ಮುತ್ತನ್ನು ತೂರಿಬಿಡುತ್ತಿದ್ದ ಅಸಭ್ಯನ ವಿರುದ್ಧ ಗೃಹಿಣಿ ದೂರು

ಬೆಂಗಳೂರು, ಜೂನ್ 07 : ಪಕ್ಕದ ಮನೆಯ 31ರ ಹರೆಯದ ಆಂಟಿ ಕಂಡೊಡನೆ ಮುತ್ತನ್ನು ತೂರಿಬಿಡುತ್ತಿದ್ದ, ಅಸಹ್ಯಕರ ಸಂಜ್ಞೆಯನ್ನು ಮಾಡಿ ಲೈಂಗಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದ ವ್ಯಕ್ತಿಯ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದು ಒಂದೆರಡು ಬಾರಿ ನಡೆದ ಘಟನೆಯಲ್ಲ. ಕಳೆದ 6 ತಿಂಗಳಿನಿಂದ ಆತ ಗೃಹಿಣಿಗೆ ಇದೇ ರೀತಿ ಚಿತ್ರಹಿಂಸೆ ನೀಡುತ್ತಿದ್ದ. ಕೆಲ ಸಂಜ್ಞೆಯ ಮೂಲಕ ಲೈಂಗಿಕ ಕೋರಿಕೆಯನ್ನೂ ಮುಂದಿಡುತ್ತಿದ್ದ ಎಂದು ಮದುವೆಯಾಗಿ ಒಂದು ಮಗುವಿರುವ ಮಹಿಳೆ ದೂರಿದ್ದಾರೆ.

ಹಲವಾರು ಬಾರಿ ತನ್ನ ಮನೆಯಿಂದಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದಿರುವ ಅವರು, ತನ್ನ ಮಗನನ್ನು ಶಾಲೆಯಿಂದ ಕರೆದುಕೊಂಡು ಬರಲೆಂದು ಮನೆಯಿಂದ ತೆರಳುತ್ತಿದ್ದಾಗ ಮತ್ತೆ ಫ್ಲೈಯಿಂಗ್ ಕಿಸ್ ನೀಡಿದ್ದಾನೆ.

A man booked over sending flying kiss to woman

ಆತನ ಚೇಷ್ಟೆಯಿಂದ ಬೇಸತ್ತ ಮಹಿಳೆ, ಇದನ್ನೆಲ್ಲ ತನ್ನ ಗಂಡನಿಗೆ ತಿಳಿಸಿದ್ದಾರಲ್ಲದೆ ಹನುಮಂತ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಹನುಮಂತ ನಗರ ಪೊಲೀಸರು ಆ ವ್ಯಕ್ತಿಯ ವಿರುದ್ಧ ಕೇಸನ್ನು ದಾಖಲಿಸಿಕೊಂಡಿದ್ದು, ಸ್ಟೇಷನ್ನಿಗೆ ಬಂದು ಹೇಳಿಕೆ ನೀಡಬೇಕೆಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+