ಅದಾನಿ ಷೇರು ಕುಸಿತ: ಟ್ವಿಟರ್‌ನಲ್ಲಿ ಪತ್ರಕರ್ತೆ ಸುಚೇತಾ ದಲಾಲ್ ಟ್ರೆಂಡ್‌

ನವದೆಹಲಿ, ಜೂ.14: ಇತ್ತೀಚೆಗೆ ಟ್ವಿಟ್ಟರ್‌ನ ಎಲ್ಲಾ ವಿಷಯಗಳು ಭಾರೀ ಸುದ್ದಿಯಾಗುತ್ತಿದೆ. ಕೆಲವು ರಾಜಕೀಯ ನಾಯಕರು, ಸೆಲೆಬ್ರೆಟಿಗಳು ಮಾಡಿದ ಟ್ವೀಟ್‌ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಚರ್ಚೆಗೆ, ಮೇಮ್‌ಗಳಿಗೆ ಒಳಗಾದ ನಿದರ್ಶನಗಳು ನಮ್ಮ ಕಣ್ಣು ಮುಂದಿದೆ. ಈ ನಡುವೆ ಅದಾನಿ ಗುಂಪಿನ ಬಗ್ಗೆ ಪತ್ರಕರ್ತೆ ಮಾಡಿದ ಟ್ವೀಟ್‌ ಒಂದು ಈಗ ಭಾರೀ ಟ್ರಂಡ್‌ ಆಗಿದೆ.

ಪತ್ರಕರ್ತೆ ಸುಚೇತಾ ದಲಾಲ್ ಟ್ವೀಟ್‌ ಒಂದನ್ನು ಮಾಡಿದ್ದು ಈ ಟ್ವೀಟ್‌ ಮೂಲಕ ಪರೋಕ್ಷವಾಗಿ ಅದಾನಿ ಗುಂಪಿನ ಬಗ್ಗೆ ಉಲ್ಲೇಖ ಮಾಡಿದ್ದರು. ''ಎಸ್‌ಇಬಿಐ ಟ್ರ್ಯಾಕಿಂಗ್ ವ್ಯವಸ್ಥೆಗಳೊಂದಿಗೆ ಲಭ್ಯವಿರುವ ಮಾಹಿತಿಯೊಂದಿಗೆ ಸಾಬೀತುಪಡಿಸಲು ಕಷ್ಟಕರವಾದ ಮತ್ತೊಂದು ಹಗರಣವೆಂದರೆ, ಒಂದು ಗುಂಪಿನ ಬೆಲೆಗಳನ್ನು ಪಟ್ಟುಬಿಡದೆ ನಿಯಂತ್ರಿಸುವ ಹಿಂದಿರುವ ಆಪರೇಟರ್‌ಗಳು. ಎಲ್ಲಾ ವಿದೇಶಿ ಘಟಕಗಳ ಮೂಲಕ! ಅವರ ವಿಶೇಷತೆ, ಏನೂ ಬದಲಾಗುವುದಿಲ್ಲ,'' ಎಂದಿದ್ದರು.

 Adani stocks crash: Journalist Sucheta Dalal trends on Twitter

ಪತ್ರಕರ್ತೆ ದಲಾಲ್‌ರ ಈ ಟ್ವೀಟ್‌ ಈಗ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಸೃಷ್ಟಿ ಮಾಡಿದೆ. ಈ ಬೆನ್ನಲ್ಲೇ ಅದಾನಿ ಕಂಪೆನಿಗಳ ಷೇರುಗಳ ತೀವ್ರ ಕುಸಿತದ ಹಿನ್ನೆಲೆ ಪತ್ರಕರ್ತೆ ಮಾಡಿದ ಈ ಟ್ವೀಟ್‌ ಅನ್ನು ನೆಟ್ಟಿಗರು ಅದಾನಿ ಗುಂಪಿನ ಕುರಿತಾಗಿ ಮಾಡಲಾಗಿದೆ ಎಂದು ಗುರುತಿಸಿದ್ದಾರೆ. ಹಾಗೆಯೇ "ಹಗರಣ" ದ ಬಗ್ಗೆ ದಲಾಲ್‌ ಮಾಡಿದ ಉಲ್ಲೇಖವು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ದಲಾಲ್ ತನ್ನ ಟ್ವೀಟ್‌ನಲ್ಲಿ ಯಾವುದೇ ಕಂಪನಿಯ ಹೆಸರನ್ನು ಉಲ್ಲೇಖಿಸಿಲ್ಲ.

ಕಂಪನಿಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಮೂರು ವಿದೇಶಿ ನಿಧಿಗಳ ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಸ್ಥಗಿತಗೊಳಿಸಿದ ನಂತರ ಅದಾನಿ ಕಂಪೆನಿಗಳ ಷೇರುಗಳು ಇಂದು ಬೆಳಿಗ್ಗೆ 5-25 ರಷ್ಟು ಕುಸಿದಿದೆ. ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು 20 ಪ್ರತಿಶತದಷ್ಟು ಕುಸಿದಿದೆ ಎಂದು ವರದಿಯಾಗಿದೆ.

ಈ ನಡುವೆ ಟ್ವಿಟ್ಟರ್‌ನಲ್ಲಿ #Scam2021 #SuchetaDalal, #AdaniGroup ಭಾರೀ ಟ್ರೆಂಡ್‌ ಆಗಿದೆ. ಹಲವು ನೆಟ್ಟಿಗರು, ಈ ಟ್ವೀಟ್‌ಗೆ ಹಾಗೂ ಅದಾನಿ ಗುಂಪಿನ ಷೇರು ಕುಸಿತಕ್ಕೆ ಸಂಬಂಧಿಸಿದ ಮೇಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪತ್ರಕರ್ತೆ ಸುಚೇತಾ ದಲಾಲ್ ಹಾಗೂ ದಿವಂಗತ ಹರ್ಷದ್ ಮೆಹ್ತಾ ಇಬ್ಬರು ಸೇರಿ 1992 ರ ಸೆಕ್ಯುರಿಟೀಸ್ ಹಗರಣವನ್ನು ಪತ್ತೆಹಚ್ಚಿದ್ದಾರೆ ಎಂಬುದು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+