Adani Group: ಆಂಧ್ರ ಪ್ರದೇಶದಲ್ಲಿ ₹1,00,000 ಕೋಟಿ ಹೂಡಿಕೆ ಮಾಡಲಿದೆ ಅದಾನಿ ಗ್ರೂಪ್
Adani Group: ಆಂಧ್ರ ಪ್ರದೇಶದ ವಿಶಾಖಪಟ್ಟಣ ನಗರದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಬಳಿಕ ಅದಾನಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಬೃಹತ್ ಮೊತ್ತಡ ಬಂಡವಾಳ ಹೂಡಿಕೆ ಘೋಷಿಸಿದೆ. ಮುಂದಿನ ಒಂದು ದಶಕದಲ್ಲಿ ₹1 ಲಕ್ಷ ಕೋಟಿ ಹೂಡಿಕೆಗೆ ಅದಾನಿ ಕಂಪನಿ ಪ್ಲಾನ್ ಮಾಡಿಕೊಂಡಿದೆ. ಇದು ರಾಜ್ಯದ ಅತಿದೊಡ್ಡ ದೀರ್ಘಕಾಲೀನ ಪಾಲುದಾರರ ಕಂಪನಿಗಳಲ್ಲಿ ಪ್ರಮುಖವಾಗಿದೆ.
ಆಂಧ್ರಪ್ರದೇಶದಲ್ಲಿ ಅದಾನಿ ಗ್ರೂಪ್‌ನ ಪ್ರಮುಖ ಹೂಡಿಕೆ ಮಾಡುತ್ತಿದೆ. ಕೇವಲ ಹತ್ತು ವರ್ಷಗಳಲ್ಲಿ ಬರೋಬ್ಬರಿ ₹1,00,000 ಕೋಟಿ ಹೂಡಿಕೆ ಮಾಡಲಿದೆ ಎಂದು ಕರಣ್ ಅದಾನಿ ಅವರು ಅಧಿಕೃತವಾಗಿ ಘೋಷಿಸಿದರು. ಅದಾನಿ ಗ್ರೂಪ್ ಈಗಾಗಲೇ ಬಂದರು, ಲಾಜಿಸ್ಟಿಕ್ಸ್, ಸಿಮೆಂಟ್, ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನಗಳಲ್ಲಿ ಈಗಾಗಲೇ ₹40,000 ಕೋಟಿ ಹೂಡಿಕೆ ಮಾಡಿದೆ. ಇದರೊಂದಿಗೆ ಹೊಸದಾಗಿ ಹೂಡಿಕೆ ಸಹ ಮಾಡಲಾಗುತ್ತದೆ. ಆಂಧ್ರ ರಾಜ್ಯವು ಕೇವಲ ಹೂಡಿಕೆಯ ತಾಣವಲ್ಲ. ದೇಶವನ್ನು ಭವಿಷ್ಯದಲ್ಲಿ ಮುನ್ನಡೆಸಲು ಸಿದ್ಧಗೊಳ್ಳುತ್ತಿರುವ 'ಲಾಂಚ್‌ಪ್ಯಾಡ್" ಎಂದು ಅವರು ಒತ್ತಿ ಹೇಳಿದರು.

ವಿಶಾಖಪಟ್ಟ್ಣದಲ್ಲಿ ಈಗಾಗಲೇ ಅದಾನಿ ಗ್ರೂಪ್ ಗೂಗಲ್ ಪಾಲುದಾರಿಕೆಯಲ್ಲಿ ಎಐ ಹಬ್ ಅಭಿವೃದ್ಧಿ ಯೋಜನೆಎ ಘೋಷಿಸಿದದೆ. 15 ಬಿಲಿಯನ್ ವೈಜಾಗ್ ಟೆಕ್ ಪಾರ್ಕ್‌ನ ಯೋಜನೆ ಘೋಷಣೆ ಆಗಿತ್ತು. ಈ ಯೋಜನೆಗಳು ಪ್ರಪಂಚದಲ್ಲೇ ಹಸಿರು-ಚಾಲಿತ ಹೈಪರ್‌ಸ್ಕೇಲ್ ಡೇಟಾ-ಸೆಂಟರ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಮಾಡುವ ಗುರಿ ಹೊಂದಲಾಗಿದೆ. ಅಷ್ಟೇ ಅಲ್ಲದೇ ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ಡಿಜಿಟಲ್ ಸಾರ್ವಭೌಮತ್ವವನ್ನು ಬಲಪಡಿಸುವತ್ತದೆ ಎಂದರು.
