8th Pay Commission: ಸರ್ಕಾರಿ ನೌಕರರ ಮೂಲ ವೇತನ ₹34,500ಗೆ ಹೆಚ್ಚಳ ನಿರೀಕ್ಷೆ
ಬೆಂಗಳೂರು, ಡಿಸೆಂಬರ್ 06: ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಇರುವ ಕೇಂದ್ರ ಸರ್ಕಾರಿ ನೌಕರರ ಹಣದುಬ್ಬರವನ್ನು 7ನೇ ವೇತನ ಆಯೋಗದ ಭತ್ಯೆ ಏರಿಕೆಗಳು ನಿಭಾಯಿಸುತ್ತಿವೆ. ನೌಕರರು ಹಣದುಬ್ಬರ ನಿರ್ವಹಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಗಾಗ ಮಹತ್ವದ ನಿರ್ಧಾರ ಕೈಗೊಳ್ಳುತ್ತದೆ. 2026ರಲ್ಲಿ ಜಾರಿಯಾಗಲಿರುವ 8ನೇ ವೇತನ ಆಯೋಗದಡಿ ಮೂಲ ವೇತನ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ನೌಕರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೇಂದ್ರ ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗ ಜಾರಿಗೊಳಿಸುತ್ತದೆ. 2016ರಲ್ಲಿ ಜಾರಿಯಾಗಿದ್ದ 7ನೇ ವೇತನ ಆಯೋಗವು ಮುಂದಿನ ಒಂದು ವರ್ಷದಲ್ಲಿ ಕೊನೆಗೊಳ್ಳಲಿದೆ. 2026ರ ಜನವರಿಯಲ್ಲಿ 8ನೇ ವೇತನ ಆಯೋಗ ಜಾರಿ ಆಗಬೇಕಿದೆ. ನಿರೀಕ್ಷೆಯಂತೆ ಶೀಪಾರಸಿನ ಪ್ರಕ್ರಿಯೆ ಪೂರ್ಣಗೊಂಡು ಅನುಷ್ಠಾನಗೊಂಡರೆ ನೌಕರರ ಮೂಲಕ ವೇತನ, ತುಟ್ಟಿಭತ್ಯೆ, ತುಟ್ಟಪಿ ಪರಿಹಾರದಲ್ಲಿ ಭಾರೀ ಬದಲಾವಣೆಗಳು ಆಗಲಿವೆ.

ಮೂಲವೇತನ 34,500 ರೂಪಾಯಿಗೆ ಹೆಚ್ಚಳ
ಸರ್ಕಾರಿ ನೌಕರರು 8ನೇ ವೇತನ ಆಯೋಗದಡಿ ಮೂಲ ವೇತನ 18,000 ರೂಪಾಯಿಯಿಂದ 34,500 ರೂಪಾಯಿಗೆ ಏರಿಕೆ ಆಗಬಹುದೆಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಇಷ್ಟು ಪ್ರಮಾಣದಲ್ಲಿ ಏರಿಕೆ ಆಗಲು ಸರ್ಕಾರ ನೌಕರರು ಯೂನಿಯನ್‌ಗಳು ನೀಡಿರುವ ಮನವಿ ಒಪ್ಪಬೇಕು. ಅದರಂತೆ ಫಿಟ್ಮೆಂಟ್ ಅಂಶವನ್ನು 2.86ರಷ್ಟು ಪರಿಗಣಿಸಬೇಕು. ಅಂದಾಗ ಮೂಲ ವೇತನ ಗರಿಷ್ಠ ಹೆಚ್ಚಳ ಕಾಣಲಿದೆ.
ಇಲ್ಲಿ ನೌಕರರ ಬೇಸರಕ್ಕೆ ಕಾರಣವಾದ ಅಂಶವೆಂದರೆ, ಈವರೆಗೂ ಕೇಂದ್ರ ಸರ್ಕಾರ, ಸಚಿವಾಲಯವಾಗಲಿ ಅಥವಾ ಸಂಬಂಧಿಸಿದ ಕೇಂದ್ರ ಸರ್ಕಾರಿ ನೌಕರರೆ ಆಗಲಿ 8ನೇ ವೇತನ ಆಯೋಗದ ಜಾರಿ ಕುರಿತು ಅಧಿಕೃತ ಯಾವೊಂದು ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಸರ್ಕಾರ ಯಾವ ಈ ಬಗ್ಗೆ ಘೋಷಣೆ ಮಾಡಲಿದೆ ಎಂದು ಕಾಯುತ್ತಿದ್ದಾರೆ.
ಹಣದುಬ್ಬರ ಎದುರಿಸಲು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಭತ್ಯೆ ಏರಿಕೆಗಳ ಸೂತ್ರ ನವೀಕರಿಬಹುದು. ಈಗಾಗಲೇ ಏಳನೇ ವೇತನ ಆಯೋಗದಡಿ ಕಾಲ ಕಾಲಕ್ಕೆ ತುಟ್ಟಿಭತ್ಯೆ, ತುಟ್ಟಿ ಪರಿಹಾರ ನೀಡುತ್ತಾ ಬರಲಿದೆ. ಇವುಗಳನ್ನು ಸೂತ್ರವಾಗಿಟ್ಟುಕೊಂಡು ಎಂಟನೇ ವೇತನ ಆಯೋಗದಲ್ಲಿ ಒಂದಷ್ಟು ನವೀಕರಣ ಮಾಡಬಹುದು ಅಂತಲೂ ನೌಕರರು ಅಂದಾಜಿಸಿದ್ದಾರೆ.

ಈ ಹಿಂದೆಯು ಮೂಲ ವೇತನ ಏರಿಕೆ
ಒಂಬತ್ತು ವರ್ಷಗಳ ಹಿಂದೆ ಸರ್ಕಾರ 7ನೇ ವೇತನ ಆಯೋಗ ಪ್ರಕಟಿಸುವಬ ಹೊತ್ತಿನಲ್ಲಿ ನೌಕರರ ಮೂಲ ವೇತನವು ಶೇಕಡಾ 23ರಷ್ಟು ಏರಿಕೆ ಆಗಿತ್ತು. ಅದೇ ಪದ್ಧತಿ 8ನೇ ವೇತನ ಆಯೋಗ ಅನುಷ್ಠಾನ ಹೊತ್ತಿನಲ್ಲೂ ನಡೆಯುತ್ತದೆ ಎಂದು ನೌಕರರು ಭಾವಿಸಿದ್ದಾರೆ. ಅವರು ಅಂದುಕೊಂಡಂತೆ ಆದಲ್ಲಿ ಕನಿಷ್ಠ ಮೂಲ ವೇತನ 34,500 ರೂ.ಗೆ ಹೆಚ್ಚಾಗಬಹುದು. ಇದೆಲ್ಲದರ ಅಪ್ಡೇಟ್‌ಗಾಗಿ ನೌಕರರು ಕುತೂಹಲದಿಂದ ಕಾಯುತ್ತಿದ್ದಾರೆ. ಭವಿಷ್ಯದಲ್ಲಿ ಸುಧಾರಿತ ಆರ್ಥಿಕ ನಿಯಮಗಳು ಜಾರಿಗೆ ಬರಲಿವೆ ಎಂದು ನಿರೀಕ್ಷಿಸುತ್ತಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications