ಅದೃಷ್ಟ ಅಂದ್ರೆ ಇದು, ರೈಲು ಅಪಘಾತದಲ್ಲಿ ಬದುಕುಳಿದ ವ್ಯಕ್ತಿ!

ಒಡಿಶಾ: ಇದು ಸಾವು ಗೆದ್ದ ಅದೃಷ್ಟಶಾಲಿಯ ಕಥೆ, ಸಾವಿನ ಕ್ಷಣವನ್ನ ಕಣ್ಣಾರೆ ಕಂಡಿದ್ದ ಪ್ರಯಾಣಿಕನ ವ್ಯಥೆ. ನಿನ್ನೆ ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬದುಕುಳಿದಿದ್ದು, ಆ ಭೀಕರ ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ (Odisha Train Accident).

ಒಡಿಶಾ ರೈಲು ದುರಂತದಲ್ಲಿ 233ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 200ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ ಸೇರಿದಂತೆ 45 ಸಂಚಾರಿ ಆರೋಗ್ಯ ತಂಡಗಳು ರಕ್ಷಣಾ ಕಾರ್ಯ ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡ್ತಿದ್ದ ಪ್ಯಾಸೆಂಜ್ ಒಬ್ಬರು ಜೀವ ಉಳಿಸಿಕೊಂಡಿದ್ದಾರೆ. ಅಲ್ಲದೆ ಭೀಕರ ಅಪಘಾತದ ಕ್ಷಣಗಳನ್ನ ಕಣ್ಣಾರೆ ಕಂಡು ಅದನ್ನ ವಿವರಿಸಿದ್ದಾರೆ (Odisha Train Accident).

coromandel train accident

ನೋಡ ನೋಡುತ್ತಿದ್ದಂತೆ ಬಂದ ಜವರಾಯ!

ಇದೀಗ ಅಪಘಾತಕ್ಕೆ ಈಡಾಗಿರುವ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನುಭವ್ ದಾಸ್ ಅನ್ನೋರು ಕೂಡ ಪ್ರಯಾಣ ಮಾಡುತ್ತಿದ್ದರು. ದಿಢೀರ್ ಬಾಲಸೋರ್ ಬಳಿ ಭೀಕರ ಅಪಘಾತ ಸಂಭವಿಸಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಅನುಭವ್ ದಾಸ್, ಅಪಘಾತದ ತೀವ್ರತೆಯನ್ನ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಅನುಭವ್ ಮಾಡಿರುವ ಟ್ವೀಟ್ ಇದೀಗ ಟ್ರೆಂಡ್ ಕ್ರಿಯೇಟ್ ಮಾಡುವ ಜತೆಗೆ ರೈಲು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.

ಸಾವಿನ ಸುಳಿಯಿಂದ ಪ್ರಯಾಣಿಕ ಜಸ್ಟ್ ಮಿಸ್

ಅನುಭವ್ ದಾಸ್ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ, ಹೌರಾದಿಂದ ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಒಬ್ಬ ಪ್ರಯಾಣಿಕನಾಗಿ ನಾನು ಯಾವ ಅಪಾಯ ಇಲ್ಲದೆ ಪಾರಾಗಿದ್ದಕ್ಕೆ ತುಂಬಾ ಕೃತಜ್ಞ. ಬಹುಶಃ ಇದು ಭೀಕರ ರೈಲು ಅಪಘಾತ, ಈ ಘಟನೆ ಹೇಗೆ ನಡೆಯಿತು ಎಂದರೆ...

ಹಳಿತಪ್ಪಿ ಪಕ್ಕದ ರೈಲಿಗೆ ಡಿಕ್ಕಿ

ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಳಿತಪ್ಪಿದ ಬೋಗಿಗಳು ಪಕ್ಕದ ಟ್ರ್ಯಾಕ್‌ನಲ್ಲಿ ಎದುರು ಬರ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದವು. ಯಶವಂತಪುರ ಎಕ್ಸ್‌ಪ್ರೆಸ್‌ನ 3 ಜನರಲ್ ಬೋಗಿಗೆ ಸಂಪೂರ್ಣ ಹಾನಿಯಾಗಿದೆ. ಜನರಲ್, ಸ್ಲೀಪರ್, ಎಸಿ 3 ಟೈರ್ ಮತ್ತು ಎಸಿ 2 ಸೇರಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ 13 ಕೋಚ್‌ಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ.

