Adani: ಅದಾನಿ ಕಂಪನಿಯ ₹1000 ಎನ್‌ಸಿಡಿ ಹಂಚಿಕೆ 45 ನಿಮಿಷದಲ್ಲಿ ಪೂರ್ಣ, ದಾಖಲೆ
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಕಂಪನಿಯು ಇತ್ತೀಚೆಗೆ ಘೋಷಿಸಿದಂತೆ ಸಾರ್ವಜನಿಕ ಪರಿವರ್ತನೀಯವಲ್ಲದೇ ಡಿಬೆಂಚರ್‌ಗಳ (NCD) ವಿತರಣೆಯನ್ನು ಆರಂಭಿಸಿತ್ತು. 1,000 ಕೋಟಿ ರೂಪಾಯಿ ಮೌಲ್ಯದ ಎನ್‌ಸಿಡಿ ವಿತರಣೆ ಆರಂಭಿಸಿದ ಕೇವಲ 45 ನಿಮಿಷಗಳಲ್ಲಿ ಮುಕ್ತಾಯಗೊಂಡವು. ತ್ವರಿತವಾಗಿ ಎನ್‌ಸಿಡಿ ಚಂದಾದಾರಿಕೆ ಪೂರ್ಣಗೊಂಡಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ವರದಿ ತಿಳಿಸಿದೆ.
ಎನ್‌ಸಿಡಿ ವಿತರಣೆ ಆರಂಭದ ಮೊದಲ ಹತ್ತು ನಿಮಿಷದಲ್ಲಿ 500 ಕೋಟಿ ರೂಪಾಯಿಗಳ ಡಿಬೆಂಚರ್ ಪೂರ್ಣಗೊಂಡವು. ಗ್ರೀನ್‌ಶೂ ಆಯ್ಕೆಯನ್ನು ಸೇರಿಸುವ ಮೂಲಕ ಚಂದಾದಾರಿಕೆಯು 1,000 ಕೋಟಿ ರೂಪಾಯಿಗಳನ್ನು ಬಹುಬೇಗನೆ ದಾಟಿತು. ಒಂದು ಗಂಟೆಯೊಳಗೆ ಈ ವಿತರಣೆ ಪೂರ್ಣಗೊಂಡು ದಾಖಲೆ ನಿರ್ಮಿಸಿತು. ಈ ಮೂಲಕ ಅದಾನಿ ಎನ್‌ಸಿಡಿಗಳು ತ್ವರಿತ ಚಂದಾದಾರಿಕೆಗಳನ್ನು ಪಡೆಯುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.

ಜನವರಿ 6ರಂದು ಮಂಗಳವಾರ ಪ್ರಾರಂಭವಾದ ಈ ಎನ್‌ಸಿಡಿ ವಿತರಣೆಯು ಜನವರಿ 19ಕ್ಕೆ ಕೊನೆಗೊಳ್ಳಲಿದೆ. ಮೊದಲು ಬಂದವರಿಗೆ ಆದ್ಯತೆ ಎಂದು ತಿಳಿಸಿದ್ದ ಕಂಪನಿಯು ಅದರಂತೆ ಹಂಚಿಕೆ ಮಾಡಿತು. ಇದು ವಾರ್ಷಿಕ 8.90 ಪ್ರತಿಶತದಷ್ಟು ಪರಿಣಾಮಕಾರಿ ವಹೀವಾಟು ತಂದುಕೊಡಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
500 ಕೋಟಿ ರೂ. ಮೂಲ ಗಾತ್ರ ಹೊಂದಿದ್ದು, ಹೆಚ್ಚುವರಿ 500 ಕೋಟಿ ರೂಪಾಯಿಗಳ ಗ್ರೀನ್ ಶೂ ಆಯ್ಕೆ ಒಳಗೊಂಡಿತ್ತು. ಎನ್‌ಸಿಡಿಗಳನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಮತ್ತು ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (NSE) ನಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಲಾಯಿತು. ICRA ಮತ್ತು CARE ರೇಟಿಂಗ್‌ಗಳಿಂದ ಎಎ ರೇಟಿಂಗ್ ಪಡೆದ ಎನ್‌ಸಿಟಿಗಳು ಸಾಲ ಮತ್ತು ಸ್ಥಿರ ಠೇವಣಿಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ವಹೀವಾಟು, ಲಾಭ ತಂದು ಕೊಡಲಿವೆ. ಮುಖ್ಯವಾಗಿ ಇದು ಚಿಲ್ಲರೆ ಹೂಡಿಕೆದಾರರನ್ನು ಭಾಗವಹಿಸುವಂತೆ ಮಾಡಿತು.
