Get Updates
Get notified of breaking news, exclusive insights, and must-see stories!

Adani Enterprises: H1 FY26 ಫಲಿತಾಂಶ ಪ್ರಕಟಿಸಿದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್

Adani Enterprises: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ FY26 ವರ್ಷದಲ್ಲಿ ಬಲವಾದ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಇದು ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು AI ಡೇಟಾ ಸೆಂಟರ್ ಪಾಲುದಾರಿಕೆಗಳು ಸೇರಿದಂತೆ ಮೂಲಸೌಕರ್ಯ ಯೋಜನೆಗಳಲ್ಲಿ ಗಮನಾರ್ಹ ಆದಾಯ ಬೆಳವಣಿಗೆ ಮತ್ತು ಕಾರ್ಯತಂತ್ರದ ಹೂಡಿಕೆಗಳಲ್ಲಿನ ಪ್ರಗತಿಯನ್ನು ತೋರಿಸುತ್ತದೆ.

44,281 ಕೋಟಿ ರೂಪಾಯಿ ಆದಾಯ 7,688 ಕೋಟಿ ರೂಪಾಯಿ EBITDA 2,281 ಕೋಟಿ ಮೊತ್ತದ PBT ಹಾಗೂ 3,583 ಕೋಟಿ ರೂಪಾಯಿ ಮೊತ್ತದ ಅಸಾಧಾರಣ ಲಾಭವನ್ನು ಹೊರತುಪಡಿಸಿ. AAHL ವಿಮಾನ ನಿಲ್ದಾಣಗಳ EBITDA ವರ್ಷದಿಂದ ವರ್ಷಕ್ಕೆ 51% ರಷ್ಟು ಹೆಚ್ಚಾಗಿದೆ. ಅಲ್ಲದೇ ಈ ಮೊತ್ತವು 2,157 ಕೋಟಿ ರೂಪಾಯಿಗೆ ತಲುಪಿದೆ. ವಿಮಾನ ನಿಲ್ದಾಣಗಳ ವ್ಯವಹಾರವು ಈಗ 1,000+ ಕೋಟಿಗಳ ತ್ರೈಮಾಸಿಕ ರನ್-ರೇಟ್‌ನಲ್ಲಿ ಟ್ರ್ಯಾಕ್ ಆಗಿದೆ.

Adani Enterprises Ltd announces H1 FY26 results

ಅದಾನಿ ಎಂಟರ್‌ಪ್ರೈಸಸ್ FY26 ಹಣಕಾಸು ಫಲಿತಾಂಶಗಳು ಮತ್ತು ಹೂಡಿಕೆಗಳು

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ FY26 ಗಾಗಿ ಬಲವಾದ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು AI ಡೇಟಾ ಸೆಂಟರ್ ಪಾಲುದಾರಿಕೆಗಳು ಸೇರಿದಂತೆ ಮೂಲಸೌಕರ್ಯ ಯೋಜನೆಗಳಲ್ಲಿ ಗಮನಾರ್ಹ ಆದಾಯ ಬೆಳವಣಿಗೆ ಮತ್ತು ಕಾರ್ಯತಂತ್ರದ ಹೂಡಿಕೆಗಳನ್ನು ಇದು ಒಳಗೊಂಡಿದೆ ಎಂದು ಹೇಳಲಾಗಿದೆ.

ಇನ್ನು ಗ್ರೀನ್‌ಫೀಲ್ಡ್ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಕ್ಟೋಬರ್ 08, 2025 ರಂದು ಉದ್ಘಾಟನೆಯಾಗಿದೆ. Q3 FY26 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ನಾನಾಸಾ-ಪಿಡ್ಗಾಂವ್ ಯೋಜನೆಗೆ PCOD ಪಡೆಯಲಾಗಿದೆ. ಅಲ್ಲದೇ AEL ಈಗ 7 ಕಾರ್ಯಾಚರಣೆಯ ಸ್ವತ್ತುಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಹೊಸ ಹೂಡಿಕೆಗಳು

