8th Pay Commission: ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳ

ನವದೆಹಲಿ, ಜನವರಿ 18: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗ ರಚನೆಗೆ ಒಪ್ಪಿಗೆ ನೀಡಲಾಗಿದೆ. ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಗಳ ಪರಿಷ್ಕರಣೆಗೆ 8ನೇ ವೇತನ ಆಯೋಗ ರಚನೆಯಾಗಲಿದೆ. ವೇತನ ಆಯೋಗ ತನ್ನ ವರದಿಯನ್ನು ಸಲ್ಲಿಕೆ ಮಾಡಿದ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂಬ ಲೆಕ್ಕಾಚಾರಗಳು ಈಗ ಆರಂಭವಾಗಿವೆ.

8ನೇ ವೇತನ ಆಯೋಗದ ವರದಿ ಜಾರಿ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಲಿದೆ. ಅದರಲ್ಲೂ ವೇತನ ಹೆಚ್ಚಳದಲ್ಲಿ ಫಿಟ್ಮೆಂಟ್‌ ಸೌಲಭ್ಯ ಪ್ರಮುಖ ಪಾತ್ರವಹಿಸಲಿದೆ. ನೌಕರರ ಮಾಸಿಕ ಕನಿಷ್ಠ ವೇತನವು ಎಷ್ಟು ಹೆಚ್ಚಳವಾಗಲಿದೆ?.

8th Pay Commission Union Government Employees Salary Calculator

ಪ್ರಸ್ತುತ ಮಾಸಿಕ ಕನಿಷ್ಠ ವೇತನಕ್ಕೆ ಫಿಟ್ಮೆಂಟ್‌ ಸೌಲಭ್ಯವನ್ನು ಸೇರಿಸಿದ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ? ಎಂಬ ಮಾಹಿತಿ ಸಿಗಲಿದೆ. 8ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಫಿಟ್ಮೆಂಟ್ ಸೌಲಭ್ಯ 2.28ರಷ್ಟು ಎಂದು ನಿರೀಕ್ಷೆ ಮಾಡಲಾಗಿದೆ.

ಸದ್ಯ ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಅನ್ವಯ ಮಾಸಿಕ ಕನಿಷ್ಠ ವೇತನ ಪಡೆಯುತ್ತಿದ್ದಾರೆ. ಫಿಟ್ಮೆಂಟ್ ಸೌಲಭ್ಯವನ್ನು ಸೇರಿಸಿದಾಗ ಮಾಸಿಕ ವೇತನ ಎಷ್ಟಾಗಲಿದೆ? ಎಂಬ ಮಾಹಿತಿ ತಿಳಿಯಲಿದೆ.

ವೇತನ ಎಷ್ಟು ಹೆಚ್ಚಾಗಬಹುದು?: ಕೇಂದ್ರ ಸರ್ಕಾರದ ಮೊದಲ ಹಂತದ ನೌಕರರ ಸದ್ಯದ ವೇತನ 18,000 ರೂ. ಇದ್ದರೆ 18,000*2.28 = 40,994 ಅಂದರೆ ಮೂಲ ವೇತನ 41,000 ರೂ. ತನಕ ಆಗಬಹುದು ಎಂದು ಲೆಕ್ಕಚಾರ ಹಾಕಲಾಗಿದೆ.

2ನೇ ಹಂತದಲ್ಲಿ ತುಟ್ಟಿಭತ್ಯೆ (ಡಿಎ) ಸೇರಿಸಬೇಕಿದೆ. ಕೇಂದ್ರ ಸರ್ಕಾರ ನೀಡುವ ತುಟ್ಟಿಭತ್ಯೆಯನ್ನು ಸಹ ಮೂಲ ವೇತನಕ್ಕೆ ಸೇರಿಸಬೇಕಿದೆ.

3ನೇ ಹಂತದಲ್ಲಿ ವೇತನ ಹಂತದ ಆಧಾರದದಲ್ಲಿ ನೌಕರರ ವೇತನ ಎಷ್ಟಾಗಲಿದೆ? ಎಂದು ಲೆಕ್ಕ ಹಾಕಬೇಕಿದೆ. ಹಂತ 1ರ ನೌಕರರ ವೇತನ 18 ರಿಂದ 41, 000 ರೂ. ಗಳಿಗೆ, ಹಂತ 13ರ ನೌಕರರ ವೇತನ 1,23,100 ರಿಂದ 1,47,720 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ಜನವರಿ 1, 2026ರಿಂದ ಜಾರಿಗೆ ಬರುವಂತೆ ಹೊಸ ವೇತನವನ್ನು ಪಡೆಯುವ ನಿರೀಕ್ಷೆ ಇದೆ. ಮೂಲ ವೇತನ ಹೆಚ್ಚಳವಾಗುವ ಕಾರಣ ಉದ್ಯೋಗಿಗಳಿಗೂ ಅನುಕೂಲವಾಗಲಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸರ್ಕಾರದ ಎಲ್ಲ ನೌಕರರಿಗೂ 8ನೇ ವೇತನ ಆಯೋಗ ರಚನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ. 1947 ರಿಂದ, 7 ವೇತನ ಆಯೋಗಗಳನ್ನು ರಚಿಸಲಾಗಿದೆ, ಕೊನೆಯ ಆಯೋಗದ ವರದಿಯನ್ನು 2016ರಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು" ಎಂದು ಹೇಳಿದರು.

"7ನೇ ವೇತನ ಆಯೋಗದ ಅವಧಿ 2026ರಲ್ಲಿ ಕೊನೆಗೊಳ್ಳಲಿದ್ದು, 2025ರಲ್ಲಿ ಪ್ರಕ್ರಿಯೆಯನ್ನು ಪ್ರಾರಂಭಿಸುವುದರಿಂದ ಅದು ಪೂರ್ಣಗೊಳ್ಳುವ ಮೊದಲು ಶಿಫಾರಸುಗಳನ್ನು ಸ್ವೀಕರಿಸಲು ಮತ್ತು ಪರಿಶೀಲಿಸಲು ಸಾಕಷ್ಟು ಸಮಯಾವಕಾಶ ದೊರೆಯುತ್ತದೆ" ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+