2025ರಲ್ಲಿ ವಿದೇಶಿ ಪ್ರವಾಸಿಗರ ಹೃದಯಗಳನ್ನು ಗೆದ್ದ ವೈರಲ್ ಕಥೆಗಳು
2025ರಲ್ಲಿ ಭಾರತದಲ್ಲಿ ವಿದೇಶಿ ಪ್ರವಾಸಿಗರು ಹಂಚಿದ ಕೆಲವು ಸಕಾರಾತ್ಮಕ ವೈರಲ್ ಕಥೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಜನಪ್ರಿಯಗೊಂಡಿವೆ. ಕೆಲವು ವೈರಲ್ ವಿಡಿಯೋದಲ್ಲಿ ಭಾರತೀಯರ ಸಹಾಯಕತೆ ಮತ್ತು ಸಾಂಸ್ಕೃತಿಕ ಸೌಜನ್ಯಯನ್ನ ಗಮನಿಸಬಹುದಾಗಿದೆ. ಭಾರತಕ್ಕೆ ಬಂದ ವಿದೇಶಿಗರು ಇಲ್ಲಿನ ಆಹಾರದಿಂದ ಹಿಡಿದು ಪ್ರವಾಸಿ ತಾಣಗಳನ್ನು ಇಷ್ಟ ಪಡ್ತಾರೆ. ಇಲ್ಲಿನ ಆಚಾರ, ವಿಚಾರ ಸೇರಿದಂತೆ ಹಲವು ವಿಚಾರವನ್ನು ಕಲಿಯುತ್ತಾರೆ.
2025 ರಲ್ಲಿ ಭಾರತಕ್ಕೆ ಬಂದ ವಿದೇಶಿಗರು ಇಲ್ಲಿನ ಉಡುಗೆ, ಆಹಾರ ಪದ್ದತಿ, ಭಾಷೆ, ಸಹಾಯಕ ಮನೋಭಾವ, ಪ್ರೀತಿ-ವಿಶ್ವಾಸಕ್ಕೆ ಮನಸೋತಿದ್ದು, ಭಾರತದ ಪ್ರವಾಸದ ಕುರಿತು ವಿಡಿಯೋಗಳನ್ನ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಮನಸ್ಸಿನ ಮಾತುಗಳನ್ನ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಬಂದ ಹಲವು ವಿದೇಶಿಗರು . ಬಸ್ಸು, ರೈಲು, ಆಟೋಗಳಲ್ಲಿ ಓಡಾಡುವ ಮೂಲಕ ಹೊಚ್ಚ ಹೊಸ ಅನುಭವವನ್ನು ಪಡೆದಿದ್ದಾರೆ. ಭಾರತಕ್ಕೆ ಬಂದ ಹಲವು ವಿದೇಶಿಗರಲ್ಲಿ ಕೆಲ ವಿದೇಶಿಗರ ಹೃದಯಗಳನ್ನ ಗೆದ್ದ ವೈರಲ್ ಕಥೆಗಳು ಇಲ್ಲಿವೆ ನೋಡಿ.

ಭಾರತೀಯ ರೈಲಿನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ
ಸ್ಕಾಟಿಷ್ ಕಂಟೆಂಟ್ ಕ್ರಿಯೇಟರ್ ಭಾರತೀಯ ರೈಲಿನಲ್ಲಿ ಪ್ರಯಾಣಿಸಿದ್ದು ತಮಗಾದ ಆನಂದದಾಯಕ ಅನುಭವದ ಬಗ್ಗೆ ಹೇಳಿದ್ದಾರೆ. ಭಾರತೀಯ ರೈಲ್ವೆ ಸೇವೆಯನ್ನು ಶ್ಲಾಘಿಸಿದ್ದಾರೆ. ವಿವಿಧ ದೇಶಗಳಲ್ಲಿನ ರೈಲ್ವೆ ಸೇವೆಗೂ ಇಲ್ಲಿಗೂ ಏನೆಲ್ಲಾ ವ್ಯತ್ಯಾಸವಿದೆ ಎಂದು ವಿವರಿಸಿದ್ದು, ಈ ವಿಡಿಯೋ ಇಂಟರ್ನೆಟ್‌ನಲ್ಲಿ ಎಲ್ಲಾರ ಗಮನ ಸೆಳೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೂ ಭಾರತೀಯ ರೈಲ್ವೆಯ ದಕ್ಷ ಸೇವೆಯನ್ನು ಹಾಡಿ ಹೊಗಳಿದ್ದಾರೆ.
hughabroad ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಟಿಕೆಟ್ ಕಲೆಕ್ಟರ್ ಬಂದು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ವಿದೇಶಿಗನು ಟಿಕೆಟ್ ಪರಿಶೀಲನಾ ವ್ಯವಸ್ಥೆಯ ದಕ್ಷತೆ ಮತ್ತು ರೈಲಿನಲ್ಲಿರುವ ವಿಶಾಲವಾದ ಆಸನ ವ್ಯವಸ್ಥೆಗಳನ್ನು ಹೊಗಳಿದ್ದಾರೆ. ನಿಲ್ದಾಣಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ರೈಲು ಚಲಿಸುತ್ತಿದ್ದಂತೆ ಟಿಕೆಟ್ ಕಲೆಕ್ಟರ್ ಬಂದು ನನ್ನ ಟಿಕೆಟ್ ತೆಗೆದುಕೊಂಡು, ನನ್ನ ಹೆಸರು ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿದರು ಎಂದು ಹೇಳುವುದನ್ನು ನೋಡಬಹುದು.
