ನಟಿ ಸೊನಾಲಿ ಬೇಂದ್ರೆಗೆ ಕ್ಯಾನ್ಸರ್: ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ

ಮುಂಬೈ, ಜುಲೈ 4: ಬಾಲಿವುಡ್ ತಾರೆ ಸೊನಾಲಿ ಬೇಂದ್ರೆ ಅವರು ತಾವು ಕ್ಯಾನ್ಸರ್‌ಗೆ ತುತ್ತಾಗಿರುವುದಾಗಿ ಬಹಿರಂಗಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಸೊನಾಲಿ ಬೇಂದ್ರೆ, 'ನನ್ನ ದಾರಿಯಲ್ಲಿ ಎದುರಾಗುವ ಪ್ರತಿ ಸಂಕಷ್ಟದ ವಿರುದ್ಧವೂ ಹೋರಾಟ ನಡೆಸಲು ದೃಢನಿಶ್ಚಯ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.

ಕೆಲವೊಮ್ಮೆ ಅನಿರೀಕ್ಷಿತ ಸಂದರ್ಭಗಳಲ್ಲಿ ಜೀವನ ನಮ್ಮನ್ನು ಸಂಕಷ್ಟಕ್ಕೆ ನೂಕುತ್ತವೆ. ನಾನು ಅಪಾಯಕಾರಿ ಪ್ರಮಾಣದ ಕ್ಯಾನ್ಸರ್‌ಗೆ ತುತ್ತಾಗಿರುವುದು ಇತ್ತೀಚೆಗೆ ಪತ್ತೆಯಾಗಿದೆ. ನಿಜಕ್ಕೂ ಇದು ಆವರಿಸಿದ್ದು ನನಗೆ ಗೊತ್ತೇ ಆಗಿರಲಿಲ್ಲ. ಸಣ್ಣಪುಟ್ಟ ನೋವಿನ ಕಾರಣ ಕೆಲವು ಪರೀಕ್ಷೆಗೆ ಒಳಗಾಗಬೇಕಾಯಿತು. ಅದರಿಂದ ಈ ಅನಿರೀಕ್ಷಿತ ರೋಗದ ಪತ್ತೆಯಾಗಿದೆ ಎಂದು 43 ವರ್ಷದ ಸೊನಾಲಿ ಬೇಂದ್ರೆ ತಮಗಾಗಿರುವ ಆಘಾತ ಹಂಚಿಕೊಂಡಿದ್ದಾರೆ.

Actress sonali bendre reveals she has cancer

ತಮಗೆ ಬೆಂಬಲವಾಗಿ ನಿಂತಿರುವ ಕುಟುಂಬ ಹಾಗೂ ಸ್ನೇಹಿತರಿಗೆ ಅವರು ಕೃತಜ್ಞತೆ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ನನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರು ನನ್ನ ಸುತ್ತಲೂ ಇದ್ದಾರೆ. ಯಾವುದನ್ನು ಕೇಳಿದರೂ ಒದಗಿಸುವ ಬೆಂಬಲ ಸಿಗುತ್ತಿದೆ. ನಾನು ಅದೃಷ್ಟವಂತೆ. ಪ್ರತಿಯೊಬ್ಬರಿಗೂ ನಾನು ಋಣಿಯಾಗಿರುತ್ತೇನೆ. ಪರಿಣಾಮಕಾರಿ ಮತ್ತು ತಕ್ಷಣದ ಕ್ರಮ ತೆಗೆದುಕೊಳ್ಳದರ ಹೊರತಾಗಿ ಇದನ್ನು ಗುಣಪಡಿಸಲು ಬೇರೆ ಮಾರ್ಗವಿಲ್ಲ.

ನನ್ನ ವೈದ್ಯರ ಸಲಹೆಯಂತೆ ನಾನು ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸೊನಾಲಿ ತಿಳಿಸಿದ್ದಾರೆ.

ನಾವು ಆಶಾವಾದಿಯಾಗಿರುತ್ತೇವೆ ಮತ್ತು ದಾರಿಯ ಪ್ರತಿ ಹೆಜ್ಜೆಯಲ್ಲಿಯೂ ಹೋರಾಡಲು ನಾನು ದೃಢನಿಶ್ಚಯ ಮಾಡಿದ್ದೇನೆ. ಕಳೆದ ಕೆಲವು ದಿನಗಳಿಂದ ನನಗೆ ಸಿಗುತ್ತಿರುವ ಅಗಾಧ ಪ್ರಮಾಣದ ಪ್ರೀತಿ ನನಗೆ ಸಹಾಯ ಮಾಡುತ್ತಿದೆ. ಅದಕ್ಕೆ ನಾನು ಕೃತಜ್ಞಳಾಗಿರುತ್ತೇನೆ.

ನನ್ನ ಕುಟುಂಬ ಮತ್ತು ಸ್ನೇಹಿತರ ಬಲ ನನ್ನ ಹಿಂದಿದೆ ಎಂಬ ಅರಿವಿನೊಂದಿಗೆ ಯುದ್ಧಕ್ಕೆ ಮುನ್ನಡಿಯಿಡುತ್ತಿದ್ದೇನೆ ಎಂದು ಸೊನಾಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+