ಇನ್ನು ಮೇಲೆ ತಯಾರಾಗುವ ಎಲ್ಲಾ ಹೊಸ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್, ಯಾವಾಗಿನಿಂದ ಜಾರಿ?
ನವದೆಹಲಿ, ಡಿಸೆಂಬರ್ 11: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಾಗುವ ಎಲ್ಲಾ ಹೊಸ ಟ್ರಕ್‌ಗಳು ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ಹೊಂದಿರಬೇಕು ಎಂದು ಕಡ್ಡಾಯಗೊಳಿಸುವ ಅಧಿಸೂಚನೆಯನ್ನು ಹೊರಡಿಸಿದೆ.
ಈ ಕ್ರಮವು ಕೆಲಸದ ಪರಿಸ್ಥಿತಿಗಳು ಮತ್ತು ಟ್ರಕ್ ಚಾಲಕರ ಒಟ್ಟಾರೆ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸಚಿವಾಲಯವು ಬಿಡುಗಡೆ ಮಾಡಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ನಿರ್ದೇಶನವು ನಿರ್ದಿಷ್ಟವಾಗಿ ಎನ್2 ಮತ್ತು ಎನ್3 ವರ್ಗದ ಅಡಿಯಲ್ಲಿ ಬರುವ ವಾಹನಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ. ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಿಸಿದ ವಾಹನಗಳು ಎನ್2 ಮತ್ತು ಎನ್3 ವರ್ಗದ ವಾಹನಗಳ ಕ್ಯಾಬಿನ್‌ಗೆ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯ" ಎಂದು ತಿಳಿಸಿದೆ.

ಹೊಸ ಟ್ರಕ್‌ಗಳಲ್ಲಿ ಸುರಂಕ್ಷತೆ ದೃಷ್ಟಿಯಿಂದ ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಅಳವಡಿಸಲಾಗಿರುವ ಕ್ಯಾಬಿನ್‌ನ ಪರೀಕ್ಷೆಯು IS14618:2022 ರಲ್ಲಿ ನಿರ್ದಿಷ್ಟಪಡಿಸಿದ ಮಾನದಂಡಗಳಿಗೆ ಬದ್ಧವಾಗಿರಬೇಕು. ನಿಖರವಾದ ಪರೀಕ್ಷಾ ಪ್ರಕ್ರಿಯೆಯು ಕ್ಯಾಬಿನ್‌ಗಳಲ್ಲಿನ ಹವಾನಿಯಂತ್ರಣ ವ್ಯವಸ್ಥೆಗಳ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಕಾರ್ಯನಿರ್ವಹಣೆಯನ್ನು ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಸಚಿವಾಲಯವು ಹೇಳಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜುಲೈನಲ್ಲಿ ಹೇಳಿದ್ದ ಹೇಳಿಕೆಯಂತೆ ಟ್ರಕ್ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯ ಅನುಮೋದನೆಯನ್ನು ಜಾರಿ ಮಾಡಲಾಗುತ್ತಿದೆ. ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಸಾರಿಗೆ ಕ್ಷೇತ್ರದಲ್ಲಿ ಟ್ರಕ್ ಚಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಕೆಲಸದ ಪರಿಸ್ಥಿತಿಗಳು ಮತ್ತು ಮನಸ್ಥಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಅವಶ್ಯಕತೆಯಿದೆ ಎಂದು ಸಚಿವರು ಇತ್ತೀಚೆಗೆ ಹೇಳಿದರು.
ಟ್ರಕ್‌ಗಳಿಗೆ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ಶೀಘ್ರದಲ್ಲೇ ಕಡ್ಡಾಯಗೊಳಿಸಲಾಗುವುದು. ಟ್ರಕ್ ಚಾಲಕರು ವಿಪರೀತ ಶಾಖದ ಪರಿಸ್ಥಿತಿಯಲ್ಲಿ ಕೆಲಸ ಮಾಡುದ್ದಾರೆ. ಕೆಲವರು ನಿರ್ವಹಣಾ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಕೆಲವರು ಆಕ್ಷೇಪಿಸಿದರೂ ಟ್ರಕ್ ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ಅಳವಡಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications