Anand Mahindra: ಕೆಲಸದ ಟೈಮಿಂಗ್ಸ್ ಬಗ್ಗೆ ಆನಂದ್ ಮಹೀಂದ್ರಾ ಅಚ್ಚರಿಯ ಹೇಳಿಕೆ!
ಕೆಲಸದ ಅವಧಿಯ ಬಗ್ಗೆ ಹಾಗೂ ಭಾನುವಾರವೂ ಕೆಲಸ ಮಾಡುವ ಬಗ್ಗೆ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಕೆಲಸದ ಅವಧಿಯ ಬಗ್ಗೆ ಕಳೆದ ಆರೇಳು ತಿಂಗಳಿನಿಂದ ಭರ್ಜರಿ ಚರ್ಚೆ ನಡೆಯುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಯುವಕರು ವಾರಕ್ಕೆ 70 ದಿನ ಕೆಲಸ ಮಾಡಬೇಕು ಅಂತ ಹೇಳುವುದರೊಂದಿಗೆ ಪ್ರಾರಂಭವಾಯಿತು. ಅದನ್ನು ಮೀರಿಸುವಂತೆ ಎಲ್ ಆ್ಯಂಡ್ ಟಿ ಚೇರ್‌ಮ್ಯಾನ್ ಸುಬ್ರಮಣಿಯನ್ ಅವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಭಾನುವಾರವೂ ಕೆಲಸ ಮಾಡಿ ಎಷ್ಟು ಅಂತ ಹೆಂಡ್ತಿ ಮುಖವನ್ನು ನೋಡ್ತೀರಿ ಎಂದಿದ್ದರು. ಇದೀಗ ಈ ಚರ್ಚೆಗಳಿಗೆ ಮಹೀಂದ್ರಾ ಅವರು ಹೊಸ ತಿರುವು ಕೊಟ್ಟಿದ್ದಾರೆ. ಅವರ ಅಭಿಪ್ರಾಯವನ್ನು ಹಲವು ಉದ್ಯೋಗಿಗಳು ಮೆಚ್ಚಿಕೊಂಡಿದ್ದಾರೆ. ಆನಂದ್ ಅವರ ಮಜವಾದ ರಿಪ್ಲೈಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕೆಲಸದ ಅವಧಿ ಎಷ್ಟಾಗಿರಬೇಕು ಎನ್ನುವ ಬಗ್ಗೆ ಚರ್ಚೆ. ವಾದ ವಿವಾದ ನಡಿಯುತ್ತಲ್ಲೇ ಇದೆ. ಕೆಲವು ಕಂಪನಿಗಳ ಮಾಲೀಕರು ಉದ್ಯೋಗಿಗಳು ಕತ್ತೆತರ ದುಡಿಯಬೇಕು.. ಗಂಟೆ ಗಟ್ಟಲೆ ಕೆಲಸ ಮಾಡಬೇಕು. ಭಾನುವಾರವೂ ಕೆಲಸ ಮಾಡಬೇಕು ಅಂತ ಹೇಳುತ್ತಿದ್ದರೆ. ಈ ರೀತಿ ಗಂಟೆಗಟ್ಟಲೆ ಕೆಲಸ ಮಾಡಿದರೆ ಉದ್ಯೋಗಿಗಳ ಪರಿಸ್ಥಿತಿ ಏನಾಗಬೇಕು. ಅವರ ಪರ್ಸನಲ್ ಲೈಫ್ ಏನಾಗಬೇಕು. ಪರ್ಸನಲ್ ಲೈಫ್ ಹಾಗೂ ವರ್ಕ್ ಲೈಫ್‌ಗಳ ನಡುವೆ ಬ್ಯಾಲೆನ್ಸ್ ಇರಬೇಕು ಎನ್ನುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮುಖ್ಯವಾಗಿ ಕಂಪನಿಯ ಮಾಲೀಕರು ಹಾಗೂ ಉದ್ಯೋಗಿಗಳ ಸೌಲಭ್ಯ ಹಾಗೂ ವೇತನದ ಬಗ್ಗೆಯೂ ಚರ್ಚೆ ಆಗಿರೋದು ಇದೆ.

ಈಚೆಗೆ ಎಲ್ ಆ್ಯಂಡ್ ಟಿ ಚೇರ್‌ಮ್ಯಾನ್ ಸುಬ್ರಮಣಿಯನ್ ಅವರು ವಾರಕ್ಕೆ 90 ದಿನ ಕೆಲಸ ಮಾಡಿ. ಭಾನುವಾರ ರಜೆ ಯಾಕೆ ಅಂತ. ಮನೆಯಲ್ಲಿ ಹೆಂಡ್ತಿ ಮುಖನ ಎಷ್ಟೂ ಅಂತ ನೋಡ್ತೀರಿ ಅಂತೆಲ್ಲ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಆನಂದ್ ಮಹೀಂದ್ರ ಅವರು ಮಾತನಾಡಿದ್ದಾರೆ. ವಿಕಸಿತ್ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ, ಫಸ್ಟ್‌ಪೋಸ್ಟ್ ಮ್ಯಾನೇಜಿಂಗ್ ಎಡಿಟರ್ ಪಾಲ್ಕಿ ಶರ್ಮಾ ಅವರ ಜೊತೆ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಮಾತನಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಅದರಲ್ಲಿ ಆನಂದ್ ಅವರು, ನನ್ನ ಹೆಂಡ್ತಿ ಸುಂದರವಾಗಿದ್ದಾಳೆ ಕಂಣ್ರೀ.. ನಾನು ಅವಳನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ ಅಂತ ಹೇಳಿದ್ದಾರೆ. ತಾಸು ಗಟ್ಟಲೆ ಕೆಲಸ ಮಾಡುವುದರ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕೆಲಸದ ಗುಣಮಟ್ಟ ಮುಖ್ಯ: ಇನ್ನು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಇಲ್ಲ 90 ಗಂಟೆ ಕೆಲಸ ಮಾಡಬೇಕು ಎನ್ನುವ ಕಂಪನಿಗಳ ಮಾಲೀಕರ ನಡುವೆ ಆನಂದ್ ಅವರು ಕೆಲಸದ ಅವಧಿ ಬಗ್ಗೆ ಮಾತನಾಡಿರುವುದು ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದೇನೆಂದರೆ ತಾಸುಗಟ್ಟಲೆ ದುಡಿಯೋದು ಮುಖ್ಯವಲ್ಲ. ನಾನು ಕೆಲಸ ಮಾಡುವ ಟೈಮ್‌ಗಿಂತ, ಕೆಲಸದ ಗುಣಮಟ್ಟವನ್ನು ನೋಡುತ್ತೇನೆ. ಅದರ ಪ್ರಾಮುಖ್ಯತೆ ಖಚಿತ ಪಡಿಸಲು ಇಷ್ಟ ಪಡ್ತೀನಿ ಅಂತ ಹೇಳಿದ್ದಾರೆ. ಗಂಟೆ ಗಟ್ಟಲೆ ದುಡಿಯೋದು ಇಂಪಾರ್ಟೆಂಟ್ ಅಲ್ಲ ಕಡಿಮೆ ಅವಧಿಯಲ್ಲಿ ಕ್ರಿಯೇಟಿವ್ ಆಗಿ ಕೆಲಸ ಮಾಡುವುದು ಇಂಪಾರ್ಟೆಂಟ್ ಅಂತ ಅವರು ಹೇಳಿದ್ದಾರೆ.












Click it and Unblock the Notifications