ಅಂಚೆ ಕಚೇರಿ ಠೇವಣಿ, ಕೆವಿಪಿ, ಪಿಪಿಎಫ್ ಗಳಿಗೂ ಆಧಾರ್ ಕಡ್ಡಾಯ

ನವದೆಹಲಿ, ಅಕ್ಟೋಬರ್ 6: ಕೇಂದ್ರ ಸರ್ಕಾರ ಅಂಚೆ ಕಚೇರಿ ಠೇವಣಿ, ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಮತ್ತು ಕೆವಿಪಿ (ಕಿಸಾನ್ ವಿಕಾಸ್ ಪತ್ರ) ಗಳಿಗೂ ಆಧಾರ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ಕೇಂದ್ರ ವಿತ್ತ ಇಲಾಖೆ ಸೆಪ್ಟೆಂಬರ್ 29ರಂದೇ ನಾಲ್ಕು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಈ ಎಲ್ಲಾ ಯೋಜನೆಗಳಿಗೆ ಹೊಸದಾಗಿ ಸೇರ್ಪಡೆಯಾಗುವವರು ಹಾಗೂ ಹಾಲಿ ಇರುವ ಗ್ರಾಹಕರೂ ಆಧಾರ್ ಕಾರ್ಡ್ ನಂಬರ್ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.

Aadhaar now a must for post office deposits, PPF, KVP

ಪ್ರಸ್ತುತ ಗ್ರಾಹಕರು ಡಿಸೆಂಬರ್ 31ರ ಒಳಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ನಂಬರ್ ಸಲ್ಲಿಕೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಂದೊಮ್ಮೆ ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ಆಧಾರ್ ನೋಂದಣಿಯ ನಕಲು ಪ್ರತಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+