ್ತಾ?

ಬೆಂಗಳೂರು, ಸೆಪ್ಟೆಂಬರ್‌ 02: ಚಂದ್ರನ ದಕ್ಷಿಣ ಧ್ರುವ ಚುಂಬಿಸಿದ ಬಳಿಕ ಮೊಟ್ಟ ಮೊದಲ ಭಾರಿಗೆ ದೇಶದಲ್ಲಿ ಸೂರ್ಯನ ಅಧ್ಯಯನ ಮಾಡುವ ಸಾಹಸಕ್ಕೆ ಇಸ್ರೋ ಮುಂದಾಗಿದೆ. ಇಸ್ರೋ ವಿಜ್ಞಾನಿಗಳ ಈ ಪ್ರಯತ್ನ ಇಡೀ ದೇಶದ ಜನರು ಹೆಮ್ಮೆ ಪಡುವಂತಹ ಸಂಗತಿ. ಈ ಮಧ್ಯೆ ಶ್ರೀ ಹರಿ ಕೋಟಾದಿಂದ ಉಡಾವಣೆ ಆಗಿರುವ ಆದಿತ್ಯ ಎಲ್-1 ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ.

ಆದಿತ್ಯನ ಉಪಗ್ರಹದಲ್ಲಿ ಸೌರ ಶಕ್ತಿಯ ಅಧ್ಯಯನಕ್ಕಾಗಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಕೂಡ ಇದೆ. ಸೂರ್ಯನಿಂದ ಹೊರಸೂಸುವ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡಲಿವೆ. ಇವುಗಳು ದ್ಯುತಿಗೋಳ, ವರ್ಣಗೋಳ, ಸೂರ್ಯನ ಹೊರ ಪದರಗಳು ಸೌರ ಶಕ್ತಿ ಕೋಶಗಳು & ಸೂರ್ಯನ ಕಾಂತಕ್ಷೇತ್ರವನ್ನು ಅಧ್ಯಯನ ಮಾಡಲಿವೆ.

Aditya L1 Successfully Launched: What Are The Specialities Of Aditya L-1

ಆದಿತ್ಯ-ಎಲ್1 ಉಪಗ್ರಹ 7 ಉಪಕರಣಗಳನ್ನ ಹೊತ್ತೊಯ್ಯುತ್ತದೆ. ಈ ಪೇ ಲೋಡ್ ಉಪಗ್ರಹದಲ್ಲಿ ಸಾಕಷ್ಟು ಮೇಜರ್ ರೋಲ್ ಪ್ಲೇ ಮಾಡುತ್ತದೆ. ಆ ಉಪಕರಣ ಯಾವುದು ಎಂದು ತಿಳಿಯುವುದಾದರೆ, ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC). ಇದು ಸೂರ್ಯನ ಕರೋನಾ ಮತ್ತು ಅದು ಹೊರ ಸೂಸುವ ಕಿರಣಗಳಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡುತ್ತದೆ.

ಸೌರ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಇದು ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ.

Aditya L1 Successfully Launched: What Are The Specialities Of Aditya L-1

ಸೋಲಾರ್ ಲೋ-ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಸೋಲೆಕ್ಸ್) ಮತ್ತು ಹೈ-ಎನರ್ಜಿ ಎಲ್-1 ಆರ್ಬಿಟಿಂಗ್ ಇದು ಸೂರ್ಯನ ಎಕ್ಸ್- ಕಿರಣಗಳ ಅಧ್ಯಯನ ಮಾಡಲಿವೆ.

ಮ್ಯಾಗ್ನೆಟೋಮೀಟರ್ (MAG) ಇದು ಎಲ್-1 ಕಕ್ಷೆಯ ಸುತ್ತ ಇರುವ ಅಂತರಗ್ರಹ ಕಾಂತಕ್ಷೇತ್ರವನ್ನು ಅಳೆಯುತ್ತದೆ.

ಇನ್ನೂ ಆಸ್ಪೆಕ್ಸ್ ಮತ್ತು ಪಾಪಾ ಸೌರ ಮಾರುತವನ್ನು ಅಧ್ಯಯನ ಮಾಡುವುದು ಮತ್ತು ಶಕ್ತಿಯ ವಿತರಣೆಯನ್ನು ಅರ್ಥಮಾಡಿಕೊಳ್ಳುವುದು ಕೆಲಸ ಮಾಡುತ್ತದೆ. ಇನ್ನು 7 ಪೇ ಲೋಡ್ ಗಳಲ್ಲಿ ನಾಲ್ಕು ಪೇಲೋಡ್‌ಗಳು ಸೂರ್ಯನತ್ತ ಮುಖ ಮಾಡಿ ಅಧ್ಯಯನ ನಡೆಸಿದರೆ, ಇನ್ನುಳಿದ ಮೂರು ಪೇಲೋಡ್‌ಗಳು ಮತ್ತೊಂದು ಪಾರ್ಶ್ವದಲ್ಲಿ ಮಾಹಿತಿ ಕಲೆಹಾಕುತ್ತದೆ.

ಉಷ್ಣತೆಯ ಸಮಸ್ಯೆಗಳು, ಪ್ರಭಾವಲಯದಿಂದ ಹೊರಹೊಮ್ಮುವ ಜ್ವಾಲೆಗಳ, ಜ್ವಾಲೆಗೂ ಮುನ್ನಾ ಸ್ಥಿತಿ, ಜ್ವಾಲೆಯ ಚಟುವಟಿಕೆಗಳು, ಜ್ವಾಲೆಯ ಗುಣಲಕ್ಷಣ ಬಾಹ್ಯಾಕಾಶದ ಹವಾಮಾನ ಮೊದಲಾದ ವಿಷಯಗಳ ಕುರಿತು ಆದಿತ್ಯ ಅಧ್ಯಯನ ನಡೆಸಲಿದೆ.

ಸೂರ್ಯನ ಅಧ್ಯಯನ ಯಾಕೆ ಮಾಡಬೇಕು..?

ಸೂರ್ಯನ ಅಧ್ಯಯನ ಯಾಕೆ ಮಾಡಬೇಕು ಅಂತ ಎಂದರೆ ಪ್ರಮುಖವಾಗಿ 7 ಕಾರಣಗಳು ಕಾಣ ಸಿಗುತ್ತದೆ. ಸೌರ ಬಿರುಗಾಳಿಗಳು ಹೇಗೆ ಉಂಟಾಗುತ್ತವೆ ಅನ್ನೋದರ ಬಗ್ಗೆ ಅಧ್ಯಯನ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ. ಭೀಕರ ಸೌರಮಾರುತಗಳು ಭೂಮಿಗೆ ಅಪ್ಪಳಿಸುವ ಮುನ್ನ ಯಾವ ಮುನ್ನೆಚ್ಚರಿಕೆಗಳು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಯಲು ಈ ಅಧ್ಯಯನದಿಂದ ಸಾಧ್ಯವಾಗುತ್ತದೆ.

ಅಧ್ಯಯನದಿಂದ ಸೂರ್ಯನ ವರ್ತನೆ ಮತ್ತು ಭೂಮಿಯ ವಾತಾವರಣದ ಮೇಲೆ ಅದರ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೂರ್ಯ ಗ್ರಹಣದ ಸಂದರ್ಭದಲ್ಲಿ ಅಷ್ಟೊಂದು ಕೆಂಪಾಗಿ ಗೋಚರಿಸುವುದರ ಹಿಂದಿರುವ ರಹಸ್ಯ ಗೊತ್ತಾಗಲಿದೆ. ಜೊತೆಗೆ ಸೂರ್ಯನ ವಾತಾವರಣ ಸೌರ ಮಾರುತಗಳನ್ನು ಸೃಷ್ಟಿಸುತ್ತದೆ, ಇವು ಭೂಮಿ ಮತ್ತು ಸಸ್ಯಗಳ ಮೇಲೆ ಏನ್‌ ಪರಿಣಾಮ ಬೀರುತ್ತೆ ಅನ್ನೋದರ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.

ಸೌರ ಬಿರುಗಾಳಿ ವಿಕಿರಣಕಾರಿಯಾಗಿದ್ದು, ಗಗನಯಾತ್ರಿಗಳಿಗೆ ಅಪಾಯ ಸೃಷ್ಟಿಸಬಲ್ಲವು. ಈ ಅಧ್ಯಯನದಿಂದ ಗಗನಯಾತ್ರಿಗಳು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಲಯದಲ್ಲಿ ಕೂಡ ಆದಿತ್ಯ ಉಡಾವಣೆ ಲೈವ್ ನೋಡಲು ವ್ಯವಸ್ಥೆ ಮಾಡಲಾಗಿತ್ತು. ತಾರಾಲಯದ ಎಂಟ್ರೆನ್ಸ್ ಅಲ್ಲಿಯೇ ಆದಿತ್ಯ ಸಾಗುವ ಹಾದಿಯ ಮೊಡೆಲ್ ಕೂಡ ಮಾಡಲಾಗಿತ್ತು. ಜನರ ಕಣ್ತುಂಬಿ ಕೊಳ್ಳಲು ಹಾಗೂ ಸೂರ್ಯಯಾನವನ್ನು ಅರ್ಥ ಮಾಡಿಕೊಳ್ಳಲು ಈ ಮಾಡೆಲ್ ಬಹಳ ಉಪಯುಕ್ತ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+