ರೈಲು ಹಳಿ ಮೇಲೆ ರಕ್ತಪಾತ

ಉತ್ಪ್ರೇಕ್ಷೆ ಮಾಡಬಾರದು ಆದರೆ 200-250 ಕ್ಕೂ ಹೆಚ್ಚು ಜನರ ಸಾವಿಗೆ ಸಾಕ್ಷಿಯಾಗಿದ್ದೇನೆ. ಕುಟುಂಬಗಳು ನಜ್ಜುಗುಜ್ಜಾದವು, ಕೈಕಾಲುಗಳಿಲ್ಲದ ದೇಹಗಳು ಮತ್ತು ರೈಲು ಹಳಿಗಳ ಮೇಲೆ ಬ್ಲಡ್ ಬಾತ್ ಆಗಿದೆ. ಇದು ನಾನು ಎಂದಿಗೂ ಮರೆಯಲಾಗದ ದೃಶ್ಯವಾಗಿತ್ತು. ದೇವರು ಕುಟುಂಬಗಳಿಗೆ ಸಹಾಯ ಮಾಡುತ್ತಾನೆ. ನನ್ನ ಸಾಂತ್ವನ. ಹೀಗೆ ಅನುಭವ್ ದಾಸ್ ತಾವು ಕಂಡ ಭೀಕರ ರೈಲು ಅಪಘಾತದ ಅನುಭವ ಬಿಚ್ಚಿಟ್ಟಿದ್ದಾರೆ.

coromandel train accident

ದೇಹ ನೋಡಿ ಸಂಬಂಧಿಕರ ಕಣ್ಣೀರು

ಈಗಾಗಲೇ 230ಕ್ಕೂ ಹೆಚ್ಚು ಜನ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ಹಾಗೇ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ 2 ಲಕ್ಷ ರೂಪಾಯಿ ಸೇರಿ ಸಣ್ಣಪುಟ್ಟ ಗಾಯಗಳೊಂದಿಗೆ ನರಳುತ್ತಿರುವ ಇತರ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮೃತರ ಸಂಬಂಧಿಕರು ತಮ್ಮವರ ಮೃತ ದೇಹ ನೋಡಿ ಕಣ್ಣಿರು ಹಾಕುತ್ತಿರುವ ದೃಶ್ಯ ಮನಸ್ಸು ಹಿಂಡುವಂತಿದೆ.

ತುರ್ತು ಸಂಪರ್ಕ ಮಾಡಲು ಸಹಾಯವಾಣಿ

ಇನ್ನು ಸಹಾಯವಾಣಿಗೆ ಈ ಸಂಖ್ಯೆಗಳನ್ನ ಸಂಪರ್ಕ ಮಾಡಬಹುದಾಗಿದೆ. ಬಂಗಾರಪೇಟೆ (Bangarpet): 08153 255253, ಬೆಂಗಳೂರು (Bangalor): 080-22356409, ಕುಪ್ಪಂ (Kuppam): 8431403419, ಕೆಜೆಎಮ್​ (KJM):+91 88612 03980, ಭದ್ರಕ್ (Bhadrak): 8455889900, ಕಟಕ್ (Cuttack): 8455889917, ಭುವನೇಶ್ವರ (Bhubaneswar): 8455889922, ಖುರ್ದಾ ರಸ್ತೆ (Khurda Road): 6370108046, ಬ್ರಹ್ಮಪುರ (Brahmapur): 89173887241, ಪಲಾಸ (Palasa): 8978881006 ಹಾಗೂ ಹೌರಾ ಸಹಾಯವಾಣಿ ಸಂಖ್ಯೆ (Howrah Helpline Number): 033-26382217 ಗೆ ಸಂಪರ್ಕ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+