ನಮ್ಮ ದೇಶದ್‌ ಕಥೆ ಇಷ್ಟೇ ಕಣಪ್ಪೋ! ಕಸದ ಬುಟ್ಟಿಯನ್ನೂ ಬಿಡದ ಕಳ್ಳರು, ಬಿಟ್ಟು ತಬಾಹಿ ಶ್ರಮಕ್ಕೆ ಬೆಲೆಯೇ ಇಲ್ವಾ?

ನದಿಗಳು ಬತ್ತಿ ಹೋಗುತ್ತಿವೆ, ಕಲುಷಿತಗೊಂಡು ಚರಂಡಿಗಳಂತಾಗುತ್ತಿವೆ ಎಂದು ನಾವು ಯಾವಗಲೂ ನಾವು ಸರ್ಕಾರವನ್ನ ದೂರುತ್ತೇವೆ. ಆದರೆ, ಸಾರ್ವಜನಿಕರಾದ ನಮಗೆ ಪರಿಸರದ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಈ ಒಂದು ಘಟನೆಯೇ ಸಾಕ್ಷಿ. ನದಿಯನ್ನು ಸ್ವಚ್ಛಗೊಳಿಸಿ, ಅಲ್ಲಿ ಕಸ ಹಾಕದಿರಲಿ ಎಂದು ಕಸದ ಬುಟ್ಟಿಯನ್ನಿಟ್ಟರೆ, ಅದನ್ನೇ ಕಳ್ಳರು ಎಗರಿಸಿರುವ ಘಟನೆಯೊಂದು ನಡೆದಿದೆ.

ಪರಿಸರ ಹೋರಾಟಗಾರ ಬಿಟ್ಟು ತಬಾಹಿ ಪರಿಶ್ರಮಕ್ಕೆ ಬೆಲೆನೇ ಇಲ್ವಾ?

20 ವರ್ಷದ ಯುವಕ ಸುರೇಂದ್ರ ಸಿಂಗ್ ಚೌಧರಿ ಮೂಲತಃ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯವರು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಇವರನ್ನ ಬಿಟ್ಟು ತಬಾಹಿ (Bittu Tabahi) ಎಂದೇ ಕರೆಯುತ್ತಾರೆ. ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಸಂಪೂರ್ಣವಾಗಿ ಮಲಿನಗೊಂಡು ಕಸದ ತೊಟ್ಟಿಯಾಗಿದ್ದ ಜಿಲ್ಲೆಯ ಅಜ್ನಾರ್ ನದಿಯನ್ನ ಸ್ವಚ್ಛಗೊಳಿಸುವ ಪಣ ತೊಟ್ಟಿದ್ದರು.

Activist Bittu Tabahi Cleans MP s Ajnar River Places Dustbins One Stolen Sparking Public Outrage

8 ತಿಂಗಳುಗಟ್ಟಲೆ ಏಕಾಂಗಿಯಾಗಿ ಶ್ರಮಿಸಿ, ನದಿಯಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನ ಹೊರತೆಗೆದು ಸ್ವಚ್ಛಗೊಳಿಸಿದ್ದರು. ಒಮ್ಮೆ ಸ್ವಚ್ಛಗೊಳಿಸಿದ ನಂತರವೂ ಜನ ಮತ್ತೆ ಕಸ ತಂದು ಸುರಿಯುತ್ತಿದ್ದರಿಂದ, ಅವರು ಎರಡನೇ ಬಾರಿಯೂ ನದಿಯನ್ನು ಕ್ಲೀನ್ ಮಾಡಿದ್ದರು.

ಜನರು ನದಿಗೆ ನೇರವಾಗಿ ಕಸ ಎಸೆಯಬಾರದು ಎಂಬ ಉದ್ದೇಶದಿಂದ ನದಿ ದಡದಲ್ಲಿದ್ದ ಮರದ ಕೆಳಗೆ ಎರಡು ಡಸ್ಟ್‌ಬಿನ್‌ ಅಂದರೆ ಕಸದ ಬುಟ್ಟಿಗಳನ್ನಾ ಸಹ ತಂದಿಟ್ಟರು.

ಡಸ್ಟ್‌ಬಿನ್‌ ಅನ್ನೇ ಎಗರಿಸಿದ ಖದೀಮರು

ಜನರು ಜವಾಬ್ದಾರಿಯುತವಾಗಿ ಕಸದ ಬುಟ್ಟಿಯನ್ನ ಬಳಸುತ್ತಾರೆ ಎಂದು ಬಿಟ್ಟು ಭಾವಿಸಿದ್ದರು. ಆದರೆ, ಅವರು ಇತ್ತೀಚೆಗೆ ನದಿಯ ಬಳಿ ಹಿಂತಿರುಗಿ ನೋಡಿದಾಗ ಅವರಿಗೆ ಆಗಿದ್ದು ಮಾತ್ರ ಭಾರೀ ಆಘಾತ. ಅಲ್ಲಿಟ್ಟಿದ್ದ ಎರಡು ಕಸದ ಬುಟ್ಟಿಗಳಲ್ಲಿ ಒಂದು ನಾಪತ್ತೆಯಾಗಿತ್ತು.

ಹೌದು, ಯಾರೋ ಕಿಡಿಗೇಡಿಗಳು ಆ ಡಸ್ಟ್‌ಬಿನ್ ಅನ್ನೇ ಕದ್ದೊಯ್ದಿದ್ದಾರೆ ನೋಡಿ. ಇದರಿಂದ ಬೇಸರಗೊಂಡ ಬಿಟ್ಟು ತಬಾಹಿ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.

"ನಾನು ಈ ಕಸದ ಬುಟ್ಟಿಗಳನ್ನ ನನ್ನ ಸ್ವಂತ ಬಳಕೆಗಾಗಿ ಇಟ್ಟಿರಲಿಲ್ಲ. ಜನರು ಕಸವನ್ನ ಸರಿಯಾಗಿ ಕಸದ ಬುಟ್ಟಿಗೆ ಹಾಕಲಿ ಮತ್ತು ನದಿ ಮತ್ತೆ ಮಲಿನವಾಗದಿರಲಿ ಎಂದು ಇಟ್ಟಿದ್ದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಟ್ಟಿದ್ದ ಡ್ರಮ್‌ಗಳನ್ನ ಕೂಡ ಕಳವು ಮಾಡಲಾಗಿದೆ" ಎಂದು ಅವರು ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ ಮತ್ತು ಕಠಿಣ ಕ್ರಮಕ್ಕೆ ಆಗ್ರಹ

ಬಿಟ್ಟು ತಬಾಹಿ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಕೆಲವರಿಗೆ ಒಳ್ಳೆಯದನ್ನ ಮಾಡಿದರೆ ಅದು ಅವರಿಗೆ ಅರ್ಥವಾಗುವುದಿಲ್ಲ, ಅಂಥವರು ಒಳ್ಳೆಯ ಸೌಲಭ್ಯಗಳಿಗೆ ಅರ್ಹರೇ ಅಲ್ಲ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ಮತ್ತು ಈ ರೀತಿ ಸಾರ್ವಜನಿಕ ಆಸ್ತಿಯನ್ನ ಕದಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಇನ್ನು ಕೆಲವರು, ಸ್ಥಳೀಯ ಪೊಲೀಸರ ನೆರವು ಪಡೆದು ಆ ಸ್ಥಳಕ್ಕೆ ಭದ್ರತೆ ಒದಗಿಸುವಂತೆ ಬಿಟ್ಟು ಅವರಿಗೆ ಸಲಹೆ ನೀಡಿದ್ದಾರೆ. ಒಬ್ಬ ಯುವಕ ತನ್ನ ಸ್ವಂತ ಖರ್ಚು ಹಾಗೂ ಶ್ರಮ ಹಾಕಿ ಪರಿಸರ ಉಳಿಸಲು ಮುಂದಾಗಿದ್ದರೂ, ಸಮಾಜದ ಕೆಲವರು ಹೀಗೆ ವರ್ತಿಸುತ್ತಿರುವುದು ನಿಜಕ್ಕೂ ಬೇಸರ ಸಂಗತಿಯಲ್ಲದೇ ಮತ್ತೇನು?.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+