Gautam Adani: ಶಾಲೆಗಳಲ್ಲಿ ಕ್ರೀಡಾ ಶಿಕ್ಷಣ ಉತ್ತೇಜನಕ್ಕೆ ISSO ಜೊತೆ ಕೈಜೋಡಿಸಿದ ಅದಾನಿ
ಭಾರತದ ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕ್ರೀಡಾ ಶಿಕ್ಷಣ ಆಂದೋಲನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಶಾಲೆಗಳ ಕ್ರೀಡಾ ಸಂಸ್ಥೆ (ISSO)ಯೊಂದಿಗೆ ಅದಾನಿ ಇಂಟರ್ನ್ಯಾಷನಲ್ ಸ್ಕೂಲ್ ಕೈಜೋಡಿಸಿದೆ. ಈಗ ISSOನ ಸಲಹಾ ಮಂಡಳಿಗೆ ಸೇರಿರುವ ಅದಾನಿ ಅಂತಾರಾಷ್ಟ್ರೀಯ ಶಾಲೆಯ ಶ್ರೀಮತಿ ನಮ್ರತಾ ಅದಾನಿ ಅವರು ಈ ಕುರಿತು ದೀರ್ಘಕಾಲೀನ ಗುರಿಗಳನ್ನು ರೂಪಿಸುಲು ಮುಂದಾಗಿದ್ದಾರೆ.
2017ರಲ್ಲಿ ಸ್ಥಾಪನೆಯಾದ ISSO, ಅಂತಾರಾಷ್ಟ್ರೀಯ ಪಠ್ಯಕ್ರಮ ಶಾಲೆಗಳಿಗೆ ಮೀಸಲಾದ ಭಾರತದ ಏಕೈಕ ಕ್ರೀಡಾ ಸಂಸ್ಥೆಯಾಗಿದೆ. ಅಂತಾರಾಷ್ಟ್ರೀಯ ಬ್ಯಾಕಲೌರಿಯೇಟ್, ಕೇಂಬ್ರಿಡ್ಜ್, ಎಡೆಕ್ಸೆಲ್, US-ಆಧಾರಿತ ರಾಷ್ಟ್ರೀಯ ಶಾಲಾ ಮಂಡಳಿಗಳ ಸಂಘ (NSBA) ಮುಂತಾದ ಜಾಗತಿಕವಾಗಿ ಗುರುತಿಸಲ್ಪಟ್ಟ ಮಂಡಳಿಗಳೊಂದಿಗೆ ಸಂಯೋಜಿತವಾಗಿದೆ. 430ಕ್ಕೂ ಹೆಚ್ಚು ಶಾಲೆಗಳು, 22 ಕ್ರೀಡಾ ವಿಭಾಗಗಳು ಮತ್ತು ವಾರ್ಷಿಕವಾಗಿ 300ಕ್ಕೂ ಹೆಚ್ಚು ಪಂದ್ಯಾವಳಿಗಳನ್ನು ನಡೆಸುತ್ತದೆ. ಈ ಮೂಲಕ ISSO 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದೆ.

ಇನ್ನು ವಿದ್ಯಾರ್ಥಿಗಳ ಅಭಿವೃದ್ಧಿಗೆ ಬದ್ಧವಾಗಿರುವ ಪ್ರಗತಿಪರ ಸಂಸ್ಥೆಯಾದ ಅದಾನಿ ಇಂಟರ್ನ್ಯಾಷನಲ್ ಶಾಲೆ, ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ, ಕ್ರೀಡಾಪಟುಗಳ ತರಬೇತಿಯನ್ನು ಹೆಚ್ಚಿಸುವಲ್ಲಿ ಮತ್ತು ಜಾಗತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ISSOಗೆ ಬೆಂಬಲ ನೀಡುತ್ತದೆ. ದೈಹಿಕ ಶಿಕ್ಷಣದೊಂದಿಗೆ ಶೈಕ್ಷಣಿಕ ಶ್ರೇಷ್ಠತೆಯನ್ನು ಹೆಚ್ಚಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವತ್ತ ಗಮನಹರಿಸಿದೆ.
"ISSO ನಿರ್ದೇಶಕಿ ಶ್ರೀಮತಿ ಆಕಾಂಕ್ಷಾ ಥಾಪಕ್ ಈ ಬಗ್ಗೆ ಮಾತನಾಡಿದ್ದಾರೆ. ಕ್ರೀಡೆಯ ಮೂಲಕ ಯುವ ಸಬಲೀಕರಣದತ್ತ ನಮ್ಮ ದೃಷ್ಟಿಕೋನ ಇದ್ದು, ನಮ್ಮೊಂದಿಗೆ ಕೈಜೋಡಿಸಿರುವ ಶ್ರೀಮತಿ ನಮ್ರತಾ ಅದಾನಿ ಮತ್ತು ಅದಾನಿ ಗ್ರೂಪ್ ಅನ್ನು ಸ್ವಾಗತಿಸಲು ಸಂತೋಷಪಡುತ್ತೇವೆ. ISSO ಶಾಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ರೀಡೆಯ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತೆ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ," ಎಂದು ಹೇಳಿದರು.
