ChatGPT, ಪ್ರೇಮ ಪತ್ರದ ವ್ಯತ್ಯಾಸ 78% ಭಾರತೀಯರಿಗೆ ಗೊತ್ತಿಲ್ಲ
62 ಪ್ರತಿಶತ ಭಾರತೀಯರು ಪ್ರೇಮಿಗಳ ದಿನದಂದು ತಮ್ಮ ಪ್ರೇಮ ಪತ್ರಗಳನ್ನು ಬರೆಯುವುದಕ್ಕಾಗಿ ಸಹಾಯ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಬಳಸಲು ಯೋಜಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ನವದೆಹಲಿ, ಫೆಬ್ರವರಿ 10: ಜಗತ್ತಿನಾದ್ಯಂತ ಈಗ ಚಾಟ್‌ಜಿಪಿಐ ಸದ್ದು ಜೋರಾಗಿದೆ. ಇದರ ಅಭಿವೃದ್ಧಿಗಾಗಿ ಮಿಲಿಯನ್ ಡಾಲರ್ ಹಣವನ್ನು ಸುರಿಯಲಾಗಿದ್ದು, ಇದರ ಉಪಯುಕ್ತತೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೂ ತಂತ್ರಜ್ಞಾನ ದುರುಪಯೋಗಗಳು ಒಂದೆಡೆ ಹೆಚ್ಚಾಗುತ್ತಿವೆ.
ಸಂಭಾಷಣಾ ಕೃತಕ ಬುದ್ಧಿಮತ್ತೆ ಟೂಲ್ ಚಾಟ್‌ಜಿಪಿಟಿ ಬರೆದ ಪ್ರೇಮ ಪತ್ರ ಮತ್ತು ಮನುಷ್ಯ ಬರೆದ ಪ್ರೇಮ ಪತ್ರದ ನಡುವೆ ಹೆಚ್ಚಿನ ಭಾರತೀಯರಿಗೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಗುರುವಾರ ಮ್ಯಾಕ್‌ಅಫೀ ನಡೆಸಿದ ಜಾಗತಿಕ ಸಮೀಕ್ಷೆ ತಿಳಿಸಿದೆ.
62 ಪ್ರತಿಶತ ಭಾರತೀಯರು ಪ್ರೇಮಿಗಳ ದಿನದಂದು ತಮ್ಮ ಪ್ರೇಮ ಪತ್ರಗಳನ್ನು ಬರೆಯುವುದಕ್ಕಾಗಿ ಸಹಾಯ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಬಳಸಲು ಯೋಜಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಮ್ಯಾಕ್‌ಅಫೀ ಸಮೀಕ್ಷೆ ಮಾಡಿದ ಎಲ್ಲಾ ದೇಶಗಳಲ್ಲಿ ಅತಿ ಹೆಚ್ಚು ಅಂದರೆ 73 ಪ್ರತಿಶತದಷ್ಟು ಜನರು ತಮ್ಮ ಡೇಟಿಂಗ್ ಪ್ರೊಫೈಲ್‌ಗಳನ್ನು ಹೆಚ್ಚಿಸಲು ಎಐ ಅನ್ನು ಬಳಸುತ್ತಾರೆ ಎಂದು ತಿಳಿದು ಬಂದಿದೆ.

