ದೆಹಲಿ ಆಡಳಿತ ಸೇವಾ ಮಸೂದೆ ವಿರುದ್ಧ ವಿಪಕ್ಷಗಳನ್ನು ಸಂಘಟಿಸಿದ ಸಿಎಂ ಕೇಜ್ರಿವಾಲ್
ಬೆಂಗಳೂರು, ಜೂನ್ 08: ದೆಹಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ
ಸುಗ್ರಿವಾಜ್ಞೆ ವಿರುದ್ಧ ವಿಪಕ್ಷಗಳನ್ನು ಒಂದು ಗೂಡಿಸುವಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ನಿರತರಾಗಿದ್ದಾರೆ. ಈ ಮಧ್ಯೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ಬಿಜೆಪಿ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ವಿಪಕ್ಷಗಳ ಕಸರತ್ತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಲಕ್ನೋದಲ್ಲಿ ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಕೇಂದ್ರ ಬಿಜೆಪಿ ತಂದ ದೆಹಲಿ ಆಡಳಿತ ಸೇವೆಗಳ ಮಸೂದೆ ಪ್ರಜಾಪ್ರಭುತ್ವ ವಿರೋಧಿ ಆಗಿದೆ. ಈ ಮಸೂದೆಯನ್ನು ವಿರೋಧಿಸುವ ಕುರಿತು ಇತ್ತೀಚೆಗೆ ತಮ್ಮನ್ನು ಭೇಟಿಯಾದ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗೆ ತಿಳಿಸಿದರು.
ನಿರಂತರ ಪ್ರಯತ್ನದ ಮೂಲಕ ಕೇಂದ್ರದ ವಿರುದ್ಧ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 10 ವಿರೋಧ ಪಕ್ಷಗಳ ಬೆಂಬಲ ಪಡೆದಿದ್ದಾರೆ. ಈ ಮೂಲಕ ಮೇಲ್ಮನೆಯಲ್ಲಿ ದೆಹಲಿ ಆಡಳಿತ ಸೇವೆಯ ಮಸೂದೆ ತಡೆಯಲು ಸಿದ್ಧತೆ ನಡೆಸಿದ್ದಾರೆ.
ಮಸೂದೆ ಕುರಿತು ಕೆಲವು ವಾರಗಳಿಂದ ಕೇಜ್ರಿವಾಲ್ ದೇಶಾದ್ಯಂತ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕರು, ವಿರೋಧ ಪಕ್ಷಗಳ ಮುಖ್ಯಸ್ಥರು ಮತ್ತು ತಮಿಳುನಾಡು, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ದೆಹಲಿ ಸೇವಾ ಮಸೂದೆ ವಿರೋಧಕ್ಕೆ ಬೆಂಬಲ ಕೇಳಿದ್ದಾರೆ.

ದೆಹಲಿ ಅಧಿಕಾರ ನಿಯಂತ್ರಣ ಹತೋಟಿಗೆ ಯತ್ನ?
ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (GNCTD) ಜೊತೆ ಕೆಲಸ ಮಾಡುವ ಅಥವಾ ಅಧಿಕಾರಶಾಹಿಗಳ ಸಂಪೂರ್ಣ ನಿಯಂತ್ರಣವನ್ನು ದೆಹಲಿ ಸರ್ಕಾರಕ್ಕೆ ಧಕ್ಕಿದೆ. ಇದು ಎಂಟು ವರ್ಷಗಳ ಕಾನೂನು ಹೋರಾಟಕ್ಕೆ ಸಿಕ್ಕ ಫಲ ಎಂದು ಕೇಜ್ರಿವಾಲ್ ಸರ್ಕಾರ ಬಣ್ಣಿಸಿದೆ. ಈ ಮೂಲಕ ದೆಹಲಿಯಲ್ಲಿ ಅಧಿಕಾರ ನಿಯಂತ್ರಣ ಉಳಿಸಿಕೊಳ್ಳಲು ಎಎಪಿ ಯತ್ನಿಸುತ್ತಿದೆ.
