• search

ಅತ್ಯಾಚಾರದ ದೂರು ಹಿಂಪಡೆದರೆ ಜಮೀನು ಮನೆ: ಕ್ರೈಸ್ತ ಸನ್ಯಾಸಿನಿಗೆ ಆಮಿಷ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ತಿರುವನಂತಪುರಂ, ಜುಲೈ 30: ಬಿಷಪ್ ವಿರುದ್ಧದ ಅತ್ಯಾಚಾರದ ದೂರನ್ನು ಹಿಂಪಡೆದರೆ ಜಮೀನು, ಕಟ್ಟಡ ಮತ್ತು ಸುರಕ್ಷತೆ ಒದಗಿಸುವುದಾಗಿ ಪಾದ್ರಿಯೊಬ್ಬರು ಆಮಿಷವೊಡ್ಡುತ್ತಿದ್ದಾರೆ ಎಂದು ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯ ಕುಟುಂಬ ಆರೋಪಿಸಿದೆ.

  ಅತ್ಯಾಚಾರ ಸಂತ್ರಸ್ತೆ ಸನ್ಯಾಸಿನಿಗೆ ಬಂದಿದ್ದ ಫೋನ್ ಕರೆಯ ಆಡಿಯೊ ಮುದ್ರಣವು ಸೋರಿಕೆಯಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

  ಜಲಂಧರ್‌ನ ಬಿಷಪ್ ಫ್ರಾಂಕೊ ಮುಲ್ಲ್ಯಾಕಲ್ ಅವರು 2014-2016ರವರೆಗೆ ತಮ್ಮ ಮೇಲೆ 13 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 46 ವರ್ಷದ ಸನ್ಯಾಸಿನಿ ಆರೋಪಿಸಿದ್ದಾರೆ.

  ಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನ

  ತನ್ನನ್ನು ಬೆದರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಸನ್ಯಾಸಿನಿ ಹಾಗೂ ಇತರೆ ಐವರ ವಿರುದ್ಧ ಬಿಷಪ್ ದೂರು ನೀಡಿದ ಬಳಿಕ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

  A priest called nun to withdraw rape case against bishap in kerala

  ಅತ್ಯಾಚಾರ ಪ್ರಕರಣದಲ್ಲಿ ಕೇರಳ ಪೊಲೀಸರಿಂದ ಬಿಷಪ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತಾವು ಅಮಾಯಕ ಎಂದು ಪ್ರತಿಪಾದಿಸಿದ್ದಾರೆ. ಸನ್ಯಾಸಿನಿ ವಿರುದ್ಧ ಶಿಸ್ತುಕ್ರಮ ಕೈಗೊಂಡ ಕಾರಣಕ್ಕೆ ನಡೆಸಿದ ಸಂಚಿನ ಬಲಿಪಶು ಆಗಿರುವುದಾಗಿ ಬಿಷಪ್ ಹೇಳಿಕೊಂಡಿದ್ದಾರೆ.

  ಸೋರಿಕೆಯಾದ ದೂರವಾಣಿ ಕರೆಯಲ್ಲಿ ಸಂತ್ರಸ್ತೆಯ ಪರ ನಿಂತಿರುವ ಸನ್ಯಾಸಿನಿಯೊಬ್ಬರ ಜತೆ ಮಾತನಾಡಿದ್ದ ಪಾದ್ರಿಯೊಬ್ಬರು, ನಾವು ಕೆಲವು ಭೂಮಿ ಖರೀದಿಸಿ, ಅಲ್ಲಿ ಕಟ್ಟಡ ಕಟ್ಟಿ ನಿಮ್ಮೆಲ್ಲರನ್ನೂ ಅಲ್ಲಿ ಸುರಕ್ಷಿತವಾಗಿ ಇರಿಸಬಹುದು. ಅವೆಲ್ಲವೂ ತಕ್ಷಣವೇ ನಡೆಯುವುದಿಲ್ಲ. ಎಲ್ಲದಕ್ಕೂ ಸಮಯ ಬೇಕು. ನಾವು ಅದರ ಬಗ್ಗೆ ಚರ್ಚಿಸಬೇಕು' ಎಂದು ಹೇಳಿದ್ದಾರೆ.

