ಕೇರಳದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಭೂ ಕುಸಿತ: 8 ಸಾವು

ಕೋಯಿಕ್ಕೋಡ್, ಜೂನ್ 15: ಕೇರಳದ ಕಟ್ಟಿಪರ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದಾರೆ.

ಇನ್ನೂ ಆರು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಕೋಯಿಕ್ಕೋಡ್ ಜಿಲ್ಲೆಯ ಕರಿಂಚೊಲಾ, ಪುಳ್ಳರನ್ಪರ ಮತ್ತು ಚಮಾಲ್ ಪ್ರದೇಶಗಳಲ್ಲಿಯೂ ಭೂ ಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

 8 killed in Kerala landside

ನದಿಗಳಲ್ಲಿ ನೀರು ಅಪಾಯ ಮಟ್ಟವನ್ನು ಉಕ್ಕಿ ಹರಿಯುತ್ತಿರುವುದರ ಪರಿಣಾಮ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಲ್ಲಿನ ಆಶ್ರಯ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಮುಂಗಾರು ಆರಂಭವಾದಾಗಿನಿಂದಲೂ ಕೇರಳದ ಅನೇಕ ಭಾಗಗಳಲ್ಲಿ ವಿಪರೀತ ಗಾಳಿ ಮಳೆಯಾಗುತ್ತಿದ್ದು, ಭಾರಿ ಪ್ರಮಾಣದ ಅನಾಹುತಗಳನ್ನು ಸೃಷ್ಟಿಸಿದೆ.

ರಾಜ್ಯದ ವಿವಿಧಡೆ ಮಳೆ ಅಬ್ಬರದಿಂದ ಉಂಟಾದ ಅವಘಡಗಳಲ್ಲಿ ಕಳೆದ ವಾರ 13 ಮಂದಿ ಬಲಿಯಾಗಿದ್ದರು. ಇಡುಕ್ಕಿ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಮಳೆಯ ತೀವ್ರತೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+