Abhijeet Dipke: ಸಿಜೆಪಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಅಮೆರಿಕಾ ಸೆಲೆಬ್ರಿಟಿ!

Abhijeet Dipke: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಅಮೆರಿಕಾದ ಸೆಲೆಬ್ರಿಟಿಯೊಬ್ಬರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ. ಅಭಿಜೀತ್ ದೀಪ್ಕೆ ಅವರು, ಭಾರತದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿನ ಲೋಪ ಹಾಗೂ ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್‌ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಲೋಪ ಹಾಗೂ ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ನಡೆಸಲಾಗಿದ್ದ ಪ್ರತಿಭಟನೆಯ ನಂತರ ದೇಶದಾದ್ಯಂತ ಕಾಕ್ರೋಚ್ ಜನತಾ ಪಾರ್ಟಿಯು ನಡೆಸುತ್ತಿರುವ ದೊಡ್ಡ ಅಭಿಯಾನ ಇದಾಗಿದೆ. ಆದರೆ, ಈ ಹೋರಾಟಕ್ಕೆ ಅಮೆರಿಕಾ ಸೇರಿದಂತೆ ವಿದೇಶಗಳಿಂದ ಫಂಡಿಂಗ್ ಆಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

Abhijit Deepke US Celebrity Mary Millben Delivers a Sharp Rebuttal to CJP Founder

ಈ ವಿಚಾರದಲ್ಲಿ ಅಮೆರಿಕಾದ ಗಾಯಕಿ ಮೇರಿ ಮಿಲ್ಬೆನ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಇಂದು ಪೋಸ್ಟ್‌ ಮಾಡಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಭಿಜೀತ್ ದೀಪ್ಕೆ ಹಾಗೂ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಅಮೆರಿಕದ ಸೆಲೆಬ್ರಿಟಿ ಮೇರಿ ಮಿಲ್ಬೆನ್ ಅವರ ಸಹಾಯವನ್ನು ಅಥವಾ ಅಮೆರಿಕಾದ ಸೆಲೆಬ್ರಿಟಿಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಬೆಂಬಲ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್‌ಗೆ ಮೇರಿ ಮಿಲ್ಬೆನ್ ಅವರು ತಿರುಗೇಟು ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅಭಿಜೀತ್ ದೀಪ್ಕೆ ಅವರು, ಕಾಕ್ರೋಚ್ ಜನತಾ ಪಾರ್ಟಯ ಫಂಡಿಂಗ್ ವಿಚಾರವಾಗಿ ಮೇರಿ ಮಿಲ್ಬೆನ್ ಅವರು ನೀಡಿರುವ ಹೇಳಿಕೆಯ ಸುದ್ದಿಯನ್ನು ಹಂಚಿಕೊಂಡು ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮೋದಿ ತಮ್ಮ ದೇಶದ ಜನರನ್ನು ಅಪಖ್ಯಾತಿಗೊಳಿಸಲು ಅಮೆರಿಕನ್ನರ ಬೆಂಬಲವನ್ನು ಏಕೆ ಪಡೆಯುತ್ತಿದ್ದಾರೆ? ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕನ್ನು ವಿದೇಶಿ ಪ್ರಜೆಗಳಿಗೆ ಯಾರು ಕೊಟ್ಟರು? ನಮ್ಮದೇ ಆದ ಸಮಸ್ಯೆಗಳನ್ನು ನಿಭಾಯಿಸಲು ನಾವು ಸಮರ್ಥರಾಗಿದ್ದೇವೆ. ನಮ್ಮ ದೇಶದ ವ್ಯವಹಾರಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅಭಿಜೀತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

Abhijeet Dipke: ಅಭಿಜೀತ್‌ ದೀಪ್ಕೆ Vs ಮೇರಿ ಮಿಲ್ಬೆನ್ ಟ್ವೀಟ್ ವಾರ್‌

ಅಭಿಜೀತ್ ದೀಪ್ಕೆ ಅವರ ಟ್ವೀಟ್‌ಗೆ ಅಮೆರಿಕಾದ ಗಾಯಕಿ, ಸೆಲೆಬ್ರಿಟಿ ಮೇರಿ ಮಿಲ್ಬೆನ್ ಅವರು ತಿರುಗೇಟು ನೀಡಿದ್ದಾರೆ. ಓ ಪ್ರಿಯ.. ಅಭಿಜೀತ್ ದೀಪ್ಕೆ ಅವರೇ ಸತ್ಯವು ಎಲ್ಲರನ್ನೂ ಮುಕ್ತಗೊಳಿಸುತ್ತದೆ. ನೀವು ಯಶಸ್ವಿಯಾಗದಿದ್ದರೆ, ಈ ಅಮೆರಿಕದ ದಾನಿಗಳು ನಿಮ್ಮನ್ನು ಬೇಗನೆ ಕೈಬಿಡುತ್ತಾರೆ ಎಂಬುದೂ ಸತ್ಯ. ಕಾನೂನುಬಾಹಿರ ಮಾರ್ಗಗಳು ಎಂದಿಗೂ ಗೆಲ್ಲುವುದಿಲ್ಲ. ಆದ್ದರಿಂದ, ಅಮೆರಿಕದಲ್ಲಿ ಪಡೆದ ಶಿಕ್ಷಣ ಮತ್ತು ನಿಮ್ಮ ಪ್ರತಿಭೆಯನ್ನು ಒಳ್ಳೆಯ ಕೆಲಸಗಳಿಗೆ ಬಳಸಿ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸಿ, ಭಾರತವನ್ನು ಮುನ್ನಡೆಸಲು ಸಕಾರಾತ್ಮಕ ಧ್ವನಿಯಾಗಿ. ಸರಿಯಾದ ಕೆಲಸ ಮಾಡಲು ಬೇಕಾದ ಧೈರ್ಯವನ್ನು ತೋರಿಸಿ; ನಿಮ್ಮ ಮುಂದಿನ ಹೆಜ್ಜೆಗಳ ಮೂಲಕ ಸತ್ಯವನ್ನು ಸಾಬೀತುಪಡಿಸಿ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕನರ ಬೆಂಬಲ ಅಗತ್ಯವಿಲ್ಲ. ಅವರು 1.5 ಬಿಲಿಯನ್ ಸುಂದರ ಭಾರತೀಯ ನಾಗರಿಕರನ್ನು ಹೊಂದಿದ್ದಾರೆ ಮತ್ತು ಅವರನ್ನು ಬೆಂಬಲಿಸುತ್ತಾರೆ ಮತ್ತು 25 ವರ್ಷಗಳು, 12 ವರ್ಷಗಳು, ಸತತ ಮೂರು ಅವಧಿಗಳಿಗೆ ಪ್ರಧಾನಿಯಾಗಿರುತ್ತಾರೆ. ಮತ್ತು 2029 ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಅದು ಸತ್ಯ ಅಂತಲೂ ಮೇರಿ ಮಿಲ್ಬೆನ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+