  ಕೇರಳದಲ್ಲಿ ಪಾದ್ರಿಯಿಂದ ಮತ್ತೊಂದು ಅತ್ಯಾಚಾರ ಪ್ರಕರಣ

  'ನೀವು ನಿಮ್ಮ ದೂರನ್ನು ಹಿಂದಕ್ಕೆ ಪಡೆದುಕೊಳ್ಳದೇ ಇದ್ದರೆ ಇವು ಸಾಧ್ಯವಾಗುವುದಿಲ್ಲ. ದೂರು ವಾಪಸ್ ಪಡೆದು ಒಡಿಶಾ, ಆಂಧ್ರದ ನಿಮ್ಮ ಕಾನ್ವೆಂಟ್‌ಗಳಿಗೆ ಹೋದರೆ ಬೆದರಿಕೆಗಳು ಬರಬಹುದು.

  ಆದರೆ ನೀವು ಸ್ವತಂತ್ರವಾಗಿ ಮುಂದುವರಿದು ಬೇರೆ ಬಿಷಪ್ ಬಳಿ ಹೋದರೆ ಯಾವ ಬೆದರಿಕೆಯೂ ಬರುವುದಿಲ್ಲ. ನೀವು ಇದರ ಬಗ್ಗೆ ಯೋಚಿಸಿ ಸಕಾರಾತ್ಮಕವಾಗಿ ನಿರ್ಧಾರ ಕೈಗೊಂಡರೆ, ಯಾವುದೇ ರೀತಿಯಲ್ಲಾದರೂ ನಾನು ಸಹಾಯ ಮಾಡಬಲ್ಲೆ' ಎಂದಿದ್ದಾರೆ.

  ಆದರೆ, ದೂರು ಹಿಂಪಡೆಯಲು ನಿರಾಕರಿಸಿದ ಸನ್ಯಾಸಿನಿ, 'ನಮಗೆ ನ್ಯಾಯ ಬೇಕು. ನಾವು ಯಾವುದೇ ಬದುಕನ್ನು ಅಥವಾ ನಮ್ಮ ಘನತೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಹುದ್ದೆ ತ್ಯಜಿಸಲು ಪಾದ್ರಿಗೆ ಸೂಚನೆ

  ಸನ್ಯಾಸಿನಿಗೆ ಬೆದರಿಕೆ ಕರೆ ಮಾಡಿದ ಆರೋಪ ಎದುರಿಸುತ್ತಿರುವ ಫಾದರ್ ಜೇಮ್ಸ್ ಅವರಿಗೆ ಪದತ್ಯಾಗ ಮಾಡುವಂತೆ ಸೂಚಿಸಲಾಗಿದೆ.

  ಈ ಘಟನೆಯನ್ನು ದುರದೃಷ್ಟಕರ ಎಂದು ಹೇಳಿರುವ ಕ್ಯಾರ್ಮೆಲಿಟೀಸ್ ಆಫ್ ಮೆರಿ ಇಮ್ಯಾಕ್ಯುಲೇಟ್ (ಸಿಎಂಐ), ಸನ್ಯಾಸಿನಿಯರಿಗೆ ಭೂಮಿ, ಕಟ್ಟಡ ಒದಗಿಸುತ್ತೇವೆಂಬ ಪಾದ್ರಿಯ ಹೇಳಿಕೆಗೂ ತಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

  ಸ್ಥಾನದಿಂದ ಕೆಳಕ್ಕಿಳಿಯುವಂತೆ ಫಾದರ್ ಜೇಮ್ಸ್ ಅವರಿಗೆ ಸೂಚಿಸಲಾಗಿದೆ. ಈ ಸಂಬಂಧ ವಿಚಾರಣೆ ಆರಂಭಿಸಲಾಗಿದೆ ಎಂದು ಸಿಎಂಐ ಹೇಳಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Family of a Kerala based nun has alleged that a priest made a call offering land, bulding, and safety if she withdrew her complaint aganist Jalandhar bishap.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more