ಕೋಟ್ಯಂತರ ನೌಕರರಿಗೆ ನಿರಾಶೆ ಮೂಡಿಸಿದ ನರೇಂದ್ರ ಮೋದಿ

ನವದೆಹಲಿ, ಆಗಸ್ಟ್ 16: ಸ್ವಾತಂತ್ರೋತ್ಸವ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿ ಐದು ಉಡುಗೊರೆಗಳನ್ನು ನೀಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಮೂಲಕ ಕೋಟ್ಯಂತರ ಮಂದಿಗೆ ನಿರಾಶೆಯಾಗಿದೆ.

ಐದು ಪ್ರಮುಖ ಘೋಷಣೆಗಳ ಜತೆಗೆ ಮತ್ತೊಂದು ಶುಭ ಸುದ್ದಿಯನ್ನು ಮೋದಿ ಅವರು ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿಯಿತ್ತು. ಆದರೆ, ಆಯುಷ್ಮಾನ್ ಭಾರತ್ ಬಗ್ಗೆ, ರೈತರು, ಸಾಮಾಜಿಕ ನ್ಯಾಯ, ತ್ರಿವಳಿ ತಲಾಕ್, ಕಾಶ್ಮೀರದ ಬಗ್ಗೆ ಮಾತನಾಡಿದರು.

ಆದರೆ, ಬಹುನಿರೀಕ್ಷಿತ ಸರ್ಕಾರಿ ನೌಕರರ ವೇತನ ಏರಿಕೆ, ನಿವೃತ್ತಿ ವಯೋಮಿತಿ ಹೆಚ್ಚಳದ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ. ಕಳೆದ ಜುಲೈನಲ್ಲಿ 7ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ ಕುರಿತಂತೆ ಸಭೆ ನಡೆದಿದ್ದು ಬಿಟ್ಟರೆ ಹೆಚ್ಚಿನ ಅಪ್ಡೇಟ್ ಇರಲಿಲ್ಲ.

7ನೇ ವೇತನ ಆಯೋಗದ ಬಹು ನಿರೀಕ್ಷಿತ ಶಿಫಾರಸ್ಸುಗಳಿಗೆ ಮೋದಿ ತಂಡ ಒಪ್ಪಿಗೆ ಸಿಕ್ಕಿದೆ. ಜತೆಗೆ ಸುಮಾರು 1 ಕೋಟಿಗೂ ಮಂದಿಗೆ ಲಾಭವಾಗಲಿರುವ ನಿವೃತ್ತಿ ವಯಸ್ಸು ಏರಿಕೆ(60 ರಿಂದ 62ಕ್ಕೆ) ಬೇಡಿಕೆಗೆ ಮೋದಿ ಅವರು ಅಸ್ತು ಎಂದಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಯಾವುದರ ಬಗ್ಗೆ ಕೂಡಾ ಘೋಷಣೆ ಕೇಳಿ ಬರಲಿಲ್ಲ

ವರ್ಷಕ್ಕೆ ಎರಡು ಬಾರಿ ಸಂಬಳ ಏರಿಕೆ ಇಲ್ಲ

ವರ್ಷಕ್ಕೆ ಎರಡು ಬಾರಿ ಸಂಬಳ ಏರಿಕೆ ಇಲ್ಲ

7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಸಂಬಳ ಏರಿಕೆ ಮಾಡುವುದರ ಜತೆಗೆ ವರ್ಷಕ್ಕೆರಡು ಬಾರಿ ಸಂಬಳ ಏರಿಕೆ(ಜನವರಿ ಹಾಗೂ ಜುಲೈ) ಜೀವನ ಮಟ್ಟ ಸೂಚಿ ಅನ್ವಯ ವೇತನ ಏರಿಕೆಯಾಗಲಿದೆ. ಇದು ಅತಿಥಿ ಶಿಕ್ಷಕರು (ಜೆಬಿಟಿ/ಡ್ರಾಯಿಂಗ್ ಟೀಚರ್, ಮಾಸ್ಟರ್ ಅಥವಾ ಉಪನ್ಯಾಸಕರು) 26,000ರು, 30,000 ಹಾಗೂ 36,000 ರು ಪಡೆಯಲಿದ್ದು, ಜುಲೈ 01, 2018ರಿಂದ ಅನ್ವಯವಾಗಲಿದೆ ಎಂಬ ಸುದ್ದಿ ಇತ್ತು. ಆದರೆ, ಸದ್ಯಕ್ಕೆ ಇದರ ಬಗ್ಗೆ ಯಾವುದೇ ಘೋಷಣೆ ಕೇಳಿ ಬಂದಿಲ್ಲ. ಸರ್ಕಾರವು ಆದೇಶ ಹೊರಡಿಸಿಲ್ಲ.

ವೇತನ ಹೆಚ್ಚಳ ಬೇಡಿಕೆ ಏನು?

ವೇತನ ಹೆಚ್ಚಳ ಬೇಡಿಕೆ ಏನು?

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಲಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1 ಕೋಟಿ ಮಂದಿಗೆ ಲಾಭವಾಗಲಿದೆ.

ಕನಿಷ್ಟ ವೇತನ ಏರಿಕೆ ನಿರೀಕ್ಷೆ ಹುಸಿ

ಕನಿಷ್ಟ ವೇತನ ಏರಿಕೆ ನಿರೀಕ್ಷೆ ಹುಸಿ

ಜೂನ್ 2016ರಲ್ಲಿ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ಕನಿಷ್ಟ ವೇತನವನ್ನು 18,000 ರುಗೇರಿಸಲಾಗಿತ್ತು. ಅರುಣ್ ಜೇಟ್ಲಿ ಅವರು ನೀಡಿದ ಭರವಸೆಯಂತೆ ಜನವರಿ 2016ರಿಂದ ಹಿಂಬಾಕಿ ಮೊತ್ತ ಕೂಡಾ ಲಭ್ಯವಾಗಲಿದೆ. ಕನಿಷ್ಟ ವೇತನವನ್ನು 18,000 ರು ನಿಂದ 21,000 ರು ಗಳಿಗೆ ಏರಿಸುವಂತೆ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಇನ್ನೂ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡು, ಆಗಸ್ಟ್ 15ರಂದು ಘೋಷಿಸುವ ಸಾಧ್ಯತೆಯಿತ್ತು.

25 ಸಾವಿರ ಪಿಂಚಣಿದಾರರಿಗೆ ಲಾಭ

25 ಸಾವಿರ ಪಿಂಚಣಿದಾರರಿಗೆ ಲಾಭ

ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ ಬೋಧಕ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಅನ್ವಯ ಪಿಂಚಣಿ ಸಿಗಲಿದೆ. ಸುಮಾರು 25,000 ಪಿಂಚಣಿದಾರರಿಗೆ 6,000 ರು ನಿಂದ 18,000 ರುಗಳ ತನಕ ಪಿಂಚಣಿ ಸಿಗಲಿದೆ. ಇದು ಪರೋಕ್ಷವಾಗಿ ರಾಜ್ಯ ವಿಶ್ವವಿದ್ಯಾಲಯಗಳಿಂದ ನಿವೃತ್ತಿ ಹೊಂದಿದ 23 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.

8 ಲಕ್ಷ ಶಿಕ್ಷಕರಿಗೆ ಸಂಬಳ ಏರಿಕೆ ಬಗ್ಗೆ ಇನ್ನೂ ಸಂಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ.
ಅಕ್ಟೋಬರ್ 2017ರಂದು 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಹಾಗೂ ಯುಜಿಸಿ ನೆರವು ಪಡೆದ ವಿದ್ಯಾಸಂಸ್ಥೆಗಳಿಗೆ ಸೇರಿದ 8 ಲಕ್ಷ ಶಿಕ್ಷಣ ವರ್ಗಕ್ಕೆ 10,400 ಹಾಗೂ 49,800 ತನಕ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+