ಯೋಗಿ ಆಡಳಿತದ 2 ತಿಂಗಳಲ್ಲಿ 803 ರೇಪ್, 729 ಕೊಲೆ ಪ್ರಕರಣ ದಾಖಲು ?

Posted By:
Subscribe to Oneindia Kannada

ಲಖ್ನೋ, ಜುಲೈ 26: ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಅಲ್ಲಿ 803 ಅತ್ಯಾಚಾರ, 729 ಕೊಲೆ ಹಾಗೂ 799 ಲೂಟಿ ಪ್ರಕರಣಗಳು ನಡೆದಿವೆ ಎಂದು ದ ಸಿಯಾಸ್ಯಾಟ್ ಡೈಲಿ ವರದಿ ಮಾಡಿದೆ.

ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಸ್ಫೋಟಕ ಪತ್ತೆ

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಗಳವಾರ (ಜುಲೈ 25) ಈ ವಿಚಾರ ಪ್ರಸ್ತಾಪವಾಗಿದ್ದು, ಸಮಾಜವಾದಿ ಪಕ್ಷದ ಶಾಸಕ ಶೈಲೇಂದ್ರ ಯಾದವ್ ಲಲಾಯ್ ಅವರು ಈ ಬಗೆಗಿನ ಅಂಕಿ-ಅಂಶಗಳನ್ನು ಸದನದಲ್ಲಿ ಮಂಡಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

803 rapes, 729 murders in 2 months of Yogi Raj in Uttar Pradesh

ಯೋಗಿ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು ಮಾರ್ಚ್ 19, 2017ರಂದು. ಮಾರ್ಚ್ 15ರಿಂದ ಮೇ 9ರವರೆಗಿನ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಅಗಾಧವಾಗಿ ಹಾಳಾಗಿಹೋಗಿದೆ ಎಂದು ಯಾದವ್ ಸದನಕ್ಕೆ ತಿಳಿಸಿದ್ದಾರೆ. ಇಷ್ಟು ಅತ್ಯಾಚಾರ, ಕೊಲೆಗಳ ಜತೆಯಲ್ಲೇ 2,682 ಅಪಹರಣ, 60 ಡಕಾಯತಿ ಪ್ರಕರಣಗಳೂ ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಯೋಗಿಗೆ ತಾಜ್ ಮಹಲ್ ಸಾಂಸ್ಕೃತಿಕ ಪರಂಪರೆ ಕೇಂದ್ರವೇ ಅಲ್ವಂತೆ!

ಇದಕ್ಕೆ ಸಂಬಂಧಪಟ್ಟ ಸಚಿವರೊಬ್ಬರು ಉತ್ತರಿಸಿ, ಶೇ. 67.16ರಷ್ಟು ಕೊಲೆ ಕೇಸ್ ಗಳಲ್ಲಿ, ಶೇ. 71.12ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಹಾಗೂ ಶೇ. 52.23ರಷ್ಟು ಅಪಹರಣ ಪ್ರಕರಣಗಳಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

Siddaramaiah thinking to contest from koppal assembly for 2018 elections

ಆದರೆ, ಸಚಿವರ ಈ ಉತ್ತರದಿಂದ ಸಮಾಧಾನಗೊಳ್ಳದ ವಿರೋಧ ಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ (ಸಮಾಜವಾದಿ), ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸದನದಲ್ಲೇ ತಮ್ಮ ಪಕ್ಷದ ಶಾಸಕರೊಂದಿಗೆ ಪ್ರತಿಭಟನೆ ನಡೆಸಿದರಲ್ಲದೆ, ಸಭಾತ್ಯಾಗ ನಡೆಸಿದರೆಂದು ವರದಿಯಲ್ಲಿ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the first two months of the Yogi Adityanath government in Uttar Pradesh, 803 incidents of rape and 729 of murder were reported, the state Assembly was informed Tuesday.
Please Wait while comments are loading...