Preity Zinta: ಕಾಂಗ್ರೆಸ್ ಟ್ವೀಟ್‌ಗೆ ನಿಮಗೆ ನಾಚಿಕೆಯಾಗಬೇಕು ಎಂದ ನಟಿ ಪ್ರೀತಿ ಜಿಂಟಾ!
Preity Zinta: ಬಾಲಿವುಡ್ ನಟಿ ಹಾಗೂ ಉದ್ಯಮಿ ಪ್ರೀತಿ ಜಿಂಟಾ ಅವರು ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ನನ್ನ ವಿರುದ್ಧ ಸುಳ್ಳು ಸುದ್ದಿಯನ್ನು ವೈರಲ್ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಬರೋಬ್ಬರಿ 18 ಕೋಟಿ ರೂಪಾಯಿ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ವಾದ - ವಿವಾದ ನಡೆಯುತ್ತಿದೆ. ಸೋಷಿಯಲ್ ಮೀಡಿಯಾ ಖಾತೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವುಂಟಾಗಿದೆ. ಅಷ್ಟಕ್ಕೂ ಪ್ರೀತಿ ಅವರು ಕಾಂಗ್ರೆಸ್ ಪಕ್ಷದ ಮೇಲೆ ಗರಂ ಆಗಿರುವುದು ಯಾಕೆ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಪ್ರೀತಿ ಜಿಂಟಾ ಅವರು ಕಾಂಗ್ರೆಸ್ ಪಕ್ಷದ ಮೇಲೆ ಫೂಲ್ ಗರಂ ಆಗಿರುವುದು ಯಾಕೆ ಎನ್ನುವ ವಿವರ ಇಲ್ಲಿದೆ. ಪ್ರೀತಿ ಜಿಂಟಾ ಅವರು ಯಾವುದೇ ಪಕ್ಷದ ಪರವಾಗಿ ಬಹಿರಂಗವಾಗಿ ಗುರುತಿಸಿಕೊಂಡಿಲ್ಲ. ಆದರೆ, ಇದೀಗ ಅವರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಕಮಿಷನ್ ಸಹ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು. ಪ್ರೀತಿ ಅವರು ಈ ವಿಷಯದ ವಿರುದ್ಧ ಸಿಡಿದೆದಿದ್ದಾರೆ.

ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಮಂಗಳವಾರ ಕೇರಳ ಕಾಂಗ್ರೆಸ್‌ನ ಮೇಲೆ ಗರಂ ಆಗಿದ್ದು. ಇದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿ ಅವರು ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿನಿಂದ ಬರೋಬ್ಬರಿ 18 ಕೋಟಿ ರೂಪಾಯಿ ಸಾಲ ಪಡೆದಿರುವ ವಿಚಾರವಾಗಿ ಈ ಚರ್ಚೆ ನಡೆದಿದೆ. ಅಲ್ಲದೆ ಪ್ರೀತಿ ಜಿಂಟಾ ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಬಿಜೆಪಿಗೆ ಕೊಟ್ಟಿದ್ದು ಇದಕ್ಕಾಗಿ 18 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿ ಆರೋಪ ಮಾಡಿತ್ತು. ಇದಕ್ಕೆ ಪ್ರೀತಿ ಅವರು ಇದೀಗ ರಿಯಾಕ್ಟ್ ಮಾಡಿದ್ದಾರೆ. ಪ್ರೀತಿ ಅವರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ಬಿಜೆಪಿಗೆ ನೀಡಿದ್ದಾರೆ. ಈ ಮೂಲಕ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರೀತಿ ಜಿಂಟಾ ಅವರು, ಇದೊಂದು ಸುಳ್ಳು ಸುದ್ದಿ. ಸಂಪೂರ್ಣ ಸಾಲದ ಮೊತ್ತವನ್ನು 10 ವರ್ಷಗಳ ಹಿಂದೆಯೇ ನಾನು ಮರುಪಾವತಿ ಮಾಡಿದ್ದಾನೆ ಎಂದಿದ್ದಾರೆ.
ಇಲ್ಲ ನಾನು ನನ್ನ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನು ನಾನೇ ನಿರ್ವಹಣೆ ಮಾಡುತ್ತಿದ್ದೇನೆ. ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮುಂದುರಿದು ನನಗೆ ಯಾರೂ ಸಾಲ ಮನ್ನಾ ಮಾಡಿಲ್ಲ. ಇಲ್ಲ ಯಾರೂ ಸಾಲ ಕೊಟ್ಟಿಲ್ಲ. ಒಂದು ರಾಜಕೀಯ ಪಕ್ಷ ಇಲ್ಲವೇ ಆ ಪಕ್ಷವನ್ನು ಪ್ರತಿನಿಧಿಸುವ ಖಾತೆಯಿಂದ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ನನ್ನ ಹೆಸರು ಹಾಗೂ ಚಿತ್ರಗಳನ್ನು ಬಳಸಿಕೊಂಡು ಕೆಟ್ಟ ಗಾಸಿಪ್ ಹಾಗೂ ಕ್ಲಿಕ್‌ಬೈಟ್ (ಜನ ನೋಡಬೇಕು ಎನ್ನುವ ಉದ್ದೇಶಕ್ಕಾಗಿ) ಬಳಸಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications