ದಸರಾಗೆ ಉದ್ಯೋಗಿಗಳಿಗೆ ಬೆಂಜ್‌ ಕಾರು, ಬೈಕ್‌ ಗಿಫ್ಟ್‌! ಎಷ್ಟು ಜನಕ್ಕೆ ಗೊತ್ತಾ?

ಸಾಮಾನ್ಯವಾಗಿ ದಸರಾ ಹಬ್ಬಕ್ಕೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಒಂದು ದಿನ ರಜೆ ಕೊಟ್ಟು, ಕೈಯಲ್ಲಿ ಒಂದು ಸ್ವೀಟ್‌ ಬಾಕ್ಸ್‌ ಇಡೋದು ಪದ್ಧತಿ ಪಾಲಿಸಿಕೊಂಡು ಬಂದಿವೆ. ಆದರೆ ಕಂಪನಿಯೊಂದು ಈ ದಸರಾಗೆ ಬೈಕ್‌ ಹಾಗೂ ದುಬಾರಿ ಕಾರುಗಳನ್ನೇ ಉದ್ಯೋಗಿಗಳಿಗೆ ಗಿಫ್ಟ್‌ ಆಗಿ ಕೊಟ್ಟಿದೆಯಂತೆ.

ಹೌದು, ಚೆನ್ನೈ ಮೂಲದ ಟೀಮ್‌ ಡಿಟೇಲಿಂಗ್‌ ಸೊಲೂಷನ್ಸ್‌ (Team Detailing Solutions) ಎನ್ನುವ ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದಸರಾ ಉಡುಗೊರೆಯಾಗಿ ವಿವಿಧ ಮಾದರಿಯ ಕಾರುಗಳನ್ನು ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದರಲ್ಲಿ ಒಂದೇ ಮಾದರಿಯ ಕಾರುಗಳಿಲ್ಲ. ಸಣ್ಣ ಕಾರಿನಿಂದ ಹಿಡಿದು ಬೆಂಜ್‌ ಕಾರು ಕೂಡ ಇದೆ ಎನ್ನಲಾಗಿದೆ.

A Chennai-Based Company Has Gifted Cars-Bikes To Its Employees on Dasara

ತನ್ನ ಕಂಪನಿಯಲ್ಲಿ ಬೆಸ್ಟ್‌ ಪರ್ಫಾರ್ಮೆನ್ಸ್‌ ತೋರಿದ ಉದ್ಯೋಗಿಗಳನ್ನು ಆಯ್ಕೆ ಮಾಡಿ, ಒಟ್ಟು 28 ಕಾರು ಹಾಗೂ 29 ಬೈಕ್‌ಗಳನ್ನು ಹಬ್ಬದ ದಿನವೇ ಗಿಫ್ಟ್‌ ಆಗಿ ಕೊಟ್ಟಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದು, ಈ ವಿಚಾರ ತಿಳಿದ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿ ನೀಡಿದ್ದ ಸ್ವೀಟ್‌ ಬಾಕ್ಸ್‌ಗಳನ್ನು ಗುರ್‌ ಎಂದು ಗುರಾಯಿಸಿ ನೋಡಿದ್ದಾರೆ.

ಉದ್ಯೋಗಿಗಳ ಅರ್ಹತೆ ಹಾಗೂ ಕಾರ್ಯಕ್ಷಮತೆ ಆಧಾರದಲ್ಲಿ ಹುಂಡೈ, ಟಾಟಾ, ಮಾರುತಿ ಸುಜುಕಿ, ಸ್ಕೋಡಾ ಸೇರಿದಂತೆ ದುಬಾರಿ ಮರ್ಸಿಡೆಸ್ ಬೆಂಜ್‌ ಕಾರುಗಳನ್ನೂ ಕಂಪನಿ ನೀಡಿದೆಯಂತೆ. ಇಂದು ಉದ್ಯೋಗಿಗಳಿಗೆ ಕಾರು ಹಾಗೂ ಬೈಕ್‌ಗಳನ್ನು ವಿತರಿಸಲಾಗಿದೆ.

ನಮ್ಮ ಕಂಪನಿಯ ಸಕ್ಸಸ್‌ನಲ್ಲಿ ಕೆಲಸಗಾರರ ಪಾಲು ದೊಡ್ಡದು. ಅದನ್ನು ಗುರತಿಸುವುದು ನಮ್ಮ ಕರ್ತವ್ಯ. ಎಷ್ಟೋ ಉದ್ಯೋಗಿಗಳಿಗೆ ತಮ್ಮ ಜೀವನದಲ್ಲಿ ಕಾರು ಅಥವಾ ಬೈಕ್‌ ಖರೀದಿಸುವುದು ದೊಡ್ಡ ಕನಸು. ಹಾಗಾಗಿ ಉತ್ತಮ ಕೆಲಸ ಮಾಡಿದ ಉದ್ಯೋಗಿಗಳನ್ನು ಗುರುತಿಸಿ, ಅವರ ಕನಸು ನನಸು ಮಾಡಿದ್ದೇವೆ. ಇದು ಅವರಿಗೆ ಪ್ರೋತ್ಸಾಹವೂ ಹೌದು ಎಂದು ಕಂಪನಿ ಮುಖ್ಯಸ್ಥರು ಹೇಳಿದ್ದಾರೆ ಎಂದು ವರದಿಯಾಗಿದೆ.

A Chennai-Based Company Has Gifted Cars-Bikes To Its Employees on Dasara

ಈ ಕಂಪನಿಯ ಉದ್ಯೋಗಿಗಳಿಗೆ ಮದುವೆಯಾಗುವುದಾದರೆ 50,000 ರೂಪಾಯಿ ಪ್ರೋತ್ಸಾಧನ ಕೂಡ ನೀಡುತ್ತಿದೆಯಂತೆ. ಇದನ್ನು ಈ ವರ್ಷದಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಿದೆ ಎಂದು ಹೇಳಲಾಗಿದೆ.

ಒಂಬತ್ತು ದಿನ ರಜೆ ಕೊಟ್ಟ ಮೀಶೋ: ಇ ಕಾಮರ್ಸ್‌ ಕ್ಷೇತ್ರದ ಮೀಶೋ ಕಂಪನಿ ತನ್ನ ಉದ್ಯೋಗಿಗಳಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 9 ದಿನಗಳವರೆಗೆ ರಜೆ ನೀಡಿ ಚಿಲ್‌ ಮಾಡುವಂತೆ ಹೇಳಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟಣೆ ಹಂಚಿಕೊಂಡಿರುವ ಮೀಶೋ, ಯಾವುದೇ ಲ್ಯಾಪ್‌ಟಾಪ್‌ಗಳಿಲ್ಲ, ಯಾವುದೇ ಮೆಸೇಜ್‌, ಇಮೇಲ್ಸ್‌, ಮೀಟಿಂಗ್‌ಗಳು ಅಥವಾ ಸ್ಟಾಂಡಪ್‌ ಕಾಲ್ಸ್‌ ಕೂಡ ಇರಲ್ಲ, ಒಂಬತ್ತು ದಿನಗಳ ಕಾಲ ಕೆಲಸ ವಿಚಾರಗಳು ಏನೂ ಇಲ್ಲ ಎಂದು ಹೇಳಿದೆ.

ಅಕ್ಟೋಬರ್‌ 26ರಿಂದ ನವೆಂಬರ್‌ 3ರವರೆಗೆ ಎಲ್ಲರಿಗೂ ರೀಸೆಟ್‌ ಹಾಗೂ ರೀಚಾರ್ಜ್‌ ಬ್ರೇಕ್‌. ಈ ವರ್ಷ ನಾವು ವ್ಯಾಪಾರದಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದು, ಈಗ ಸಂಪೂರ್ಣವಾಗಿ ನಮ್ಮ ಬಗ್ಗೆ ಯೋಚಿಸುವ ಸಮಯ. ಈ ವಿರಾಮವು ನಮ್ಮ ಮನಸ್ಸು, ದೇಹಕ್ಕೆ ಆರಾಮ ನೀಡುವ ಜೊತೆಗೆ ಫ್ರೆಶ್‌ ಹಾಗೂ ಹೊಸ ಚೈತನ್ಯದಿಂದ ಮುಂದಿನ ವರ್ಷಕ್ಕೆ ಸಜ್ಜಾಗುವ ಸಮಯ ಎಂದು ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+