ಅದಾನಿ ಗ್ರೂಪ್‌ನ ಇತರ ಯೋಜನೆಗಳು ಈಗಾಗಲೇ ಆಂಧ್ರಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ. ಅದರಿಂದ ಒಂದು ಲಕ್ಷಕ್ಕೂ ಅಧೀಕ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಸಿಮೆಂಟ್, ಡೇಟಾ ಸೆಂಟರ್‌ಗಳು, ಇಂಧನ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಹೊಸ ಹೂಡಿಕೆ ಸಹ ಮಾಡಲಾಗುತ್ತಿದೆ. ಮುಂದಿನ ವರ್ಷ ಮತ್ತಷ್ಟು ಉದ್ಯೋಗ ನಿರ್ಮಾಣಗೊಳ್ಳಲಿವೆ.
ಆಂಧ್ರಪ್ರದೇಶದ ನಾಯಕತ್ವ ಶ್ಲಾಘಿಸಿದ ಕರಣ್
ಆಂಧ್ರಪ್ರದೇಶದಲ್ಲಿರುವ ರಾಜಕೀಯ ನಾಯಕತ್ವವನ್ನು ಉದ್ಯಮಿ ಕರಣ್ ಅದಾನಿ ಅವರು ಭಾರೀ ಪ್ರಶಂಸೆ ವ್ಯಕ್ತಪಡಿಸಿದರು, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು "ಸಂಸ್ಥೆ ಮತ್ತು ಆಂಧ್ರಪ್ರದೇಶದ ಸಿಇಒ" ಎಂದು ಅವರು ಬಣ್ಣಿಸಿದ್ದಾರೆ. ಆಂಧ್ರ ದಲ್ಲಿ ಪುನರುಜ್ಜೀವನಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ಇಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಿದ್ದಾರೆ ಎಂದು ಸಿಎಂ ನಾಯ್ಡುರ ಅಭಿವೃದ್ಧಿ ದೃಷ್ಟಿಕೋನಕ್ಕೆ ಬಗ್ಗೆ ಶ್ಲಾಘಿಸಿದರು.
ಐಟಿ ಮತ್ತು ಕೈಗಾರಿಕಾ ಸಚಿವ ನಾರಾ ಲೋಕೇಶ್ ಅವರ ಕಾರ್ಯ ಕೊಂಡಾಡಿದರು. ಇವರು "ಹೊಸ ಪೀಳಿಗೆಯ ನಾಯಕರಾಗಿದ್ದಾರೆ. ಚುರುಕುಬುದ್ಧಿಯ, ಡೇಟಾ-ಚಾಲಿತ ಮತ್ತು ಆಳವಾಗಿ ಮಾನವೀಯ ಉಳ್ಳವರು. ಆಡಳಿತದಲ್ಲಿ ಬದ್ಧತೆ ಹೊಂದಿದವರೆಂದು ಹೇಳಿದರು.
ಆಂಧ್ರದಿಂದ ಭಾರತದ ಅಭಿವೃದ್ಧಿಯ ಹಾದಿ
ಆಂಧ್ರ ಪ್ರದಶವು ಭಾರತದ 2047ರ ವಿಕಸಿತ ಭಾರತಕ್ಕೆ ಕೊಡುಗೆ ನಿಡುತ್ತದೆ. ಈ ಗುರಿಯಿಂದಲೇ ಸಾಕಷ್ಟು ತಯಾರಿಕೆ, ಪೂರಕ ವಾತಾವರಣ ಇಲ್ಲಿ ನಿರ್ಮಾಣವಾಗುತ್ತಿವೆ. ಈ ರಾಜ್ಯವು ರಾಷ್ಟ್ರದ ಅಭಿವೃದ್ಧಿ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಅದಾನಿ ಸಮೂಹವು ಆಂಧ್ರಪ್ರದೇಶ ರಾಜ್ಯದಲ್ಲಿ ಅತಿದೊಡ್ಡ ಹೂಡಿಕೆದಾರ ಆಗುವ ಗುರಿ ಇಟ್ಟುಕೊಂಡಿದೆ ಎಂದು ಅವರು ರಾಜ್ಯದ ಅಭವೃದ್ಧಿ ವೇಗದ ಬಗ್ಗೆ ಮಾತನಾಡಿದರು.












Click it and Unblock the Notifications