"ಶ್ರೀಮತಿ ಅದಾನಿಯವರ ನಾಯಕತ್ವ ಮತ್ತು ಮುಂದಾಲೋಚನೆಯ ದೃಷ್ಟಿಕೋನದೊಂದಿಗೆ, ಈ ಸಹಯೋಗವು ನಾವು ರಚಿಸಿದ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಜ್ಜಾಗಿದೆ. ಒಟ್ಟಾಗಿ ಅಂತಾರಾಷ್ಟ್ರೀಯ ಶಾಲೆಗಳಾದ್ಯಂತ ಸಾವಿರಾರು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲು ನಾವು ಎದುರು ನೋಡುತ್ತಿದ್ದೇವೆ", ಎಂದು ISSO ನಿರ್ದೇಶಕಿ ಶ್ರೀಮತಿ ಆಕಾಂಕ್ಷಾ ಥಾಪಕ್ ಹೇಳಿದರು.
"ಅದಾನಿ ಗ್ರೂಪ್‌ನ ಶ್ರೀಮತಿ ನಮ್ರತಾ ಅದಾನಿ ಮಾತನಾಡಿದ್ದು, ಭಾರತದ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗುತ್ತಿದೆ. ಇನ್ನು ಈ ಸಹಯೋಗದ ಮೂಲಕ, ವಿದ್ಯಾರ್ಥಿಗಳು ತರಗತಿಯಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಬಲರಾಗುವಂತಹ ಉತ್ತಮ ಸಂಸ್ಥೆಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಭಾರತದಲ್ಲಿನ ಅಂತಾರಾಷ್ಟ್ರೀಯ ಶಾಲೆಗಳಿಗೆ ಜಾಗತಿಕವಾಗಿ ಮಾನದಂಡದ ಕ್ರೀಡಾ ಸಂಸ್ಕೃತಿಯನ್ನು ಸ್ಥಾಪಿಸುವಲ್ಲಿ ISSO ಅನ್ನು ಬೆಂಬಲಿಸುವುದು ಗೌರವವಾಗಿದೆ," ಎಂದು ಹೇಳಿದರು.
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಮತ್ತು ಇಂಟರ್ನ್ಯಾಷನಲ್ ಸ್ಕೂಲ್ ಸ್ಪೋರ್ಟ್ ಫೆಡರೇಶನ್ (ISF) ನಂತಹ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳೊಂದಿಗಿನ ISSOನ ಸಹಯೋಗವು ಭಾರತೀಯ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ. ಅದರ ವಿಶೇಷ ವಿಭಾಗವಾದ ಇಂಟರ್ನ್ಯಾಷನಲ್ ಬೋರ್ಡ್ ಸ್ಕೂಲ್ ಸ್ಪೋರ್ಟ್ಸ್ ಆರ್ಗನೈಸೇಶನ್ (IBSO) ಮೂಲಕ, ISSO ಸಾವಿರಾರು ವಿದ್ಯಾರ್ಥಿಗಳು SGFI ನ್ಯಾಷನಲ್ಸ್, ಖೇಲೋ ಇಂಡಿಯಾ ಗೇಮ್ಸ್, ಸುಬ್ರೋಟೊ ಕಪ್ ಮತ್ತು ISF ವಿಶ್ವ ಚಾಂಪಿಯನ್‌ಶಿಪ್‌ನಂತಹ ಮಟ್ಟದಕ್ಕೆ ತಲುಪಿ ಸಾಧನೆ ಮಾಡಲು ಸಹಾಯ ಮಾಡಿದೆ.
ಅದಾನಿ ಇಂಟರ್ನ್ಯಾಷನಲ್ ಸ್ಕೂಲ್-ISSO ಸಹಯೋಗವು ಪಾರದರ್ಶಕ ಮತ್ತು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಸ್ಪರ್ಧೆಗಳ ಮೇಲೆ ಹೆಚ್ಚು ಗಮನಹರಿಸುತ್ತದೆ. ಇದು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವುದಕ್ಕೆ ಸಹಕಾರಿ ಆಗುವುದಲ್ಲದೆ, ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಪ್ರವೇಶಕ್ಕೂ ಸಹಾಯ ಮಾಡುತ್ತದೆ. ಈ ಸಹಯೋಗವು ISSOನ ಮುಂದಿನ ಹಂತದ ಬೆಳವಣಿಗೆಯನ್ನು ವೇಗಗೊಳಿಸಲು ಸಜ್ಜಾಗಿದೆ. ಅಂತಾರರಾಷ್ಟ್ರೀಯ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡೆ ಎರಡರಲ್ಲೂ ಸಾಧಿಸುಬವಂತೆ ಮಾಡಲು ಕೂಡ ತಯಾರಿ ನಡೆಸಿದೆ.












Click it and Unblock the Notifications