Get Updates
Get notified of breaking news, exclusive insights, and must-see stories!

7th Pay Commission: ಜುಲೈ ತುಟ್ಟಿಭತ್ಯೆ (DA) ಹೆಚ್ಚಳ ನಿರೀಕ್ಷೆಯಲ್ಲಿ ನೌಕರರು, ಎಷ್ಟು ಹೆಚ್ಚಾಗಲಿದೆ?, ಜಾರಿ ಅಪ್ಡೇಟ್

ನವದೆಹಲಿ, ಜುಲೈ 08: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಇತ್ತೀಚೆಗೆ ತುಟ್ಟಿಭತ್ಯೆ (ಡಿಎ) ಅನ್ನು ಹೆಚ್ಚಳ ಮಾಡಿ ಅನುಮೋದನೆ ನೀಡಿತ್ತು. ಅದು ಜನವರಿ ತಿಂಗಳ ಡಿಎ ಆಗಿದ್ದು, ನಾವೀಗ ಜುಲೈ ತಿಂಗಳಿನಲ್ಲಿದ್ದೇವೆ. ಹೀಗಾಗಿ ಮತ್ತೊಂದು ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಕೇಂದ್ರ ಸರ್ಕಾರಿ ನೌಕರರು ಪಡೆಯಲಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹಾಗೂ ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಅನ್ನು ಶೇಕಡಾ 4ರಷ್ಟು ಹೆಚ್ಚು ನೀಡಿದೆ. ಈ ಮೂಲಕ ಶೇಕಡಾ 46ರಷ್ಟಿತ್ತು. ಕಳೆದ ಬಾರಿ ಶೇಕಡಾ 4ರಷ್ಟು ಏರಿಕೆ ಆದ ಹಿನ್ನೆಲೆ ಈ ತುಟ್ಟಿಭತ್ಯೆ ಪ್ರಮಾಣ ಶೇಕಡಾ 50ರಷ್ಟು ಏರಿಕೆ ಆಗಿತ್ತು. ಇದು 2024ರ ಜನವರಿ 1ರಿಂದ ಜಾರಿಗೆ ಬರಲಿದೆ.

7th Pay Commission Second DA Hike for Central Govt Employees Expected Soon May Reach 55 Percent

ಪ್ರತಿ ಆರು ತಿಂಗಳಿಗೊಮ್ಮೆ ಈ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತದೆ. ಸದ್ಯ ಜನವರಿಯ ಡಿಎ ಏರಿಕೆ ಆಗಿದೆ. ಆರು ತಿಂಗಳು ಕಳದಿರುವ ಸರ್ಕಾರಿ ನೌಕರರು ಜುಲೈ ತಿಂಗಳ ಮತ್ತೊಂದು ತುಟ್ಟಿ ಭತ್ಯೆ ಏರಿಕೆ ಎದುರುನೋಡುತ್ತಿದ್ದಾರೆ. ಸದ್ಯ ಶೇಕಡಾ 50 ತಲುಪಿದ ಡಿಎದಿಂದಾಗಿ ಅಸ್ತಿತ್ವದಲ್ಲಿರುವ ದರಗಳಿಗಿಂತ ಹಲವು ಭತ್ಯೆಗಳು ಸ್ವಯಂಆಗಿ ಶೇಕಡಾ 25ಕ್ಕೆ ಪರಿಷ್ಕರಣೆಗೊಳ್ಳುತ್ತವೆ.

ಸದ್ಯ ಸರ್ಕಾರ ಜುಲೈ ತಿಂಗಳ ತುಟ್ಟಿಭತ್ಯೆ ಏರಿಕೆ ಶೀಘ್ರವೇ ಆಗುವ ನಿರೀಕ್ಷೆ ಇದೆ. ಈ ಭಾರಿ ಇರುವ ಹಣದುಬ್ಬರದ ಒತ್ತಡದಿಂದಾಗಿ ಶೇಕಡಾ 4 ಬದಲಾಗಿ ಶೇ.5 ಡಿಎ ಹೆಚ್ಚಳ ಮಾಡಬಹುದು. ಇದರಿಂದ ಡಿಎ ಪ್ರಮಾಣ ಶೇಕಡಾ 55ರಷ್ಟು ಏರಿಕೆ ಆಗಲಿದೆ.

ಇನ್ನೂ ಕೇಂದ್ರ ಸರ್ಕಾರಿ ಉದ್ದೋಗಿಗಳು ಮತ್ತೊಂದು ಡಿಎ ಹೆಚ್ಚಳ ಅಪ್ಡೇಟ್ ಅನ್ನು ಸರ್ಕಾರದ ಅಧಿಕೃತ ವೆಬ್‌ಸೈಟ್ ನಲ್ಲಿ ಪರಿಶೀಲಿಸಬೇಕು. ಸಂಭವನೀಯ ತುಟ್ಟಿಭತ್ಯೆ ಹೆಚ್ಚಳ ಕಾರ್ಯಗತಗೊಂಡರೆ ತುಟ್ಟಿಭತ್ಯೆ (DA) ಪ್ರಸ್ತುತದಲ್ಲಿನ ಡಿಎ 50% ರಿಂದ 55% ಕ್ಕೆ ಹಚ್ಚಗಲಿದೆ. ಇದರಿಂದಾಗಿ ನೌಕರರು ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಗೆ ಪರಿಹಾರ ಸಿಗುವ ವಿಶ್ವಾಸ ಇದೆ.

7th Pay Commission Second DA Hike for Central Govt Employees Expected Soon May Reach 55 Percent

ತುಟ್ಟಿಭತ್ಯೆ ಹೆಚ್ಚಳದ ಪ್ರಾಮುಖ್ಯತೆ

ಪ್ರತಿ ಆರು ತಿಂಗಳಿಗೊಮ್ಮೆ ಹೆಚ್ಚಾಗುವ ತುಟ್ಟಿಭತ್ಯೆ ಏರಿಕೆಯು ಕೇಂದ್ರ ಸರ್ಕಾರಿ ನೌಕರರ ಎದುರಿಸುತ್ತಿರುವ ಬೆಲೆ ಏರಿಕೆ, ಹಣದುಬ್ಬರದಂತಹ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಈ ಡಿಎ ಏರಿಕೆ ಖಚಿತಪಡಿಸುವಿಕೆ ನೌಕರನಿಗೆ ಅತ್ಯವಶ್ಯಕವಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಹಣದುಬ್ಬರದ ಸಂದರ್ಭದಲ್ಲಿ ಉದ್ಯೋಗಿಗಳ ನೈಜ ಆದಾಯ ಏರಿಕೆಗಳು ಅತ್ಯಗತ್ಯವಾಗಿದೆ.

ಈ ಕಾರಣದಿಂದ ಜುಲೈ ತಿಂಗಳ ಸಂಭಾವ್ಯ DA ಏರಿಕೆಯು ಉದ್ಯೋಗಿಗಳನ್ನು ಆರ್ಥಿಕ ಚೇತರಿಕೆಯತ್ತ ಒಯ್ಯಲಿದೆ. ಜೊತೆಗೆ ಆರ್ಥಿಕ ಸವಾಲುಗಳನ್ನು ಎದುರಿಸಲು ಸರ್ಕಾರದ ಬದ್ಧತೆ ಇದು ತೋರ್ಪಡಿಸುತ್ತದೆ. ಈ ತುಟ್ಟಿಭತ್ಯೆ ಸೌಲಭ್ಯವು ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನ ನೀಡುವುದಲ್ಲದೇ, ಆರ್ಥಿಕ ಸ್ಥಿರತೆಗೆ ಸಹಾಯ ಮಾಡಲಿದೆ.

ಸಪ್ಟೆಂಬರ್ ವೇಳೆಗೆ ಡಿಎ ಅನುಷ್ಠಾನ?

7ನೇ ವೇತನ ಆಯೋಗದಡಿಯಲ್ಲಿ ಜುಲೈ ತಿಂಗಳ ನಿರೀಕ್ಷಿತ DA ಹೆಚ್ಚಳವು ಅಂತಿಮ ಗ್ರಾಹಕ ಬೆಲೆ ಸೂಚ್ಯಂಕ (CPI) ಸಂಖ್ಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಸೂಚ್ಯಂಕದ ಅಂಕಿಅಂಶಗಳು ನಿಖರ ತುಟ್ಟಿಭತ್ಯೆ ದರ ಏರಿಕೆಯನ್ನು ನಿರ್ಧರಿಸಲಿವೆ. ಸರ್ಕಾರದ ಮಟ್ಟದಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ಮುಂದಿನ ಸೆಪ್ಟೆಂಬರ್ ಹೊತ್ತಿಗೆ ಸಂಭಾವ್ಯ ಡಿಎ ಅನುಷ್ಠಾನ ಘೋಷಣೆ ಆಗುವ ಸಾಧ್ಯತೆ ಇವೆ ಎನ್ನಲಾಗಿದೆ.

* ವಿಲೀನ ಪೂರ್ವ ವೇತನ: ₹18,000 ಮೂಲ ವೇತನ ಮತ್ತು 50% DA ₹ 9,000.

* ವಿಲೀನದ ನಂತರದ ಸಂಬಳ: ₹27,000 ಹೊಸ ಮೂಲ ವೇತನವು 4% DA ಜೊತೆಗೆ ₹1,080, ಒಟ್ಟು ₹28,080.

* ವಿಲೀನವು ಮೂಲ ವೇತನ ಘಟಕದಲ್ಲಿ ₹ 9,000 ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ.

ಸದ್ಯ ದೇಶದಲ್ಲಿ ಎಂಟನೇ ವೇತನ ಆಯೋಗ ಜಾರಿ ಆಗಿಲ್ಲ, ಅನುಷ್ಠಾನವಾಗಬೇಕಿ. ಏಳನೇ ವೇತನ ಆಯೋಗ ಅಡಿಯಲ್ಲಿಯೇ ಈ ವರ್ಷದ ಎರಡನೇ ತುಟ್ಟಿಭತ್ಯೆ ಏರಿಕೆ ಆಗುವ ಸಾಧ್ಯತೆಗಳು ದಟ್ಟವಾಗಿದೆ. ಈ ಕುರಿತು ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಬಜೆಟ್ ಅಧಿವೇಶನದಲ್ಲಿ ಚರ್ಚೆ ಆಗುವ ಸಾಧ್ಯತೆಗಳು ಇವೆ.

ಚರ್ಚೆ ಬಳಿಕ ಹೊಸ ವೇತನ ಆಯೋಗ ಅನುಷ್ಠಾನ ಜೊತೆಗೆ ಜುಲೈ ತಿಂಗಳ ತುಟ್ಟಿಭತ್ಯೆ ಬಗ್ಗೆ ಮಾಹಿತಿ ಹೊರ ಬೀಳಲಿದೆ. ಸದ್ಯ ಇದೇ ಜುಲೈ 23ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ನಂತರ ಬಜೆಟ್ ಕುರಿತು ವಿಸ್ತೃತವಾಗಿ ಅಧಿವೇಶನ ನಡೆಯಲಿದೆ. ಈ ವೇಳೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ.

ರಾಜ್ಯ ಸರ್ಕಾರ ಕೆ.ಸುಧಾಕರ್ ರಾವ್ ನೇತೃತ್ವದ ರಾಜ್ಯದ ಏಳನೆ ವೇತನ ಆಯೋಗದ ವರದಿ ಅಂಗೀಕರಿಸಿ ಜಾರಿ ತಂದಿದೆ. ಇದರ ಬೆನ್ನಲ್ಲೆ ನೂರಾರು ಪುಟಗಳ ಶಿಫಾರಸುಗಳನ್ನು ಸಹ ಸಂಪುಟದ ಒಂದೇ ವರದಿಯಲ್ಲಿ ಡಿಎ ಏರಿಕೆ ಮಾಡುವ ಕುರಿತು ತಿಳಿಸಿದೆ. ಕೇಂದ್ರದಲ್ಲಿ ಡಿಎ ಹೆಚ್ಚಳವಾಗುತ್ತಿದ್ದಂತೆ ಕರ್ನಾಟಕದಲ್ಲೂ ಏರಿಕೆ ಆಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+