ಒಡಿಶಾದಲ್ಲಿ ಪ್ರಪಾತಕ್ಕೆ ಬಿದ್ದ ಲಾರಿ: 9 ಜನ ದುರ್ಮರಣ

Posted By:
Subscribe to Oneindia Kannada

ಗಜಪಟಿ(ಒಡಿಶಾ), ಫೆ 14: ಒಡಿಶಾದ ಗಜಪಟಿ ಜಿಲ್ಲೆಯಲ್ಲಿ ಲಾರಿಯೊಂದು ಪ್ರಪಾತಕ್ಕೆ ಉರುಳಿದ ಪರಿಣಾಮ 9 ಜನ ದುರ್ಮರಣಕ್ಕೀಡಾದ ಘಟನೆ ನಿನ್ನೆ(ಫೆ.13) ನಡೆದಿದೆ.

ಇಟ್ಟಿಗೆಯನ್ನು ಹೊತ್ತ ಲಾರಿ ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಸ್ಕಿಡ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ಪಕ್ಕದಲ್ಲೇ ಇದ್ದ ಸುಮಾರು 50 ಅಡಿ ಆಳದ ಪ್ರಪಾತಕ್ಕೆ ಲಾರಿ ಉರುಳಿದೆ.

ಲಾರಿಯಲ್ಲಿದ್ದ 15 ಜನರಲ್ಲಿ 5 ಜನ ಸ್ಥಳದಲ್ಲೇ ಮೃತರಾಗಿದ್ದರೆ, ಇನ್ನು 4 ಜನ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮೃತರಾಗಿದ್ದಾರೆ.

9 dead in Odisha road mishap

ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least nine people, including four women, died and six others were injured after a brick-laden truck skidded off the road and fell into a 50-feet deep gorge in Odisha's Gajapati district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