ಈ ಮಧ್ಯೆ ಕೇಂದ್ರ ಸರ್ಕಾರವು ತನ್ನ ನ್ಯಾಷನಲ್ ಕ್ಯಾಪಿಟಲ್ ಕೇಡರ್ ಸರ್ವಿಸಸ್ ಅಥಾರಿಟಿ (NCCSA) ಸುಗ್ರೀವಾಜ್ಞೆಯ ಮೂಲಕ ದೆಹಲಿಯ ಎಎಪಿ ಸರ್ಕಾರದಿಂದ ಆಡಳಿತ ಹಕ್ಕುಗಳನ್ನು ಕಸಿದುಕೊಂಡಿತು. ಇದರರ್ಥ ದೆಹಲಿಯ ಚುನಾಯಿತ ಸರ್ಕಾರವು ತಮ್ಮ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದಿಲ್ಲ ಎಂದು ಕೇಂದ್ರ ಸಾರಿ ಹೇಳಿತು.
ಈ ಮಧ್ಯೆ ದೆಹಲಿ ಸೇವಾ ಮಸೂದೆ ವಿರೋಧಿಸಲು ಅಖಿಲೇಶ್ ಕೇಜ್ರಿವಾಲ್ ಅವರು ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿದ್ದಾರೆ. ಈ ಸಂಬಂಧ ವಿವಿಧ ಸಿಎಂಗಳ ಜೊತೆ ಅವರು ಸಭೆ ನಡೆಸಿದ್ದಾರೆ.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ದೆಹಲಿ ಸೇವಾ ಮಸೂದೆ ಪ್ರಜಾಪ್ರಭುತ್ವ ವಿರೋಧಿ ಆಗಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಎಪಿ ಮಾಡುತ್ತಿರುವ ಉತ್ತಮ ಕೆಲಸವನ್ನು ಬಿಜೆಪಿ ಸಹಿಸದೇ ಹೀಗೆ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಎಎಪಿ ಬೆಂಬಲಕ್ಕೆ ನಿಂತ 10 ವಿಪಕ್ಷಗಳು
ಸಂಸತ್ತಿನಲ್ಲಿ ತನ್ನ ಎಲ್ಲಾ ಸಂಸದರು ಎಎಪಿಯನ್ನು ಬೆಂಬಲಿಸುತ್ತಾರೆ ಎಂದು ಯಾದವ್ ಘೋಷಿಸಿದರು. ಗಮನಾರ್ಹವಾಗಿ, ಸಮಾಜವಾದಿ ಪಕ್ಷವು 3+1 ರಾಜ್ಯಸಭಾ ಸದಸ್ಯರನ್ನು ಹೊಂದಿದೆ. ಲೋಕಸಭೆಯಲ್ಲಿ ಬಹುಮತ ಹೊಂದಿದ್ದರೂ, ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಎನ್‌ಸಿಸಿಎಸ್‌ಎಯನ್ನು ವಿರೋಧಿಸಬೇಕು. ಹಾಗಾದರೆ ಬಿಜೆಪಿ ಮತ್ತು ಮಸೂದೆಯನ್ನು ಮಣಿಸಬಹುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಟಿಎಂಸಿ, ಡಿಎಂಕೆ ಸೇರಿದಂತೆ ಒಟ್ಟು 10 ವಿರೋಧ ಪಕ್ಷಗಳು ಆಮ್ ಆದ್ಮಿ ಪಕ್ಷದ ಜೊತೆ ಕೈ ಜೋಡಿಸಿವೆ. ಕೇಜ್ರಿವಾಲ್ ಅವರ ಎಎಪಿ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಮೂರು ಹಂತದ ಹೋರಾಟವನ್ನು ನಡೆಸುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ, ಬೀದಿ ಹೋರಾಟ ಮತ್ತು ಪ್ರಬಲ ಸಂಸದೀಯ ಕಾರ್ಯತಂತ್ರ ನಿರ್ಮಿಸಲು ಸಜ್ಜಾಗಿದೆ. ದೆಹಲಿ ಸೇವಾ ಮಸೂದೆಯ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಎಎಪಿ ಚಿಂತನೆಯಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications