ರಾಂಚಿಯಲ್ಲಿ ಬುರಾರಿ ಮಾದರಿ ಸಾಮೂಹಿಕ ಆತ್ಮಹತ್ಯೆ: 7 ಶವ ಪತ್ತೆ

ರಾಂಚಿ, ಜುಲೈ 30: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಬುರಾರಿ ಸಾಮೂಹಿಕ ಆತ್ಮಹತ್ಯೆಯ ಮಾದರಿಯಲ್ಲಿಯೇ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿಯೂ 7 ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ರಾಂಚಿಯ ಕಾಂಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಕುಟುಂಬವೊಂದರ ಏಳು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ ಇಬ್ಬರು ಶಿಶುಗಳೂ ಸೇರಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಆತ್ಮಹತ್ಯೆ ಪ್ರಕರಣ ಎನ್ನಲಾಗಿದೆಯಾದರೂ, ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

7 members of a family commit suicide in Jharkhands Ranchi

ಈ ತಿಂಗಳ ಆರಂಭದಲ್ಲಿ ಜಾರ್ಖಂಡ್ ನ ಹಜಾರಿಬಾಂಗ್ ಎಂಬಲ್ಲಿಯೂ ಇಂಥದೇ ಘಟನೆ ನಡೆದಿತ್ತು. ಒಂದೇ ಕುಟುಂಬದ ಆರು ಜನ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಇವರೆಲ್ಲರ ಸಾವಿಗೆ ಆರ್ಥಿಕ ಒತ್ತಡವೇ ಕಾರಣ ಎನ್ನಲಾಗಿತ್ತು.

ದೆಹಲಿಯ ಬುರಾರಿ ಎಂಬಲ್ಲಿ ಜುಲೈ 1 ರಂದು ನಡೆದ 11 ಜನರ ಆತ್ಮಹತ್ಯೆ ಪ್ರಕರಣ ಇಡೀ ದೇಶವನ್ನೂ ಬೆಚ್ಚಿ ಬೀಳಿಸಿತ್ತು. ಈ ಆತ್ಮಹತ್ಯೆಗೆ ಮಾನಸಿಕ ಸಮಸ್ಯೆಯೇ ಕಾರಣ ಎನ್ನಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+