ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಕಡ್ಡಾಯವಾಗುವುದೇ?: ಸುಪ್ರೀಂನಲ್ಲಿ ಇಂದು ಅಂತಿಮ ತೀರ್ಪು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಆಧಾರ್‌ ಕಾರ್ಡ್‌ ಖಡ್ಡಾಯವಾಗೊಳಿಸಿದ್ದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಸೆ.26 ರಂದು ತಮ್ಮ ಅಂತಿಮ ತೀರ್ಪು ಪ್ರಕಟಿಸಲಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಐದು ಜನರ ಪೀಠವು ಆಧಾರ್‌ಗೆ ಸಾಂವಿಧಾನಿಕ ಸಿಂಧುತ್ವ ನೀಡುವ ಬಗ್ಗೆ ನಾಳೆ ತೀರ್ಪು ಪ್ರಕಟಿಸಲಿದ್ದಾರೆ. ಆಧಾರ್ ಖಡ್ಡಾಯಗೊಳಿಸಿ ಕೇಂದ್ರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು.

ಸಿಜೆಐ ದೀಪಕ್ ಮಿಶ್ರಾ ತೀರ್ಪು ನೀಡಲಿರುವ 7 ಪ್ರಮುಖ ಪ್ರಕರಣಗಳುಸಿಜೆಐ ದೀಪಕ್ ಮಿಶ್ರಾ ತೀರ್ಪು ನೀಡಲಿರುವ 7 ಪ್ರಮುಖ ಪ್ರಕರಣಗಳು

1967 ರ ಕೇಶವಾನಂದ ಭಾರತಿ ಪ್ರಕರಣದ ನಂತರ ಸುಪ್ರೀಂಕೋರ್ಟ್‌ನಲ್ಲಿ ಅತಿ ಸುದೀರ್ಘವಾದ ವಾದ ಆಲಿಸುವಿಕೆ (ಹಿಯರಿಂಗ್‌) ನಡೆದ ಎರಡನೇ ಪ್ರಕರಣ ಆಧಾರ್‌ನದ್ದೇ ಆಗಿದೆ. ಆಧಾರ್‌ ಪ್ರಕರಣದಲ್ಲಿ ನಾಲ್ಕು ತಿಂಗಳುಗಳ ಕಾಲ ಇಯರಿಂಗ್ ನಡೆದಿದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಐದು ತಿಂಗಳು ನಡೆದಿತ್ತು.

Aadhaar be made a must? Supreme Court verdict tomorrow

ಗೌಪತ್ಯೆ ಅಥವಾ ಖಾಸಗಿತನ ಸಹ ಮೂಲಭೂತ ಹಕ್ಕು ಎಂದು ಕಳೆದ ವರ್ಷವಷ್ಟೆ ಇದೇ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಈಗ ಆಧಾರ್‌ ಸಂಖ್ಯೆಯು ಗೌಪತ್ಯೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದ ಮಂಡಿಸಲಾಗಿದ್ದು, ನಾಳಿನ ತೀರ್ಪು ಕುತೂಹಲ ಮೂಡಿಸಿದೆ.

ಇನ್ನುಮುಂದೆ ಕಾಲೇಜುಗಳಲ್ಲೇ ಸಿಗುತ್ತೆ ಆಧಾರ್ ಕಾರ್ಡ್ ಇನ್ನುಮುಂದೆ ಕಾಲೇಜುಗಳಲ್ಲೇ ಸಿಗುತ್ತೆ ಆಧಾರ್ ಕಾರ್ಡ್

ಕೇಂದ್ರ ಸರ್ಕಾರವು ಈಗಾಗಲೇ ಮೊಬೈಲ್ ಸಿಮ್ ಖರೀದಿ, ವಿದೇಶಿ ಹಣಕಾಸು ವ್ಯವಹಾರ, ಪಾಸ್‌ಪೋರ್ಟ್‌, ಬ್ಯಾಂಕ್‌ ಖಾತೆ, ಚಾಲನಾ ಪರವಾನಗಿ ಸೇರಿದಂತೆ ಹಲವು ಸರ್ಕಾರಿ ಸೇವೆಗಳಿಗೆ ಆಧಾರ್‌ ಸಂಖ್ಯೆ ಕಡ್ಡಾಯ ಮಾಡಿದೆ. ನಾಳಿನ ತೀರ್ಪು ವ್ಯತಿರಿಕ್ತವಾಗಿ ಬಂದರೆ ಕೇಂದ್ರಕ್ಕೆ ಹಿನ್ನಡೆ ಆಗಲಿದೆ.

ಮೊಬೈಲ್ ಸಿಮ್ ಬೇಕಾದ್ರೆ, ಆಧಾರ್ ಜತೆಗೆ ಮುಖ ತೋರಿಸ್ಬೇಕಾಗುತ್ತೆ! ಮೊಬೈಲ್ ಸಿಮ್ ಬೇಕಾದ್ರೆ, ಆಧಾರ್ ಜತೆಗೆ ಮುಖ ತೋರಿಸ್ಬೇಕಾಗುತ್ತೆ!

ಕೇಂದ್ರವು ಆಧಾರ್ ಅನ್ನು ಸುಪ್ರೀಂನಲ್ಲಿ ಸಮರ್ಥಿಸಿಕೊಂಡಿದ್ದು, ಆಧಾರ್‌ನಿಂದ ಗೌಪತ್ಯಗೆ ಧಕ್ಕೆ ಆಗುವುದಿಲ್ಲ ಎಂದಿದೆ. ಅಲ್ಲದೆ ಆಧಾರ್‌ನಿಂದ ಮಾಹಿತಿ ಸೋರಿಕೆ ಸಹ ಆಗದು ಎಂದು ಹೇಳಿದೆ.

English summary
Supreme court going to give its verdict tomorrow about Adhaar should made as must or not. Five judges bench leading Cij Dipak Misra will announce verdict tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X