ರಸ್ತೆಗಳು ಹಾಗೂ ನೀರಿನ ಉದ್ಯಮಗಳಲ್ಲಿ ಭಾರೀ ಮೊತ್ತದ ಹೂಡಿಕೆ ಮಾಡಲಾಗಿದೆ. 19,982 ಕೋಟಿ ರೂಪಾಯಿಗಳ ಸಂಚಿತ ಆರ್ಡರ್ ಪುಸ್ತಕದೊಂದಿಗೆ LoA ಪಡೆಯಲಾಗಿದೆ. ವಿಶಾಖಪಟ್ಟಣಂನಲ್ಲಿ ಭಾರತದ ಅತಿದೊಡ್ಡ AI ಡೇಟಾ ಸೆಂಟರ್ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಲು ಅದಾನಿ ಕನೆಕ್ಸ್ Google ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ಬಂಡವಾಳ ನಿರ್ವಹಣೆ

ಮುಂದಿನ ಹಂತದ ಇನ್ಕ್ಯುಬೇಶನ್ ಅನ್ನು ಬೆಂಬಲಿಸಲು ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಮತ್ತಷ್ಟು ಬಲಪಡಿಸಲು AEL ಮಂಡಳಿಯು 25,000 ಕೋಟಿ ರೂಪಾಯಿಗಳ ಭಾಗಶಃ ಪಾವತಿಸಿದ ಹಕ್ಕುಗಳ ವಿತರಣೆಯನ್ನು ಅನುಮೋದಿಸಿದೆ. ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL), ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಫಲಿತಾಂಶಗಳನ್ನು ಇಂದು ಪ್ರಕಟಿಸಿದೆ.

AEL ತ್ರೈಮಾಸಿಕದಲ್ಲಿ ದೊಡ್ಡ ಪ್ರಮಾಣದ ಯೋಜನೆಗಳನ್ನು ನಿರ್ದಿಷ್ಟ ಸಮಯದಲ್ಲಿ ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ತನ್ನ ಪ್ರಮುಖ ಅವಕಾಶಗಳನ್ನು ದೃಢೀಕರಿಸಿದೆ. ಗ್ರೀನ್‌ಫೀಲ್ಡ್ ನವಿ ಮುಂಬೈ ವಿಮಾನ ನಿಲ್ದಾಣದ ಉದ್ಘಾಟನೆ ಮತ್ತು ಅದರ 7 ನೇ ರಸ್ತೆ ಯೋಜನೆಯ ಪೂರ್ಣಗೊಳಿಸುವಿಕೆಯು AELನ ಬಹು ಮುಖ್ಯ ಯೋಜನೆಗಳಾಗಿದ್ದು, ಈ ಯೋಜನೆಗಳನ್ನು ಕಾರ್ಯಗತಗೊಳಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ.

ಈ ಹೊಸ ಮೈಲಿಗಲ್ಲುಗಳು ನಮ್ಮ ವೈವಿಧ್ಯಮಯ ಮಾದರಿಯನ್ನು ಬಲಪಡಿಸುತ್ತವೆ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಮೂಲಸೌಕರ್ಯವನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ಉದಯೋನ್ಮುಖ ಪ್ರಮುಖ ಮೂಲಸೌಕರ್ಯ ವ್ಯವಹಾರಗಳು ವರ್ಷದಿಂದ ವರ್ಷಕ್ಕೆ 5% ಹೆಚ್ಚಳದೊಂದಿಗೆ 5,470 ಕೋಟಿ ರೂಪಾಯಿಗಳ ಅರ್ಧ-ವಾರ್ಷಿಕ EBITDA ಅನ್ನು ದಾಖಲಿಸಿವೆ ಮತ್ತು ಈಗ ಒಟ್ಟು EBITDA ಗೆ 71% ಕೊಡುಗೆ ನೀಡುತ್ತಿವೆ ಎಂದು ಸಂಸ್ಥೆ ಹೇಳಿದೆ.

ಮುಂದುವರಿದು "ಶಿಸ್ತುಬದ್ಧ ಕಾರ್ಯಗತಗೊಳಿಸುವಿಕೆ ಮತ್ತು ಕಾರ್ಯತಂತ್ರದ ವೈವಿಧ್ಯೀಕರಣದೊಂದಿಗೆ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಭಾರತದ ಪರಿವರ್ತನಾ ಮೂಲಸೌಕರ್ಯ ಮತ್ತು ಇಂಧನ ವ್ಯವಹಾರಗಳ ಪ್ರಮುಖ ಇನ್ಕ್ಯುಬೇಟರ್ ಆಗಿ ತನ್ನ ಸ್ಥಾನವನ್ನು ಬಲಪಡಿಸುವುದನ್ನು ಮುಂದುವರೆಸಿದೆ" ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಶ್ರೀ ಗೌತಮ್ ಅದಾನಿ ಹೇಳಿದ್ದಾರೆ.

"ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯು ಭಾರತದ ಮೂಲಸೌಕರ್ಯ ಕಥೆಯಲ್ಲಿ ಒಂದು ನಿರ್ಣಾಯಕ ಕ್ಷಣವನ್ನು ಗುರುತಿಸುತ್ತದೆ ಮತ್ತು ರಾಷ್ಟ್ರೀಯ ಬೆಳವಣಿಗೆಯ ವೇಗವರ್ಧಕವಾಗಿ AEL ನ ಪಾತ್ರವನ್ನು ಬಲಪಡಿಸುತ್ತದೆ. ವಿಮಾನ ನಿಲ್ದಾಣಗಳು, ಡೇಟಾ ಕೇಂದ್ರಗಳು ಮತ್ತು ರಸ್ತೆಗಳಲ್ಲಿ ನಮ್ಮ ಬಲವಾದ ಕಾರ್ಯಕ್ಷಮತೆಯು ನಮ್ಮ ಪ್ರಮುಖ ಮೂಲಸೌಕರ್ಯ ಪೋರ್ಟ್ಫೋಲಿಯೊದ ಪ್ರಗತಿಯ ಸಂಕೇತವಾಗಿದೆ.

ಭಾರತದ ಅತಿದೊಡ್ಡ AI ಡೇಟಾ ಕೇಂದ್ರಕ್ಕಾಗಿ Google ನೊಂದಿಗೆ ಪಾಲುದಾರಿಕೆ ಮತ್ತು ನಮ್ಮ ಗೀನ್‌ ಎನರ್ಜಿ ಪರಿಸರ ವ್ಯವಸ್ಥೆಯಲ್ಲಿ ತ್ವರಿತ ಪ್ರಗತಿಯೊಂದಿಗೆ, AEL ಸುಸ್ಥಿರ, ತಂತ್ರಜ್ಞಾನ-ಚಾಲಿತ ಭವಿಷ್ಯದತ್ತ ಭಾರತದ ಪರಿವರ್ತನೆಯನ್ನು ವೇಗಗೊಳಿಸುತ್ತಿದೆ. ನಮ್ಮ ಪಾಲುದಾರರಿಗೆ ಶಾಶ್ವತ ಮೌಲ್ಯವನ್ನು ಸೃಷ್ಟಿಸುವ ಮತ್ತು ಸ್ವಾವಲಂಬಿ ಭಾರತದ ಅಡಿಪಾಯವನ್ನು ಬಲಪಡಿಸುವ ಜಾಗತಿಕವಾಗಿ ಸ್ಪರ್ಧಾತ್ಮಕ ವ್ಯವಹಾರಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ." ಎಂದು ಹೇಳಲಾಗಿದೆ.

ವ್ಯವಹಾರ ನವೀಕರಣಗಳು

ಅದಾನಿ ನ್ಯೂ ಇಂಡಸ್ಟ್ರೀಸ್ (ANIL - ಗ್ರೀನ್ ಹೈಡ್ರೋಜನ್ ಇಕೋಸಿಸ್ಟಮ್)

