ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಅಸ್ಸಾಂನಲ್ಲಿ ಕಾಂಗ್ರೆಸ್ ಮಣಿಸಿ ಬಿಜೆಪಿ ಅಧಿಕಾರಕ್ಕೆ

|
Google Oneindia Kannada News

ಅಸ್ಸಾಂನಲ್ಲಿ 2021ರಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್‌ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 1

26 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿಗೆ ಎಂಟು ಹಾಗೂ ಪರಿಶಿಷ್ಟ ಪಂಗಡಕ್ಕೆ 16 ಸೀಟುಗಳನ್ನು ಮೀಸಲಿರಿಸಲಾಗಿದೆ. ಈ ಬಾರಿ ಅಸ್ಸಾಂನಲ್ಲಿ ಕಾಂಗ್ರೆಸ್ ಮಣಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ -ಸಿವೋಟರ್ ಸಮೀಕ್ಷೆ ಹೇಳಿದೆ.

ABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವುABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವು

ಬಿಜೆಪಿ ಸೋಲಿಸುವ ಉದ್ದೇಶದಿಂದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (ಎಐಯುಡಿಎಫ್), ಸಿಪಿಐ, ಸಿಪಿಐ (ಎಂ), ಸಿಪಿಐ(ಎಂಎಲ್) ಹಾಗೂ ಅಂಚಲಿಕ್ ಗಣ ಮೋರ್ಚಾ ಪಕ್ಷಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ಮಹಾಮೈತ್ರಿಕೂಟ ರಚಿಸಿದೆ.

ABP C-Voter Assam Elections 2021 Opinion Poll: BJP likely to Sweep Elections

ಸಮೀಕ್ಷೆ: ಅಸ್ಸಾಂನಲ್ಲಿ ಕಾಂಗ್ರೆಸ್ ಮಣಿಸಿ ಬಿಜೆಪಿ ಅಧಿಕಾರಕ್ಕೆ

2016ರಲ್ಲಿ 126 ವಿಧಾನಸಭಾ ಸ್ಥಾನಗಳ ಪೈಕಿ 60 ಬಿಜೆಪಿ ಶಾಸಕರು ಗೆದ್ದು ಅಧಿಕಾರಕ್ಕೇರಿತ್ತು. ಬೋಡೋ ಪೀಪಲ್ಸ್ ಫ್ರಂಟ್ ಹಾಗೂ ಅಸ್ಸೊಂ ಗಣ ಪರಿಷತ್ ಕ್ರಮವಾಗಿ 14 ಹಾಗೂ 12 ಸ್ಥಾನ ಗೆದ್ದು ಬಿಜೆಪಿ ಬೆಂಬಲ ಸೂಚಿಸಿದ್ದವು. ಎನ್ಡಿಎ 74 ಹಾಗೂ ಶೇ 41.1 ಮತ ಗಳಿಕೆ ಹಾಗೂ ಯುಪಿಎ 26 ಹಾಗೂ ಶೇ 31 ಮತ ಗಳಿಕೆ ಪಡೆದಿದ್ದವು.

ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...ಅಸ್ಸಾಂ ವಿಧಾನಸಭೆ ಚುನಾವಣೆ 2021: ದಿನಾಂಕ, ಕ್ಷೇತ್ರಗಳ ವಿವರ...

ಎಬಿಪಿ -ಸಿವೋಟರ್ ಸಮೀಕ್ಷೆ 2021;
ಸಮೀಕ್ಷೆ ಪ್ರಕಾರ 126 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 72 ಸ್ಥಾನ ಗಳಿಸಲಿದ್ದು, ಶೇ 43.8 ರಷ್ಟು ಮತಗಳಿಸಲಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 47 ಸ್ಥಾನ ಗಳಿಸಲಿದ್ದು, ಶೇ 41.4ರಷ್ಟು ಮತ ಗಳಿಸಲಿದೆ. ಬಿಪಿಎಫ್ 4 ಸ್ಥಾನ ಹಾಗೂ ಇತರೆ 3 ಸ್ಥಾನ ಗೆಲ್ಲಬಹುದು, ಕ್ರಮವಾಗಿ ಶೇ 1.1 ಹಾಗೂ 13.7 ರಷ್ಟು ಮತ ಗಳಿಸಬಹುದು ಎಂದು ವರದಿ ಬಂದಿದೆ.

English summary
ABP C-Voter Assam Elections 2021 Opinion Poll: BJP Expected Sweep Elections With 68-76 Seats; Congress Lags Behind With 43-51 Seats
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X