7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ 53% ಮೂಲ ವೇತನ ಜತೆ ವಿಲೀನವಾಗುತ್ತಾ...

ನವದೆಹಲಿ, ನವೆಂಬರ್ 10: ಕೇಂದ್ರ ಸರ್ಕಾರವು ಪ್ರಸಕ್ತ ವರ್ಷ 2024ರ ಜುಲೈ-ಡಿಸೆಂಬರ್ ಅವಧಿಯ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು (DR Hike) 7ನೇ ವೇತನ ಆಯೋಗದಡಿ ಹೆಚ್ಚಳ ಮಾಡಿ ಆದೇಶಿಸಿದೆ. ಇದರಿಂದ ಡಿಎ ಪ್ರಮಾಣ ಶೇಕಡಾ 53ಕ್ಕೆ ತಲುಪಿದ್ದು, ಆ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಕೇಂದ್ರ ಸರ್ಕಾರ ಒಂದು ಕೋಟಿ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಗದಡಿ ಜುಲೈನಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಶೇಕಡಾ 3ರಷ್ಟು ಹೆಚ್ಚಳ ಮಾಡಿ ದೀಪಾವಳಿ ಮೊದಲು ಘೋಷಿಸಿದೆ. ಇದು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಆರ್ಥಿಕ ವರದಾನವಾಗಲಿದೆ. ಈ ಪರಿಷ್ಕರಣೆಯಿಂದ ತುಟ್ಟಿಭತ್ಯೆ ಪ್ರಮಾಣವು ಶೇಡಕಾ 53ಕ್ಕೆ ತಲುಪಿದೆ.

7th Pay Commission Will 53 Percent DA of Government Employees be Merged into Basic Salary

ಇದರಿಂದ ನೌಕರರ ಡಿಎ/ಡಿಆರ್ ಪರಿಷ್ಕರಣೆಯಿಂದ ಭತ್ಯೆಯು ಮೂಲ ವೇತನದ ಶೇಕಡಾ ಅರ್ಧಕ್ಕಿಂತಲೂ ಹೆಚ್ಚು 53 ಕ್ಕೆ ಮುಟ್ಟಿದೆ. ಹೀಗಾಗಿ ಇದನ್ನು ಕೇಂದ್ರ ಸರ್ಕಾರ ಮೂಲ ವೇತನದ ಜೊತೆಗೆ ವಿಲೀನಗೊಳಿಸಲಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಎಂಟನೇ ವೇತನ ಆಯೋಗ ಜಾತಿ ಮೊದಲೇ ಇಂಥದ್ದೊಂದು ಊಹಾಪೋಹಗಳು ಬಲವಾಗಿ ಕೇಳಿ ಬರುತ್ತಿವೆ.

ಮುಂದಿನ ಎರಡು ತಿಂಗಳ ಬಳಿಕ 2025ರ ಜನವರಿಯಲ್ಲಿ ಮತ್ತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಿಸಬೇಕು. ಅದಕ್ಕೂ ಮೊಲದೇ ನೌಕರರ ಮೂಲವೇತನದಲ್ಲಿ ಡಿಎ ಪ್ರಮಾಣ ಶೇ.53 ವಿಲೀನಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟನೆ ನೀಡಿವೆ.

ಡಿಎ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಹೀಗಿದ್ದರೂ ಸಹ ಮೂಲ ವೇತನದೊಂದಿಗೆ ಡಿಎ ವಿಲೀನ ಆಗುವುದಿಲ್ಲ ಎಂದು ಹೇಳಿದೆ. ಹಿಂದಿನ ವೇತನ ಆಯೋಗವು ಬಳಸುತ್ತಿದ್ದ ಮೂಲ ಸೂಚ್ಯಂಕಕ್ಕಿಂತ ಗ್ರಾಹಕರ ಬೆಲೆ ಸೂಚ್ಯಂಕವು 50% ರಷ್ಟು ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ತುಟ್ಟಿಭತ್ಯೆ ವಿಲೀನ ಇಲ್ಲ ಎಂದು ಸಬಂಧಿಸಿದ ಕೇಂದ್ರದ ಅಧಿಕಾರಿ ಮಾಹಿತಿ ನೀಡಿದ್ದಾರೆ.

6ನೇ ವೇತನ ಆಯೋಗದ ನಿಲುವು ಇಲ್ಲಿದೆ?

6ನೇ ವೇತನ ಆಯೋಗದ ಪ್ರಕಾರ, ನೌಕರರ ಮೂಲ ವೇತನವು ಶೇಕಡಾ 50 ದಾಟಿದ ಬಳಿಕವೂ ಅದನ್ನು ನೌಕರರು ಮೂಲ ವೇತನದೊಂದಿಗೆ ವಿಲೀನಗೊಳಿಸಬಾರದು ಎಂದು ತಿಳಿಸಿದೆ. ಇತ್ತ ಸರ್ಕಾರ ಸಹ ಈ ಬಗ್ಗೆ ಎಲ್ಲಿಯೂ ಚರ್ಚಿಸಿಲ್ಲ. ಮೂಲಗಳ ಪ್ರಕಾರ ಎದ್ದಿರುವ ಊಹಾಪೋಹಗಳು ನಿಜವಾಗುವುದಿಲ್ಲ ಎನ್ನಲಾಗಿದೆ.

ನೌಕರರ ತುಟ್ಟಿಭತ್ಯೆ ಪರಿಷ್ಕರಣೆ ಯಾವಾಗ?

ಸದ್ಯ ನವೆಂಬರ್ ತಿಂಗಳಿದ್ದು, ಮುಂದಿನ ವರ್ಷ 2026ರ ಜನವರಿಗೆ ಕೇಂದ್ರ ಸರ್ಕಾರವು ನಿಯಮಗಳ ಪ್ರಕಾರ ನೌಕರರ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಪರಿಷ್ಕರಣೆ ಮಾಡುವ ನಿರೀಕ್ಷೆ ಇದೆ. ಪ್ರತಿ ಆರು ತಿಂಗಳಿನಂತೆ ಜನವರಿ ಹಾಗೂ ಜುಲೈ ತಿಂಗಳಲ್ಲಿ ಡಿಎ ಏರಿಕೆ ಆಗುತ್ತದೆ. ತಡವಾದರೂ ಸಹಿತ ಇದೇ ತಿಂಗಳಿಂದ ಅನ್ವಯವಾಗುವಂತೆ ಆದೇಶವಾಗಿರುತ್ತದೆ. ನೌಕರರು ಆಗ ಬಾಕಿ ಉಳಿದ ತಿಂಗಳ ಡಿಎ ಸಮೇತ ಮೂಲ ವೇತನ ಪಡೆದಿರುತ್ತಾರೆ.

ಈಗಾಗಲೇ ನೌಕರರು ಜುಲೈ ತಿಂಗಳಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ಪಡೆದುಕೊಂಡಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಅವರಿಗೆ 2025ರ ಮೊದಲ ತುಟ್ಟಿಭತ್ಯೆ ಪಡೆಯಲು ಅರ್ಹರಾಗುತ್ತಾರೆ. ಆ ಬಗ್ಗೆ ಕಾತರತೆ ಹೊಂದಿರುವ ಅವರು, ಎಂಟನೇ ವೇತನ ಆಯೋಗ ಜಾವಾಗ ಜಾರಿಯಾಗಲಿದೆ ಅಂತಲೂ ಕಾಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ, ನಿರ್ಧಾರ ಪ್ರಕಟಿಸಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಇದೇ ವಿಚಾರ ಪ್ರಸ್ತಾಪಿಸಲು ಕೇಂದ್ರ ಸರ್ಕಾರಿ ನೌಕರರು ಸಂಘ, ಯೂನಿಯನ್ ಮುಖ್ಯಸ್ಥರು ಸರ್ಕಾರದೊಂದಿಗೆ ಮಹತ್ವದ ದಭೆ ನಡೆಸಲಿದ್ದಾರೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+