Adani Group: ಅದಾನಿ ಸಮೂಹದಿಂದ ಹೊಸ ಇತಿಹಾಸ ನಿರ್ಮಾಣ- ಒಟ್ಟು 86,789 ಕೋಟಿ ರೂಪಾಯಿ ಗಳಿಕೆ

ಅದಾನಿ ಸಮೂಹವು ದೇಶದ ಅತಿದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಾ ಜಾಗತಿಕ ಮಟ್ಟದಲ್ಲೂ ಭಾರತದ ಕೀರ್ತಿಯನ್ನು ಮತ್ತಷ್ಟು ಮೇಲಕ್ಕೆ ಏರಿಸುತ್ತಿದೆ. ಸಂಸ್ಥೆಯ ಬೆಳವಣಿಗೆ ಜೊತೆಯಲ್ಲೇ ಭಾರತದ ಅಭಿವೃದ್ಧಿಗೂ ಅದಾನಿ ಸಮೂಹ ಬಲ ತುಂಬುತ್ತಿದ್ದು, ಇದೀಗ ಅದಾನಿ ಗ್ರೂಪ್ ಮತ್ತೆ ತನ್ನ ಆರ್ಥಿಕ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನ ಪ್ರದರ್ಶಿಸಿದೆ. ಭಾರತದ ಮೂಲಸೌಕರ್ಯ ವಲಯದಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ.

ಡಿಸೆಂಬರ್ 2024ಕ್ಕೆ ಅಂತ್ಯವಾಗಿರುವ ಹನ್ನೆರಡು ತಿಂಗಳ ಸಾಧನೆಯಲ್ಲಿ ಅದಾನಿ ಸಮೂಹವು 86,789 ಕೋಟಿ ರೂಪಾಯಿ ದಾಖಲೆಯ ಇಬಿಐಟಿಡಿಎ (EBITDA) ಸಾಧಿಸಿದೆ. ವರ್ಷದಿಂದ ವರ್ಷಕ್ಕೆ ಇದು 10.1% ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಡಿಸೆಂಬರ್ ತ್ರೈಮಾಸಿಕದಲ್ಲಿ 17.2% ಗಮನಾರ್ಹ ಬೆಳವಣಿಗೆ ಕಂಡುಬಂದಿದ್ದು, 22,823 ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ಆದಾಯಕ್ಕೆ ಹೋಲಿಸಿದರೆ ಇಬಿಐಟಿಡಿಎ ಬೆಳವಣಿಗೆ ದರ ಶೇಕಡಾ 21.3 ರಷ್ಟಿದ್ದು, ಅದಾನಿ ಸಮೂಹ ಸಂಸ್ಥೆಗಳ ಸ್ಥಿರವಾದ ಅಭಿವೃದ್ಧಿಯನ್ನು ಇದು ತೋರಿಸುತ್ತದೆ.

Adani Group Achieves Record Growth With Rs 86 789 Crore EBITDA

ಅದಾನಿ ಎಂಟರ್‌ಪ್ರೈಸಸ್ ಸಾಧನೆ ಅಪಾರ

ಈ ಬೆಳವಣಿಗೆಯ ಪ್ರಮುಖ ಬಲವಾಗಿ ಅದಾನಿ ಎಂಟರ್‌ಪ್ರೈಸಸ್ (AEL) ಗುರುತಿಸಿಕೊಂಡಿದೆ. ಸೌರ ಶಕ್ತಿ ಮತ್ತು ಪವನ ಶಕ್ತಿ ಕ್ಷೇತ್ರವೂ ಸೇರಿದಂತೆ ವಿಮಾನ ನಿಲ್ದಾಣಗಳು ಮತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಅದಾನಿ ಎಂಟರ್‌ಪ್ರೈಸಸ್ ಅಡಿಯಲ್ಲಿ ಗುರುತಿಸಿಕೊಂಡಿದೆ. ಅದಾನಿ ಸಮೂಹ ಸಂಸ್ಥೆಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಮುಂಚೂಣಿಯಲ್ಲಿ ಇದ್ದು, ಕಳೆದ 12 ತಿಂಗಳಲ್ಲಿ ಶೇ. 33.3 ರಷ್ಟು ಬೆಳೆವಣಿಗೆ ಸಾಧಿಸಿದೆ. ಹಾಗೂ Q3FY25 ರಲ್ಲಿ ವರ್ಷಕ್ಕೆ ಶೇಕಡಾ 45 ರಷ್ಟು ಬೆಳವಣಿಗೆ ಹೊಂದುತ್ತಿದೆ. ಆಧುನಿಕ ಭಾರತದ ಮೂಲ ಸೌಕರ್ಯ ಕ್ಷೇತ್ರದಲ್ಲಿ ಈ ಮೂಲಕ ತನ್ನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ.

2024ರ ಸೆಪ್ಟೆಂಬರ್ 30ರ ಹೊತ್ತಿಗೆ ಅದಾನಿ ಸಮೂಹವು 53,024 ಕೋಟಿ ರೂಪಾಯಿಯಷ್ಟು ನಗದು ಬಾಕಿ ಹೊಂದಿದ್ದು, ಮುಂದಿನ 28 ತಿಂಗಳಲ್ಲಿ ಸಾಲ ಬಾಧ್ಯತೆ ಪೂರೈಸಲು ಸಾಕಷ್ಟು ದ್ರವ್ಯತೆ ಸಂಗ್ರಹಿಸುತ್ತಿದೆ. ಈ ಮೂಲಕ ಅದಾನಿ ಗ್ರೂಪ್‌ನ ಆರ್ಥಿಕ ಶಿಸ್ತಿಗೆ ಬದ್ಧತೆಯು ಅದರ ಬಲವಾದ ನಗದು ಮೀಸಲು ಮೂಲಕ ಸ್ಪಷ್ಟವಾಗಿದೆ. ಈ ಅಂಕಿ ಅಂಶ ಅದಾನಿ ಸಮೂಹದ ಒಟ್ಟು ಸಾಲದ 20.5% ಅನ್ನು ಪ್ರತಿನಿಧಿಸುತ್ತದೆ.

5.53 ಲಕ್ಷ ಕೋಟಿ ರೂಪಾಯಿಗೆ ವಿಸ್ತರಣೆ

ಅದಾನಿ ಸಮೂಹದ ಆಸ್ತಿ ಮೂಲವನ್ನು 3 ದಶಕಗಳ ಕಾರ್ಯತಂತ್ರದ ಮೂಲಕ 5.53 ಲಕ್ಷ ಕೋಟಿ ರೂಪಾಯಿಗೆ ವಿಸ್ತರಣೆ ಮಾಡಲಾಗಿದೆ. ಒಟ್ಟು ಸಾಲ 2.58 ಲಕ್ಷ ಕೋಟಿ ರೂಪಾಯಿ ಆಗಿದ್ದು, ನಿವ್ವಳ ಸಾಲವು 2.05 ಲಕ್ಷ ಕೋಟಿ ರೂಪಾಯಿ ಆಗಿದೆ. ಹೀಗೆ ಜವಾಬ್ದಾರಿಯುತ ಹತೋಟಿ ನಿರ್ವಹಣೆಯನ್ನ ಪ್ರದರ್ಶಿಸುತ್ತಿದೆ. FY25 ರ ಮೊದಲಾರ್ಧದಲ್ಲಿ ಒಟ್ಟು ಆಸ್ತಿ ಮತ್ತು ನಿವ್ವಳ ಸಾಲ ಅನುಪಾತ 2.7 ಪಟ್ಟು ಸುಧಾರಿಸಿದೆ, ಇದು ಹಿಂದಿನ ವರ್ಷದಲ್ಲಿ 2.63 ಪಟ್ಟು ಹೆಚ್ಚಾಗಿರುವುದು ಗಮನಾರ್ಹ.

