• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಭಿನಂದನ್ ಬಿಡುಗಡೆಗೆ ಸಿಧು ಕಾರಣ ಎಂದ ಕೇರಳ ಮಾಜಿ ಸಿಎಂ

|
   ಇಲ್ನೋಡ್ರಪ್ಪ ಕಾಮಿಡಿ ಅಭಿನಂದನ್ ಬಿಡುಗಡೆಗೆ ಸಿಧು ಕಾರಣ ಅಂತೆ..!

   ತಿರುವನಂತಪುರಂ, ಮಾರ್ಚ್‌ 01: ಪಾಕಿಸ್ತಾನ ಸೇನೆ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಇಂದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಆದರೆ ಇದರ ಶ್ರೇಯ ಯಾರಿಗೆ ಸಲ್ಲಬೇಕು ಎಂಬುದು ಬಿಜೆಪಿ-ಕಾಂಗ್ರೆಸ್‌ ನಡುವಿನ ಕಿತ್ತಾಟಕ್ಕೆ ಕಾರಣವಾಗುವ ಮುನ್ಸೂಚನೆ ದೊರೆತಿದೆ.

   ಹಿರಿಯ ಕಾಂಗ್ರೆಸ್ಸಿಗ ಕೇರಳದ ಮಾಜಿ ಸಿಎಂ ಒಮ್ಮನ್ ಚಾಂಡಿ ಅವರು ಅಭಿನಂದನ್ ಬಿಡುಗಡೆ ಆಗಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಕಾಂಗ್ರೆಸ್‌ನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಾರಣ ಎಂದು ಟ್ವೀಟ್ ಮಾಡಿದ್ದಾರೆ.

   'ಅಭಿನಂದನ್ ಬಿಡುಗಡೆಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗಿಲ್ಲ'

   ಒಮ್ಮನ್ ಚಾಂಡಿ ಅವರು ಮಾಡಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‌ ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅಕಾ ದಿವ್ಯ ಸ್ಪಂದನ ಅವರು ಒಪ್ಪಿಗೆಯ ಮೊಹರು ಒತ್ತಿದ್ದಾರೆ.

   ಭಾವುಕ ಕ್ಷಣಗಳು, ಜಯಘೋಷದ ಮಧ್ಯೆ ಭಾರತಕ್ಕೆ ವಾಪಸ್ ಆದ ಅಭಿನಂದನ್

   ಒಮ್ಮನ್ ಚಾಂಡಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನವಜೋತ್ ಸಿಂಗ್ ಸಿಧು ಅವರು, 'ನಿಮ್ಮ ಮಾತುಗಳು ನನ್ನನ್ನು ವಿನೀತನನ್ನಾಗಿಸಿದೆ, ನಿಮ್ಮ ಮಾತುಗಳು ನನಗೆ, ಸತ್ಯದ ದಾರಿಯಲ್ಲಿ ನಡೆಯಲು ಶಕ್ತಿ ಮತ್ತು ಧೈರ್ಯವನ್ನು ನೀಡಿವೆ, ನಾನು ನನ್ನ ಆದರ್ಶದೊಂದಿಗೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ಪ್ರತಿಟ್ವೀಟ್ ಮಾಡಿದ್ದಾರೆ.

   English summary
   Kerala former CM Omman Chandy gives credit of bringing back wing commander Abhinandan to Navjot Singh Sidhu and thank Imran Khan.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X