10 ರೂ. ನೋಟಿನಲ್ಲೇ ಪ್ರಿಯಕರನಿಗೆ ಗೆಳತಿ ಕೊಟ್ಟ ಸಂದೇಶ; ಓಡಿ ಹೋಗೋಣ ಬಾ!

ನವದೆಹಲಿ, ಏಪ್ರಿಲ್ 20: ಓಡಿ ಹೋಗೋಣ ಬಾ ಎಂದರೆ... ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ನಟಿಸಿರುವ ಪಾಂಡು ರಂಗ ವಿಠಲ ಸಿನಿಮಾದಲ್ಲಿ ಇಂಥದೊಂದು ಹಾಡನ್ನು ನೀವು ಕೇಳಿಯೇ ಇರುತ್ತೀರಾ. ಸಿನಿಮಾದಲ್ಲಿ ಇರುವ ಅದೊಂದು ಹಾಡಿದಂಥದ್ದೇ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇದೇ ತಿಂಗಳಿನಲ್ಲಿ ನನ್ನ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ. ಗೆಳೆಯ ಸಾಧ್ಯವಾದಷ್ಟು ಬೇಗ ಬಂದು ನನ್ನನ್ನು ಕರೆದುಕೊಂಡು ಹೋಗು. ಇದೋ ನಿನಗಾಗಿ ಕಾದು ಕುಳಿತಿರುವ ನಿಮ್ಮ ಪ್ರೇಯಸಿ. ಹೀಗೆ ಬರೆದಿರುವ 10 ರೂಪಾಯಿ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಸಲಿಗೆ 10 ರೂಪಾಯಿ ನೋಟಿನಲ್ಲಿ ಬರೆದಿರುವ ವಿಷಯದ ಹಿನ್ನೆಲೆ ಏನು. ಸೋಷಿಯಲ್ ಮೀಡಿಯಾದಲ್ಲಿ ಈ ನೋಟಿನಲ್ಲಿ ಬರೆದಿರುವ ಸಾಲುಗಳ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ ಎನ್ನುವುದರ ಕುರಿತು ಒಂದು ಕುತೂಹಲಕಾರಿ ಸುದ್ದಿ ಇಲ್ಲಿದೆ ನೋಡಿ.

ಕುಸುಮ್ ಎಂಬ ಯುವತಿ ಹೆಸರಿನಲ್ಲಿ ಪ್ರೇಮ ಸಂದೇಶ

ಕುಸುಮ್ ಎಂಬ ಯುವತಿಯು ತನ್ನ ಪ್ರೇಮಿ ವಿಶಾಲ್ ಎಂಬಾತನಿಗೆ 10 ರೂಪಾಯಿ ನೋಟಿನಲ್ಲಿ ಪ್ರೇಮ ಸಂದೇಶ ಬರೆದಿದ್ದಾರೆ. ತನ್ನ ಮದುವೆಯ ಬಗ್ಗೆ ಈ ಸಂದೇಶದಲ್ಲಿ ಉಲ್ಲೇಖ ಮಾಡಲಾಗಿದ್ದು, ಮದುವೆ ದಿನಾಂಕಕ್ಕೂ ಮೊದಲೇ ತನ್ನನ್ನು ಕರೆದುಕೊಂಡು ಹೋಗುವಂತೆ ಈ ನೋಟಿನ ಸಂದೇಶದಲ್ಲಿ ಬರೆಯಲಾಗಿದೆ.

10 ರೂಪಾಯಿ ನೋಟಿನ ಸಂದೇಶದಲ್ಲಿ ಏನಿದೆ?

10 ರೂಪಾಯಿ ನೋಟಿನ ಸಂದೇಶದಲ್ಲಿ ಏನಿದೆ?

"ವಿಶಾಲ್, ಏಪ್ರಿಲ್ 26ರಂದು ನನಗೆ ಮದುವೆ ನಿಗದಿಯಾಗಿದೆ. ದಯವಿಟ್ಟು ನಿನ್ನೊಂದಿಗೆ ನನ್ನನ್ನು ಕರೆದುಕೊಂಡು ಹೋಗು. ಐ ಲವ್ ಯೂ. ನಿನ್ನ ಪ್ರೀತಿಯ ಕುಸುಮ್" ಎಂದು 10 ರೂಪಾಯಿ ನೋಟಿನಲ್ಲಿ ಉಲ್ಲೇಖಿಸಲಾಗಿದೆ.

ವಿಪುಲ್ ಎಂಬುವವರ ಟ್ವಿಟ್ಟರ್ ಖಾತೆಯಲ್ಲಿ ನೋಟು ಪೋಸ್ಟ್

ಟ್ವಿಟ್ಟರ್ ಬಳಕೆದಾರ ವಿಪುಲ್ ಅವರು ವಿಶಾಲ್ ಸಂದೇಶವನ್ನು ಸ್ವೀಕರಿಸುತ್ತಾರೆ ಎಂಬ ಭರವಸೆಯಲ್ಲಿ 10 ರೂಪಾಯಿ ನೋಟಿನ ಚಿತ್ರವನ್ನು ಶೇರ್ ಮಾಡಿದ್ದಾರೆ. ''ಟ್ವಿಟ್ಟರ್, ನಿಮ್ಮ ಶಕ್ತಿಯನ್ನು ತೋರಿಸಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್‌ಗಳಿಗೆ ಟ್ಯಾಗ್ ಮಾಡಿ,''ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.

ವೈರಲ್ ನೋಟಿಗೆ ಹೇಗಿದೆ ನೆಟ್ಟಿಗರ ಪ್ರತಿಕ್ರಿಯೆ?

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ಪೋಸ್ಟ್ 400ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಚಿತ್ರವು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನೆಟ್ಟಿಗರು ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. "ಹತಾಶೆಯ ಸಮಯಗಳಲ್ಲಿ ಹತಾಶೆ ಕ್ರಮಗಳಿಗೆ ಕಾರಣವಾಗುತ್ತದೆ," ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ವಿಶಾಲ್, ಈ ನಡವಳಿಕೆ ಏನು ಭಾಯ್?," ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+