ಅದಾನಿ ಸಮೂಹದ ಹೆಚ್ಚು ಸ್ಥಿರವಾದ ಮೂಲಸೌಕರ್ಯ ಬಂಡವಾಳವು ಒಟ್ಟು EBITDA ಗೆ ಶೇಕಡಾ 84 ರಷ್ಟು ಕೊಡುಗೆ ನೀಡುತ್ತದೆ. ವಿದ್ಯುತ್, ಗ್ರೀನ್ ಎನರ್ಜಿ, ಬಂದರುಗಳ ನಿವರ್ಹಣೆ ಮತ್ತು ಸಾರಿಗೆಯಂತಹ ಪ್ರಮುಖ ವಲಯಗಳಲ್ಲಿ ಅತ್ಯಧಿಕ ಅಭಿವೃದ್ಧಿ ಸಾಧಿಸಲಾಗಿದೆ. ಹಾಗೂ ಅದಾನಿ ಸಮೂಹ ಸಂಸ್ಥೆಗಳಲ್ಲಿ ಅದಾನಿ ಪೋರ್ಟ್ಸ್ & ಎಸ್‌ಇಝೆಡ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಾನಿ ಎನರ್ಜಿ ಸೊಲ್ಯೂಷನ್ಸ್ & ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳು ಈ ಮೂಲಕ ಅದಾನಿ ಗ್ರೂಪ್‌ನ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

8 ಲಕ್ಷ ಕೋಟಿ ರೂಪಾಯಿ ಹೂಡಿಕೆ

ಇಷ್ಟೆಲ್ಲಾ ಅಭಿವೃದ್ಧಿಯ ಜೊತೆ ಅದಾನಿ ಸಮೂಹವು ಮಹತ್ವಾಕಾಂಕ್ಷೆಯ ಹೂಡಿಕೆ ಯೋಜನೆ ರೂಪಿಸಿದೆ. ಮುಂದಿನ ದಶಕದಲ್ಲಿ $100 ಶತಕೋಟಿ ಅಮೆರಿಕನ್ ಡಾಲರ್, ಎಂದರೆ ಸುಮಾರು 8 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಬಂಡವಾಳ ವೆಚ್ಚವನ್ನ ಮಾಡಲಿದೆ. ಹೂಡಿಕೆಯನ್ನು ಪ್ರಾಥಮಿಕವಾಗಿ ಅದಾನಿ ಎಂಟರ್‌ಪ್ರೈಸಸ್ ನಡೆಸಲಿದ್ದು, ಗ್ರೀನ್ ಹೈಡ್ರೋಜನ್, ವಿಮಾನ ನಿಲ್ದಾಣಗಳು ಮತ್ತು ನವೀಕರಿಸಬಹುದಾದ ಇಂಧನದಂತಹ ಪ್ರವರ್ತಕ ವಲಯಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ವಿಸ್ತೃತ ದೃಷ್ಟಿಕೋನಕ್ಕೆ ಪ್ರಮುಖ ಕೊಡುಗೆ ನೀಡುವಲ್ಲಿ ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಮತ್ತು ಅದಾನಿ ಬಂದರುಗಳು ಮತ್ತು SEZ ಸೇರಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಅದಾನಿ ಸಮೂಹವು ಬಹು ವಲಯಗಳಲ್ಲಿ ತನ್ನ ಸಾಮರ್ಥ್ಯ ಬಳಸಿಕೊಂಡು ಬೆಳವಣಿಗೆ ಸಾಧಿಸುತ್ತಿದೆ. ಈ ಮೂಲಕ ಭಾರತದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತಿದೆ. ಹಾಗೂ ಅದಾನಿ ಸಮೂಹದ ಈ ಬೆಳವಣಿಗೆ ಭವಿಷ್ಯದಲ್ಲೂ ಇದೇ ರೀತಿ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+