ಏರ್‌ಇಂಡಿಯಾದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ
ಬೆಂಗಳೂರು, ಜನವರಿ 7: ಕಳೆದ ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಕುಡಿದು ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬೈ ವ್ಯಕ್ತಿ ಶಂಕರ್ ಮಿಶ್ರಾ ಅವರನ್ನು ಶುಕ್ರವಾರ ತಡರಾತ್ರಿ ದೆಹಲಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿ ರಾಷ್ಟ್ರ ರಾಜಧಾನಿ ದೆಹಲಿಗೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 26 ರಂದು, ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ಘಟನೆ ನಡೆದ ಬಳಿಕ ಆತ ಪರಾರಿಯಾಗಿದ್ದು, ಆತನ ಪತ್ತೆಗೆ ಲುಕ್‌ಔಟ್ ನೋಟಿಸ್, ಏರ್‌ಪೋರ್ಟ್ ಅಲರ್ಟ್ ನೀಡಲಾಗಿತ್ತು. ಶಂಕರ್ ಮಿಶ್ರಾ ಇರುವಿಕೆಯ ಬಗ್ಗೆ ಕೆಲವು ರಹಸ್ಯ ಸುಳಿವುಗಳನ್ನು ಪಡೆದ ನಂತರ ದೆಹಲಿ ಪೊಲೀಸರು ಅವನನ್ನು ಹಿಡಿಯಲು ಕರ್ನಾಟಕದ ಬೆಂಗಳೂರಿನಲ್ಲಿ ತಂಡವನ್ನು ನಿಯೋಜಿಸಿದ್ದರು.
ಅವನು ತನ್ನ ಫೋನ್ ಸ್ವಿಚ್ ಆಫ್ ಮಾಡಿದರೂ, ಅವನು ತನ್ನ ಸ್ನೇಹಿತರೊಂದಿಗೆ ಸಂವಹನ ನಡೆಸಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸುತ್ತಿದ್ದನು, ಇದು ಅವನ ಮೇಲೆ ಪೊಲೀಸರಿಗೆ ಸಂದೇಹ ಬಂದು ಬೆಂಗಳೂರಿನಲ್ಲಿ ಇರುವ ಮಾಹಿತಿ ತಿಳಿಯಿತು ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
34 ವರ್ಷದ ಮಿಶ್ರಾ ಅವರು ಕನಿಷ್ಠ ಒಂದು ಸ್ಥಳದಲ್ಲಿ ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅನ್ನು ಬಳಸಿದ್ದರು ಎಂದು ಮೂಲಗಳು ತಿಳಿಸಿವೆ. ನವೆಂಬರ್ 26 ರಂದು ನ್ಯೂಯಾರ್ಕ್- ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ, ಶಂಕರ್ ಮಿಶ್ರಾ ಅವರು ತಮ್ಮ ಪ್ಯಾಂಟ್ ಅನ್ನು ಬಿಚ್ಚಿ ಮತ್ತು ಬಿಸಿನೆಸ್ ಕ್ಲಾಸ್ ವರ್ಗದಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಆದರೆ ಆತ ಘಟನೆ ನಂತರ ತನ್ನ ಹೆಂಡತಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡದಂತೆ ಮಹಿಳೆಯನ್ನು ಬೇಡಿಕೊಂಡಿದ್ದನು ಎಂದು ವರದಿಗಳು ತಿಳಿಸಿವೆ.

ಮುಂದೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದಿದ್ದ ಏರ್ ಇಂಡಿಯಾ
ಏರ್ ಇಂಡಿಯಾ ಈ ವಾರವಷ್ಟೇ ಪೊಲೀಸ್ ದೂರು ದಾಖಲಿಸಿತ್ತು. ಮುಂದೆ ಯಾವುದೇ ಸಮಸ್ಯೆಯಾಗುವುದಿಲ್ಲ ಅಥವಾ ಜಗಳವಾಗಲ್ಲ ಎಂದು ಹೇಳಿತ್ತು. ಮಹಿಳಾ ಸ್ವಾತಂತ್ರವನ್ನು ಗೌರವಿಸಿ ವಿಮಾನ ಲ್ಯಾಂಡಿಂಗ್ ನಂತರ ಆರೋಪಿ ಮಿಶ್ರಾ ಅವರನ್ನು 30 ದಿನಗಳ ಕಾಲ ವಿಮಾನ ಹಾರಾಟ ನಿಷೇಧಿಸಿತು. ಆದರೆ ಇದು ಸಾಕಾಗುವುದಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇನ್ನೊಬ್ಬ ಪ್ರಯಾಣಿಕರಿಂದ ಆತನಿಗೆ ಹೋಗಲು ಸೂಚನೆ
ದೂರುದಾರರು ತನಗೆ ಮಿಶ್ರಾ ಅವರ ಮುಖವನ್ನು ನೋಡಲು ಇಷ್ಟವಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದರು. ಅಪರಾಧಿಯನ್ನು ತನ್ನ ಮುಂದೆ ಕರೆತಂದಾಗ ಆತ ಅಳಲು ಮತ್ತು ಕ್ಷಮೆಯಾಚಿಸಲು ಪ್ರಾರಂಭಿಸಿದ್ದನು ಎಂದು ವರದಿಗಳು ತಿಳಿಸಿದ್ದವು. ಊಟದ ನಂತರ ಲೈಟ್ ಡಿಮ್ ಮಾಡಿದಾಗ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆಯ ನಂತರ, ಇನ್ನೊಬ್ಬ ಪ್ರಯಾಣಿಕರು ಆತನನ್ನು ಹೊರಡುವಂತೆ ಹೇಳುವವರೆಗೂ ವ್ಯಕ್ತಿ ಅಲ್ಲಿಯೇ ನಿಂತಿದ್ದನು ಎನ್ನಲಾಗಿದೆ.

ಹಣ ವಾಪಸ್ ನೀಡಿದ್ದ ಮಹಿಳೆ ಮಗಳು
ಶಂಕರ್ ಮಿಶ್ರಾನ ವಕೀಲರು ಅವರು ದೂರು ದಾಖಲಿಸಿದ ಮಹಿಳೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡು ಅವರಿಗೆ ₹ 15,000 ಪರಿಹಾರವನ್ನು ಪಾವತಿಸಿದ್ದಾರೆ ಮತ್ತು ಅವರ ವಸ್ತುಗಳನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಹೇಳಿದರು. ಆದರೆ ಮಹಿಳೆಯ ಮಗಳು ಒಂದು ತಿಂಗಳ ನಂತರ ಹಣವನ್ನು ಹಿಂದಿರುಗಿಸಿದ್ದರು, ಅವರು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಸಂಸ್ಥೆಯ ಭಾರತದ ಉಪಾಧ್ಯಕ್ಷರಾಗಿದ್ದನು
ಆರೋಪಿ ಶಂಕರ್ ಮಿಶ್ರಾ ಅವರ ಉದ್ಯೋಗದಾತರಾದ ಅಮೇರಿಕನ್ ಹಣಕಾಸು ಸೇವಾ ಕಂಪನಿ ವೆಲ್ಸ್ ಫಾರ್ಗೋ ಕೂಡ ಅವರನ್ನು ವಜಾಗೊಳಿಸಿದ್ದರು. ಅವರು ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಸಂಸ್ಥೆಯ ಭಾರತದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.












Click it and Unblock the Notifications