ಮಗಳಿಗೆ "ಇಂಡಿಯಾ" ಎಂದು ಹೆಸರಿಟ್ಟ ವಿದೇಶಿ ತಾಯಿ
ವಿದೇಶಿ ದಂಪತಿಗಳು ತಮ್ಮ ಹೆಣ್ಣು ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿರುವ ಬಗ್ಗೆ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಖತ್ ವೈರಲ್ ಆಗಿದೆ. ಸದ್ಯ ಭಾರತ ಪ್ರವಾಸದಲ್ಲಿರುವ ವಿದೇಶಿ ಕುಟುಂಬವನ್ನು ಯೂಟ್ಯೂಬರ್‌ನೊಬ್ಬ ಮಾತನಾಡಿಸಿದ್ದಾನೆ. ಈ ವೇಳೆ ಬಾಲಕಿಯ ತಾಯಿ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ವಿದೇಶಿ ಮಹಿಳೆಯೊಬ್ಬರು ತನ್ನ ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟ ಹಿಂದಿನ ಹೃದಯಸ್ಪರ್ಶಿ ಕಾರಣವನ್ನು ಬಹಿರಂಗಪಡಿಸುವ ಸುಂದರ ಕ್ಷಣವನ್ನು ಸೆರೆಹಿಡಿಯುವ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಗಳಿಗೆ "ಇಂಡಿಯಾ" ಎಂದು ಹೆಸರು ಇಟ್ಟ ವಿದೇಶಿ ತಾಯಿ ಎಂಬ ವಿಷಯವು ಇತ್ತೀಚೆಗೆ ಸುದ್ದಿಯಾಗಿದೆ.
ವಿದೇಶಿ ಮಹಿಳೆ ತನ್ನ ಮಗಳಿಗೆ "ಇಂಡಿಯಾ" ಎಂದು ಹೆಸರಿಡುವುದಕ್ಕೆ ಕಾರಣವನ್ನು ಸಹ ನೀಡಿದ್ದಾರೆ. ಭಾರತದ ಬಣ್ಣಗಳು ಮತ್ತು ಶಬ್ದಗಳು ಅವಳಿಗೆ ಪ್ರೇರಣೆಯಾಗಿವೆ ಎಂದು ಮಹಿಳೆ ತಿಳಿಸಿದ್ದಾರೆ. ಈ ವಿಡಿಯೋದ ಕುರಿತು ವಿದೇಶಿ ತಾಯಿಯ ಹೆಸರು, ದೇಶ, ಮತ್ತು ಹೆಚ್ಚಿನ ಹಿನ್ನೆಲೆ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದು, ವಿದೇಶಿಯೊಬ್ಬಳು ತನ್ನ ಮಗಳಿಗೆ "India" ಎಂಬ ಹೆಸರನ್ನು ಇಟ್ಟಿರುವುದು ವಿಶೇಷವಾಗಿಯೇ ಗಮನ ಸೆಳೆದಿದೆ.
ಭಾರತವನ್ನು ಅನ್ವೇಷಿಸಲು ಪ್ರವಾಸಿಗರ ಒತ್ತಾಯಿಸಿದ ಆಸ್ಟ್ರೇಲಿಯಾದ ವ್ಲಾಗರ್
ಆಸ್ಟ್ರೇಲಿಯಾದ ಪ್ರವಾಸಿ ಡಂಕನ್ ಮೆಕ್‌ನಾಟ್, ಮಣಿಪುರದ ವೀಡಿಯೊವನ್ನು ಹಂಚಿಕೊಂಡಿದ್ದು, ಅದು ಈ ಪ್ರದೇಶದ ಶಾಂತ ಸೌಂದರ್ಯ ಮತ್ತು ದೈನಂದಿನ ಮೋಡಿಯನ್ನು ಎತ್ತಿ ತೋರಿಸಿತು. ಅವರು ಲೋಕ್‌ಟಕ್ ಸರೋವರದ ಸುತ್ತಲಿನ ದೃಶ್ಯಗಳನ್ನು ಚಿತ್ರೀಕರಿಸಿದರು ಮತ್ತು ಸ್ಥಳೀಯರು ನೀರಿನಿಂದ ವಿಶ್ರಾಂತಿ ಪಡೆಯುವುದನ್ನು, ಸೂರ್ಯ ಮುಳುಗುತ್ತಿದ್ದಂತೆ ಫುಟ್‌ಬಾಲ್ ಆಡುವುದನ್ನು ಸೆರೆಹಿಡಿದ್ದಾರೆ. ಪ್ರವಾಸಿಗರು ಸ್ವಲ್ಪ ಮನೆಕೆಲಸ ಮಾಡಬೇಕು ಮತ್ತು ದೇಶದ ವೈವಿಧ್ಯತೆಯನ್ನು ಕಂಡುಹಿಡಿಯಲು ತಮ್ಮ ಪ್ರಯಾಣದ ಮಾರ್ಗಗಳನ್ನು ವಿಸ್ತರಿಸಬೇಕು ಎಂದು ಹೇಳಿದ್ದಾರೆ.












Click it and Unblock the Notifications