ಮೊಬೈಲ್ ಗೇಮ್ ಅಡಿಕ್ಟ್ ಆಗಿದ್ದರೇ ಎಚ್ಚರ: ಸೋತೆ ಎಂದು ಕತ್ತು ಸೀಳಿಕೊಂಡ ಯುವಕ!
ಭುವನೇಶ್ವರ , ಫೆಬ್ರವರಿ.18: ಆನ್‌ಲೈನ್ ಗೇಮ್‌ಗಳು, ಮೊಬೈಲ್ ಗೇಮ್‌ಗಳಿಗೆ ಮಕ್ಕಳು ಮತ್ತು ಯುವಜನತೆ ಹೆಚ್ಚಾಗಿ ಆಡಿಕ್ಟ್ ಆಗುತ್ತಿದ್ದಾರೆ. ಇದರಿಂದ ಆಗುತ್ತಿರುವ ಅನಾಹುತ ಒಂದೆರಡಲ್ಲ. ಇಂತಹದ್ದೇ ಮತ್ತೊಂದು ಘಟನೆ ಒಡಿಶಾದಲ್ಲಿ ವರದಿಯಾಗಿದೆ. ಒಡಿಶಾ ಮೂಲದ 24 ವರ್ಷದ ಯುವಕ ಆನ್‌ಲೈನ್ ಗೇಮ್‌ನಲ್ಲಿ ಸೋತ ನಂತರ ಬ್ಲೇಡ್‌ನಿಂದ ತನ್ನದೇ ಕತ್ತು ಸೀಳಿಕೊಂಡಿದ್ದಾನೆ.
ಹೌದು, ಶುಕ್ರವಾರ ಸಂಜೆ ಜರ್ಪಾದ ಪೊಲೀಸ್ ಠಾಣೆ ವ್ಯಾಪ್ತಿಯ ಜೆರೆಂಗ್ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದೆ. ಯುವಕನನ್ನು ಸೌಮ್ಯ ರಂಜನ್ ನಾಯಕ್ ಎಂದು ಗುರುತಿಸಲಾಗಿದ್ದು, ಸದ್ಯ ಕಟಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಸಂತ್ರಸ್ತ ಮೊಬೈಲ್ ಗೇಮ್ ಆಡುತ್ತಿದ್ದರು. ಮೂರು ಬಾರಿ ಸೋತ ನಂತರ ಬೇಸರದಿಂದ ಕತ್ತು ಸೀಳಿಕೊಂಡಿದ್ದಾರೆ. ವಿಷಯ ತಿಳಿದ ಅವರ ಪೋಷಕರು ತಕ್ಷಣವೇ ಅಂಗುಲ್ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಅವರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಿದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಮಧ್ಯಪ್ರದೇಶದ ಮತ್ತೊಂದು ಪ್ರಕರಣ
2022 ರಲ್ಲಿ, ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಆನ್‌ಲೈನ್ ಗೇಮ್‌ನಲ್ಲಿ 40,000 ರೂ ಕಳೆದುಕೊಂಡ ನಂತರ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿತ್ತು. 'ಫ್ರೀ ಫೈರ್' ಎಂಬ ಗೇಮ್‌ಗಾಗಿ ಬ್ಯಾಂಕ್ ಖಾತೆಯಿಂದ 40,000 ರೂಪಾಯಿ ಖರ್ಚು ಮಾಡಿದ್ದ ಬಾಲಕ. ಬಳಿಕ ತನ್ನ ಪೋಷಕರಲ್ಲಿ ಕ್ಷಮೆಯಾಚಿಸಿದ ಸೂಟೈಡ್ ಲೇಟರ್ ಬರೆದಿದ್ದರು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕದ ಪ್ರಕರಣ
ಕಳೆದ ವರ್ಷ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಯೊಬ್ಬರು 65 ಲಕ್ಷ ರೂಪಾಯಿ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡರು. ವಿಜಿತ್ ಶಾಂತಾರಾಮ ಹೆಗಡೆ ಎಂದು ಗುರುತಿಸಲಾದ ವ್ಯಕ್ತಿ ಆನ್‌ಲೈನ್ ಗೇಮ್‌ಗಳಿಗೆ ಚಟ ಹೊಂದಿದ್ದು, ಅದರ ಮೂಲಕ ಹಣ ಸಂಪಾದಿಸಿದ್ದರು ಎಂದು ವರದಿಯಾಗಿದೆ. ಆದರೆ, ಮೃತ ವ್ಯಕ್ತಿ 65 ಲಕ್ಷ ರೂಪಾಯಿಯ ಜೊತೆಗೆ ಎಲ್ಲವನ್ನೂ ಕಳೆದುಕೊಂಡಿದ್ದರು. ಅವರು ಬಿಟ್ಟು ಹೋಗಿದ್ದ ಸೂಸೈಡ್ ನೋಟ್‌ನಲ್ಲಿ ಈ ವಿವರಗಳು ಇದ್ದವು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಚೀನಾದಲ್ಲಿ 52 ಲಕ್ಷ ಕಳೆದುಕೊಂಡ ಬಾಲಕಿ
ಇನ್ನು, ಚೀನಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಗೇಮಿಂಗ್‌ಗಾಗಿ 449,500 ಯುವಾನ್ ಅಂದರೆ ಅಂದಾಜು 52 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದು ಅಮ್ಮನ ಬ್ಯಾಂಕ್ ಖಾತೆಯನ್ನೇ ಖಾಲಿ ಮಾಡಿಬಿಟ್ಟಿದ್ದರು. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌ನ ಪ್ರಕಾರ, ಶಾಲೆಯಯೂ ಬಾಲಕಿ ಅತಿಯಾಗಿ ಫೋನ್ ಬಳಸುತ್ತಿದ್ದಳು. ಇದನ್ನು ಶಿಕ್ಷಕರು ಬಾಲಕಿಯ ತಾಯಿಗೆ ತಿಳಿಸಿದ್ದಾರೆ. ಆಕೆ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಮಗಳು ಎಲ್ಲಾ ಹಣವನ್ನು ಹಾಳು ಮಾಡಿರುವುದು ಬೆಳಕಿಗೆ ಬಂದಿದೆ.












Click it and Unblock the Notifications