ಮಾಡ್ಯೂಲ್ ಮಾರಾಟವು ಪ್ರತಿ ತ್ರೈಮಾಸಿಕಕ್ಕೆ 1 GW ವರೆಗೆ ಮುಂದುವರೆದಿದೆ. ಹಲವು ವರ್ಷಗಳ ಅನುಭವದ ಆಧಾರದ ಮೇಲೆ H1 FY26 ರಲ್ಲಿ ದೇಶೀಯ ಮಾರಾಟವು 43% ರಷ್ಟು ಹೆಚ್ಚಾಗಿದೆ. ಹೆಚ್ಚುವರಿ 6 GW ಸೆಲ್ ಮತ್ತು ಮಾಡ್ಯೂಲ್ ಲೈನ್‌ಗಳ ನಿರ್ಮಾಣವು ವೇಳಾಪಟ್ಟಿಯ ಪ್ರಕಾರ ಪ್ರಗತಿಯಲ್ಲಿದೆ. ANIL ವಿಂಡ್ ವಿಭಾಗವು ಅಪೆಕ್ಸ್ ಇಂಡಿಯಾ ಸೇಫ್ಟಿ ಅವಾರ್ಡ್ 2025 ರಲ್ಲಿ "ಗೋಲ್ಡ್ ಅವಾರ್ಡ್" ಅನ್ನು ಪಡೆದುಕೊಂಡಿದೆ.

AdaniConnex Pvt Ltd (ACX - ಡೇಟಾ ಸೆಂಟರ್)

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭಾರತದ ಅತಿದೊಡ್ಡ AI ಡೇಟಾ ಸೆಂಟರ್ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಲು Google ನೊಂದಿಗೆ ಪಾಲುದಾರಿಕೆ ಹೊಂದಲಾಗಿದೆ. ಹೈದರಾಬಾದ್ ಡೇಟಾ ಸೆಂಟರ್ ಹಂತ II MEP ಕೆಲಸಗಳು ~96% ಪೂರ್ಣಗೊಂಡಿವೆ · ಪುಣೆ ಡೇಟಾ ಸೆಂಟರ್ ಹಂತ I ಮತ್ತು II ಕೆಲಸಗಳು ~90% ದಾಟಿದೆ.

Adani Water Ltd (AWL - ವಾಟರ್)

ಎರಡು ಹೊಸ ಯೋಜನೆಗಳಿಗೆ ಪ್ರಶಸ್ತಿ ಪತ್ರವನ್ನು ಸ್ವೀಕರಿಸಲಾಗಿದೆ. o ಬ್ರಹ್ಮಣಿ ನದಿಗೆ ಅಡ್ಡಲಾಗಿ ಬ್ರಹ್ಮಣಿ ಬ್ಯಾರೇಜ್ ನಿರ್ಮಿಸಿ ನಿರ್ವಹಿಸಿ o ಮೋರ್ ಸಾಗರ್ ಕೃತಕ ಜಲಾಶಯ ನಿರ್ಮಿಸಿ ನಿರ್ವಹಿಸಲಾಗುತ್ತಿದೆ.

ಅದಾನಿ ವಿಮಾನ ನಿಲ್ದಾಣ ಹೋಲ್ಡಿಂಗ್ಸ್ ಲಿಮಿಟೆಡ್ (AAHL - ವಿಮಾನ ನಿಲ್ದಾಣಗಳು)

ಗ್ರೀನ್‌ಫೀಲ್ಡ್ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಕ್ಟೋಬರ್ 08, 2025 ರಂದು ಉದ್ಘಾಟನೆಗೊಂಡಿದೆ. ಇದು ಭಾರತದ ವಾಯುಯಾನ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು ಎಂದೇ ಹೇಳಲಾಗಿದೆ. Q3 FY26 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಅಲ್ಲದೇ ತ್ರೈಮಾಸಿಕದಲ್ಲಿ 7 ಹೊಸ ಮಾರ್ಗಗಳು, 8 ಹೊಸ ವಿಮಾನಗಳು ಮತ್ತು 1 ಹೊಸ ವಿಮಾನಯಾನ ಸಂಸ್ಥೆ ಸೇರಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣವು ಇಂಡಿಯಾ ಕಾರ್ಗೋ ಪ್ರಶಸ್ತಿ 2025 ರಲ್ಲಿ "ಡಿಜಿಟಲೀಕರಣಕ್ಕಾಗಿ ಅತ್ಯುತ್ತಮ ವಿಮಾನ ನಿಲ್ದಾಣ" ಪ್ರಶಸ್ತಿಗೆ ಭಾಜನವಾಗಿದೆ.

ಅದಾನಿ ರಸ್ತೆ ಸಾರಿಗೆ ಲಿಮಿಟೆಡ್ (ARTL - ರಸ್ತೆಗಳು)

ಮಧ್ಯಪ್ರದೇಶದಲ್ಲಿ HAM ಯೋಜನೆ "ನಾನಸಾ-ಪಿಡ್ಗಾಂವ್" ಗಾಗಿ ತಾತ್ಕಾಲಿಕ COD ಸ್ವೀಕರಿಸಲಾಗಿದೆ. ಇದು 7 ನೇ ಕಾರ್ಯಾಚರಣಾ ಯೋಜನೆಯಾಗಿದೆ. ಮೂರು ಹೊಸ ಯೋಜನೆಗಳಿಗೆ ಪ್ರಶಸ್ತಿ ಪತ್ರವನ್ನು ಸ್ವೀಕರಿಸಲಾಗಿದೆ. o ಸೋನ್‌ಪ್ರಯಾಗ್ ಮತ್ತು ಕೇದಾರನಾಥ ನಡುವಿನ 12.9 ಕಿ.ಮೀ ಉದ್ದದ ರೋಪ್‌ವೇ ಯೋಜನೆ ಮುಂಗರ್-ಸುಲ್ತಾನ್‌ಗಂಜ್ ಮತ್ತು ಸುಲ್ತಾನ್‌ಗಂಜ್-ಸಬೋರ್ ರಸ್ತೆಯನ್ನು ಸಂಪರ್ಕಿಸುವ ಎರಡು HAM ರಸ್ತೆ ಯೋಜನೆಗಳು ಸೇರಿವೆ.

ESG ಮುಖ್ಯಾಂಶಗಳು

ಸುಸ್ಥಿರತೆ ಮತ್ತು ಅದರ ಅಚಲ ಬದ್ಧತೆಗಾಗಿ AEL ಅನ್ನು ಟ್ರಾನ್ಸ್‌ಫಾರ್ಮನ್ಸ್ ESG ಪ್ರಶಸ್ತಿಗಳಲ್ಲಿ '2025 ರ ವರ್ಷದ ಮಹಾನ್ ಭಾರತೀಯ ESG ಸಂಸ್ಥೆ' ಎಂದು ಗುರುತಿಸಲಾಗಿದೆ. ಭಾರತದ ಮೊದಲ ಆಫ್-ಗ್ರಿಡ್ ಗ್ರೀನ್ ಹೈಡ್ರೋಜನ್ ಪೈಲಟ್ ಯೋಜನೆಯನ್ನು ಮುನ್ನಡೆಸಿದ್ದಕ್ಕಾಗಿ ಭಾರತೀಯ ವಾಣಿಜ್ಯ ಮಂಡಳಿಯಿಂದ 'ವೃತ್ತ ಆರ್ಥಿಕತೆಗೆ ಅತ್ಯುತ್ತಮ ಕೊಡುಗೆ' ಪ್ರಶಸ್ತಿಯನ್ನು ANIL ಗೆ ನೀಡಿ ಗೌರವಿಸಲಾಗಿದೆ. ಸುಸ್ಥಿರ ಗಣಿಗಾರಿಕೆ ಲಾಜಿಸ್ಟಿಕ್ಸ್ ಅನ್ನು ಮುನ್ನಡೆಸುವ ತನ್ನ ಪ್ರವರ್ತಕ ಹೈಡ್ರೋಜನ್ ಟ್ರಕ್ ಉಪಕ್ರಮಕ್ಕಾಗಿ ಅದಾನಿ ನ್ಯಾಚುರಲ್ ರಿಸೋರ್ಸಸ್ ಭಾರತೀಯ ವಾಣಿಜ್ಯ ಮಂಡಳಿಯಿಂದ ಪ್ರತಿಷ್ಠಿತ 'ಲೀಡರ್ಡ್ಸ್‌ ಇನ್ ಕ್ಲೈಮೆಟ್ ಆಕ್ಷನ್‌' ಪ್ರಶಸ್ತಿಗೆ ಭಾಜನವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+