ನಮ್ಮ ದೈನಂದಿನ ಜೀವನದ ಪ್ರತಿಯೊಂದು ವಿಷಯಗಳಿಗೂ ಚಾಟ್‌ಜಿಪಿಟಿ ನುಸುಳಲು ಪ್ರಾರಂಭಿಸುವುದರೊಂದಿಗೆ ಸಮೀಕ್ಷೆಗೆ ಒಳಗಾದ ಶೇಕಡಾ 78 ರಷ್ಟು ಭಾರತೀಯ ಜನರು ಎಐ ಟೂಲ್, ಚಾಟ್‌ಜಿಪಿಟಿ ಮತ್ತು ಮನುಷ್ಯ ಬರೆದ ಪ್ರೇಮ ಪತ್ರದ ನಡುವಿನ ವ್ಯತ್ಯಾಸವನ್ನು ಹೇಳಲು ಸಾಧ್ಯವಾಗಲಿಲ್ಲ ಎಂದು ಮ್ಯಾಕ್‌ಅಫೀಸ್ ಮಾಡರ್ನ್ ಲವ್ ಸಂಶೋಧನೆ ವರದಿ ಹೇಳಿದೆ.
ಎಐ ಮತ್ತು ಇಂಟರ್ನೆಟ್ ಪ್ರೀತಿ ಮತ್ತು ಸಂಬಂಧಗಳನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಕಂಡುಹಿಡಿಯಲು ಒಂಬತ್ತು ದೇಶಗಳಲ್ಲಿ 5,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ. ಮ್ಯಾಕ್‌ಅಫೀ ಮುಖ್ಯ ತಂತ್ರಜ್ಞಾನ ಅಧಿಕಾರಿ ಸ್ಟೀವ್ ಗ್ರೋಬ್‌ಮನ್ ಅವರು ಕೃತಕ ಬುದ್ಧಿಮತ್ತೆಯ ಜನಪ್ರಿಯತೆಯ ಏರಿಕೆಯೊಂದಿಗೆ ವಿಶೇಷವಾಗಿ ವೆಬ್ ಬ್ರೌಸರ್ ಹೊಂದಿರುವ ಯಾರಾದರೂ ಪ್ರವೇಶಿಸಬಹುದಾದ ಚಾಟ್‌ಜಿಪಿಟಿಯಂತಹ ಸಾಧನಗಳು, ಯಂತ್ರ-ರಚಿತ ಮಾಹಿತಿಯನ್ನು ಪಡೆಯುವ ಸಾಧ್ಯತೆಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.

"ಕೆಲವು ಎಐ ಬಳಕೆಯ ಪ್ರಕರಣಗಳು ಸಾಕಷ್ಟು ನಿರಪರಾಧಿಗಳಾಗಿದ್ದರೂ, ಸೈಬರ್ ಅಪರಾಧಿಗಳು ದುರುದ್ದೇಶಪೂರಿತ ಚಟುವಟಿಕೆಯನ್ನು ತಿಳಿಯಲು ಎಐ ಅನ್ನು ಸಹ ಬಳಸುತ್ತಾರೆ ಎಂದು ನಮಗೆ ತಿಳಿದಿದೆ. ಹೀಗಾಗಿ ಪ್ರೇಮಿಗಳ ದಿನದಂದು ಜಾಗರೂಕರಾಗಿರಲು ಮತ್ತು ನಿಮ್ಮ ಗೌಪ್ಯತೆ ಮತ್ತು ಗುರುತನ್ನು ರಕ್ಷಿಸಲು ಸಹಾಯ ಮಾಡುವ ಭದ್ರತಾ ಪರಿಹಾರಗಳನ್ನು ಬಳಸುವುದು ಮುಖ್ಯವಾಗಿದೆ. ದುರುದ್ದೇಶಪೂರಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಸ್ಕ್ಯಾಮರ್ ಕಳುಹಿಸಬಹುದು ಎಂದು ಗ್ರೋಬ್‌ಮನ್ ಹೇಳಿದರು.
ಚಾಟ್ ಮಾಡುವಾಗ ಸುರಕ್ಷತೆ ಮರೆಯುವುದು ಸಹಜ. ಆದರೆ ಹಣ ಅಥವಾ ವೈಯಕ್ತಿಕ ಮಾಹಿತಿಗಾಗಿ ಅನುಮಾನಾಸ್ಪದ ಸಂದೇಶ ಬಂದರೆ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು. ಶೇಕಡ 76ರಷ್ಟು ಭಾರತೀಯರು ಇದು ಅಪಾಯ ಕೂಡ ಎಂದು ಹೇಳಿದ್ದಾರೆ. ಹೆಚ್ಚುವರಿಯಾಗಿ 89 ಪ್ರತಿಶತ ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ ಅಪರಿಚಿತರೊಂದಿಗೆ ಜಾಗತಿಕವಾಗಿ 66 ಪ್ರತಿಶತಕ್ಕೆ ಹೋಲಿಸಿದರೆ ನೇರ ಸಂವಾದದಲ್ಲಿ ತೊಡಗಿದ್ದಾರೆ. ಭಾರತೀಯ ವಯಸ್ಕರನ್ನು ತಲುಪಲು ಅಪರಿಚಿತರು ಬಳಸುವ ಸಾಮಾನ್ಯ ವೇದಿಕೆಗಳು ಇನ್‌ಸ್ಟಾಗ್ರಾಮ್ (64 ಪ್ರತಿಶತ) , ವಾಟ್ಸಾಪ್ (ಶೇ. 59) ಮತ್ತು ಫೇಸ್‌ಬುಕ್ (ಶೇ. 51)" ಎಂದು ವರದಿ ಹೇಳಿದೆ.












Click it and Unblock the Notifications