7 ಗಂಡು ಮಕ್ಕಳ ಪಾಲಕರಿಗೆ ಒಬ್ಬ ಹೆಣ್ಣು ಮಗು ಸಿಕ್ಕರೂ, ಸಾಕುವ ಭಾಗ್ಯವಿಲ್ಲ!

ಧೋಲ್ಪುರ್, ಸೆಪ್ಟೆಂಬರ್ 26: ಹೊಲದಲ್ಲಿ ಬಿಸಾಡಿದ್ದ ಹೆಣ್ಣು ಮಗುವನ್ನು ರಕ್ಷಿಸಿದ ಮಾನವೀಯ ಅಂತಃಕರಣದ ದಂಪತಿ ಇದೀಗ ಕಾನೂನಿನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇನು? ಮಗುವನ್ನು ರಕ್ಷಿಸುವುದೂ ಅಪರಾಧವೇ?

ಬಿಸಾಡಲ್ಪಟ್ಟ ಹೆಣ್ಣು ಮಗುವನ್ನು ರಕ್ಷಿಸುವುದು ಅಪರಾಧವಲ್ಲ, ಆದರೆ ಕಾನೂನು ಪ್ರಕಾರ ದತ್ತುಪಡೆಯದೆ ಅದನ್ನು ತಾನೇ ಸಾಕುವ ನಿರ್ಧಾರ ಕೈಗೊಳ್ಳುವುದು ಅಪರಾಧ ಎನ್ನುತ್ತದೆ ಕಾನೂನು.

ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನೆಲೆಸಿರುವ ಲೀಲಾಧರ್ ಕುಶ್ವಾಹ ಮತ್ತು ಆತನ ಪತ್ನಿ ಸುಖ್ ದೇವಿ ದಂಪತಿಗೆ ಹೆಣ್ಣು ಮಕ್ಕಳೆಂದರೆ ಪಂಚಪ್ರಾಣ. ಆದರೆ ಅವರಿಗೆ ಜನರಿಸಿದ ಏಳೂ ಮಕ್ಕಳೂ ಗಂಡು ಮಕ್ಕಳೇ. ಇತ್ತೀಚೆಗೆ ಲೀಲಾಧರ್ ಹೊಲಕ್ಕೆ ತೆರಳಿದ್ದ ಸಮಯದಲ್ಲಿ ನವಜಾತ ಶಿಶುವೊಂದು ಅಳುತ್ತಿರುವುದು ಕೇಳಿಸಿದೆ. ಹತ್ತಿರ ಹೋಗಿ ನೋಡಿದರೆ ಹೆಣ್ಣು ಮಗುವೆಂಬ ಕಾರಣಕ್ಕೋ ಏನೋ, ಯಾರೋ ಕಟುಕರು ನವಜಾತ ಶಿಶುವನ್ನು ಬಿಸಾಡಿ ಹೋಗಿರುವುದು ಗಮನಕ್ಕೆ ಬಂದಿದೆ. ಹೆಣ್ಣು ಮಕ್ಕಳಿಗಾಗಿ ಪರಿತಪಿಸುತ್ತಿದ್ದ ದಂಪತಿಗಳಿ ಈ ಮಗುವನ್ನೆ ತಮ್ಮ ಮಗಳಂತೇ ಸಾಕುವುದಾಗಿ ಹೇಳಿ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ.

ಸದ್ಯ ದೇವರು ಕಣ್ಣುಬಿಟ್ಟ ಎಂದುಕೊಳ್ಳುವ ಹೊತ್ತಿಗೆ, ಇವರ ಸಂತೋಷವನ್ನು ನೋಡಲಾಗದವರ್ಯಾರೋ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಕುರಿತು ದೂರು ನೀಡದಿದ್ದಾರೆ.

ಮಗುವನ್ನು ಕಾನೂನು ಪ್ರಕಾರ ದತ್ತುಪಡೆಯದೆ, ಸುಮ್ಮನೆ ಇರಿಸಿಕೊಳ್ಳುವುದು ಅಪರಾಧ, ಬೇಕಿದ್ದರೆ ಕಾನೂನು ಪ್ರಕಾರ ಮಗುವನ್ನು ದತ್ತುಪಡೆಯಿರಿ, ಇಲ್ಲ, ಅದನ್ನು ಪೊಲೀಸರಿಗೆ ಹಿಂದಿರುಗಿಸಿ ಎಂದು ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ. ಅಕಸ್ಮಾತ್ ಕಾನೂನು ಪ್ರಕಾರ ದತ್ತು ಪಡೆಯುವುದಕ್ಕೆ ಹೋದರೂ ಮಗು ಇವರಿಗೆ ಸಿಕ್ಕೇ ಬಿಡುತ್ತದೆ ಎಂಬ ಖಾತ್ರಿ ಇಲ್ಲ. ಏಕೆಂದರೆ ಈಗಾಗಲೇ ಹೆಣ್ಣು ಮಗುವನ್ನು ದತ್ತುಪಡೆಯಲು ಸಾಕಷ್ಟು ದಂಪತಿಗಳು ಸಾಲಿನಲ್ಲಿದ್ದಾರೆ. ಮೊದಲೇ ಬೇಡಿಕೆ ಇಟ್ಟಿದ್ದವರಿಗೆ ಮಗುವನ್ನು ದತ್ತುಪಡೆಯುವ ಅವಕಾಶ ಸಿಗಬಹುದು. ಅಲ್ಲದೆ, ಮಗು ಸಿಕ್ಕ ದಿನದಿಂದ 2 ತಿಂಗಳವರೆಗೆ ದತ್ತುಪಡೆಯುವಂತಿಲ್ಲ. ಮಗುವಿನ ನಿಜವಾದ ಪಾಲಕರನ್ನು ಅದುವರೆಗೆ ಹುಡುಕಲಾಗುತ್ತದೆ ಮತ್ತು ಮಗುವಿಗೆ ಯಾವುದೇ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಇತ್ತೀಚೆಗೆ ತಾನೇ ಒಬ್ಬ ಗಂಡು ಮಗುವಿಗೆ ಜನ್ಮ ನೀಡಿರುವ ಸುಖ್ ದೇವಿ ಅವರು ಹೊಲದಲ್ಲಿ ಸಿಕ್ಕ ಹೆಣ್ಣು ಮಗುವಿಗೂ ಎದೆಹಾಲು ನೀಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ ಕಾನೂನಿನ ಸಂಕೀರ್ಣ ನಿಯಮಗಳು ಈ ತಾಯಿ-ಮಗಳ ನಿಷ್ಕಲ್ಮಶ ಪ್ರೇಮಕ್ಕೆ ತಿಲಾಂಜಲಿ ಇಟ್ಟುಬಿಡುತ್ತದೆಯಾ ಎಂಬುದನ್ನು ಕಾದು ನೋಡಬೇಕು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+