ಜುಲೈ 2025 ರಲ್ಲಿ ಅದಾನಿ ಕಂಪನಿಯ ಎರಡನೇ ಎನ್‌ಸಿಡಿ ವಿತರಣೆಯು ಕೇವಲ ಮೂರು ಗಂಟೆಗಳಲ್ಲಿ ಸಂಪೂರ್ಣ ಚಂದಾದಾರಿಕೆ ಪಡೆದುಕೊಂಡು ಮುಕ್ತಾಯವಾಗಿತ್ತು. ಇದು ಕಂಪನಿಯ ಮೇಲಿನ ಬಲವಾದ ಹೂಡಿಕೆದಾರರ ವಿಶ್ವಾಸವನ್ನು ಸಂಕೇತಿಸುತ್ತದೆ. ಸಂಚಿಕೆಯ ಕನಿಷ್ಠ 75 ರಷ್ಟು ಆದಾಯವನ್ನು ಅಸ್ತಿತ್ವದಲ್ಲಿರುವ ಸಾಲ ಮರು ಪಾವತಿಗೆ ಬಳಕೆ ಮಾಡಲಾಗುತ್ತದೆ. ಉಳಿದ ಹಣವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಬಹುದೆಂದು ವರದಿ ತಿಳಿಸಿದೆ.
ತ್ರೈಮಾಸಿಕ, ವಾರ್ಷಿಕ ಮತ್ತು ಸಂಚಿತ ಬಡ್ಡಿ ಪಾವತಿ ಆಯ್ಕೆಯೊಂದಿಗೆ ಎನ್‌ಸಿಡಿಗಳು 24, 36 ಮತ್ತು 60 ತಿಂಗಳ ಅವಧಿಗೆ ಲಭ್ಯವಿವೆ. ಅದಾನಿ ಕಂಪನಿ ಮೂಲಸೌಕರ್ಯ ಜಾಲ ವಿಸ್ತರಣೆ ಮಾಡಲು ಮುಂದಾಗಿದೆ. ಅದರ ಭಾಗವಾಗಿಯೇ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೇಲಿನ ಹೂಡಿಕೆ ಮಾಡಿದೆ. ವಿಶಾಖಪಟ್ಟಣದಲ್ಲಿರುವ ಎಐ ಡೇಟಾ ಸೆಂಟರ್ ಕ್ಯಾಂಪಸ್ ಗಾಗಿ ಗೂಗಲ್ ಜೊತೆ ಪಾಲುದಾರಿಕೆ ಹೊಂದಿದೆ.
ಈ ಹಂಚಿಕೆಯಲ್ಲಿ ಪ್ರಮುಖ ವ್ಯವಸ್ಥಾಪಕರು ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್, ಟ್ರಸ್ಟ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಮತ್ತು ಟಿಪ್ಸನ್ಸ್ ಕನ್ಸಲ್ಟೆನ್ಸಿ ಸರ್ವೀಸಸ್ ಸೇರಿವೆ. ಕಳೆದ ಆರು ತಿಂಗಳುಗಳಲ್ಲಿ, ಎಇಎಲ್ ದೊಡ್ಡ ಪ್ರಮಾಣದ ಯೋಜನೆಗಳನ್ನು ಸಾಕಾರಗೊಳಿಸುವ ವಿಶ್ವಾಸ ಹೊಂದಿದೆ. ನವಿ ಮುಂಬೈ ಏರ್‌ಪೋರ್ಟ್ 2025 ಅಕ್ಟೋಬರ್ 8ರಂದು ಉದ್ಘಾಟಿಸಲಾಗಿತ್ತು. ಅದೇ ವರ್ಷ ಡಿಸೆಂಬರ್ 25 ಕಾರ್ಯಾಚರಣೆಗೆ ತರಲಾಯಿತು. ಇದರ ಬೆನ್ನಲ್ಲೆ ಗೂಗಲ್ ಮತ್ತು ಅದಾನಿ ಕಂಪನಿ ವಿಶಾಖಪಟ್ಟಣದಲ್ಲಿ ದೇಶದ ಬೃಹತ್ ಎಐ ಡೇಟಾ ಸೆಂಟರ್ ಕ್ಯಾಂಪಸ್ ಯೋಜನೆ ಅನ್ನು ಜಂಟಿಯಾಗಿ ಘೋಷಿಸಿದವು.












Click it and Unblock the Notifications