Earthquake: ನೇಪಾಳದಲ್ಲಿ 7.1 ತೀವ್ರ ಭೂಕಂಪ: ದೆಹಲಿಯಲ್ಲಿ ಕಂಪಿಸಿದ ಭೂಮಿ!

ಮಂಗಳವಾರ ಬೆಳಿಗ್ಗೆಯೇ ನೇಪಾಳದಲ್ಲಿ ಭೂಕಂಪನ ಸಂಭವಿಸಿದ್ದು. ಇದರ ಪ್ರಭಾವ ಭಾರತದ ಹಲವು ರಾಜ್ಯಗಳ ಮೇಲೆ ಆಗಿದೆ. ಚೀನಾ ಹಾಗೂ ನೇಪಾಳದ ಗಡಿಭಾಗದಲ್ಲಿ ಈ ಭೂಕಂಪನ ಸಂಭವಿಸಿದೆ. ನೇಪಾಳದಲ್ಲಿ ಮಂಗಳವಾರ ಬೆಳಿಗ್ಗೆ 6.30ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ಇದರಿಂದ ಭಾರತದ ರಾಜಧಾನಿ ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ದೆಹಲಿಯ ಎನ್‌ಸಿಆರ್‌ನಲ್ಲೂ ಭೂಕಂಪನದ ಅನುಭವ ಆಗಿದೆ. ಇನ್ನು ಭೂಕಂಪದ ತೀವ್ರತೆ 7.1 ಎಂದು ವರದಿಯಾಗಿದೆ.

ನೇಪಾಳ ಮತ್ತು ಟಿಬೆಟ್ ಗಡಿಭಾಗದ ಲೋಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ ದೂರದಲ್ಲಿ ಈ ಭೂಕಂಪ ಸಂಭವಿಸಿದ್ದು. ಕಠ್ಮಂಡು ಹಾಗೂ ಸುತ್ತಮುತ್ತಲಿನ ಪ್ರದೇಶದ ಜಿಲ್ಲೆಗಳಲ್ಲಿ ತೀವ್ರ ಭೂಕಂಪನದ ಅನುಭವವಾಗಿದೆ. ಈ ಭಾಗದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಹೋಗುತ್ತಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್‌ ಆಗಿವೆ. ಈ ದೃಶ್ಯಗಳು ಆಘಾತಕಾರಿಯಾಗಿವೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಭೂಕಂಪ ತುಸು ಇಳಿಕೆಯಾಗಿತ್ತು. ಪ್ರಥಮಿಕ ವರದಿಯ ಪ್ರಕಾರ ಯಾವುದೇ ಸಾವು - ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.

7 1 Magnitude Earthquake in Nepal Earthquake tremors Felt in Delhi

ದೇಶದ ವಿವಿಧೆಡೆ ಭೂಕುಸಿದ ಅನುಭವ: ನೇಪಾಳದಲ್ಲಿ ಸಂಭವಿಸಿದ ಭೂಕಂಪನ ಭಾರತದ ಹಲವು ರಾಜ್ಯಗಳ ಮೇಲೆ ಪ್ರಭಾವ ಬೀರಿದೆ. ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ದೆಹಲಿಯ ಎನ್‌ಸಿಆರ್‌ನಲ್ಲೂ ಭೂಕುಸಿದತ ಅನುಭವ ಆಗಿದೆ. ಪಾಟ್ನಾ ಹಾಗೂ ಸರನ್ ಸೇರಿದಂತೆ ಬಿಹಾರದ ಕೆಲವು ಭಾಗಗಳಲ್ಲಿ ಇದೇ ರೀತಿ ಆಗಿದೆ ಎಂದು ಜನ ಹೇಳಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನ ಭಾಗದಲ್ಲೂ ಜನರಿಗೆ ಭೂಕಂಪನದ ಅನುಭವ ಆಗಿದೆ.

ರಿಕ್ಟರ್ ಮಾಪಕದಲ್ಲಿ 6.0 ಹಾಗೂ 7.0 ರ ನಡುವೆ ಭೂಕಂಪನದ ತೀವ್ರತೆ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ನಿಖರವಾದ ಅಪ್‌ಡೇಟ್‌ ಇನ್ನಷ್ಟೇ ಬರಬೇಕಿದೆ.

ದೆಹಲಿಯಲ್ಲಿ ಸಂಕಷ್ಟ: ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭೂಕಂಪನದ ಪ್ರಭಾವ ಪ್ರಮಾಣ ಹೆಚ್ಚಳವಾಗಿದೆ. 2023 -2024ನೇ ಸಾಲಿನಲ್ಲಿ ಹಲವು ಬಾರಿ ಭೂಕಂಪನ ಸಂಭವಿಸಿದ ಅನುಭವ ಆಗಿತ್ತು. ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಭೂಕಂಪನ ಹಾಗೂ ಅದರ ಪ್ರಭಾವ ಹೆಚ್ಚಾಗುವುದು ವರದಿಯಾಗುತ್ತಿದೆ.

ಶೀತಅಲೆ ಹಾಗೂ ವಾಯು ಮಾಲಿನ್ಯದ ನಡುವೆ ಭೂಕಂಪನದ ಅನುಭವ ಇಲ್ಲಿನ ಜನರನ್ನು ಹೈರಾಣಾಗಿಸಿದೆ. ಹೌದು ದೆಹಲಿಯಲ್ಲಿ ಚಳಿಗಾಲದಲ್ಲಿ ವಿಪರೀತ ವಾಯುಮಾಲಿನ್ಯ ಉಂಟಾಗುತ್ತದೆ. ಅಲ್ಲದೆ ಮೈಕೊರೆಯುವ ಚಳಿ ಇದೆ. ಇದರ ನಡುವೆ ಭೂಕಂಪನದ ಅನುಭವವೂ ಆಗುತ್ತಿದ್ದು. ಮಂಗಳವಾರ ಮುಂಜಾನೆ ಮೈಕೊರೆಯುವ ಚಳಿಯಲ್ಲೂ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಭೂಕಂಪನದ ಭಯದಿಂದ ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ ಜನ ಹೊರಗೆ ಓಡಿ ಬಂದಿದ್ದಾರೆ. ಮಂಗಳವಾರ ದೆಹಲಿಯಲ್ಲೂ ಭೂಕುಸಿತದ ಅನುಭವ ಆಗಿದೆ ಎಂದು ಜನ ಸೋಷಿಯಲ್‌ ಮೀಡಿಯಾದಲ್ಲಿ ರಿಯಾಕ್ಟ್‌ ಮಾಡಿದ್ದಾರೆ.

ತಜಕಿಸ್ತಾನದಲ್ಲಿ ಭೂಕಂಪನ: ವರ್ಷದ ಮೊದಲ ವಾರವೇ ವಿಶ್ವದ ವಿವಿಧ ದೇಶಗಳಲ್ಲಿ ಭೂಕಂಪನದ ಸುದ್ದಿ ಬರುತ್ತಿದೆ. ಜನವರಿ 7ರ ಬೆಳಿಗ್ಗೆ ನೇಪಾಳದಲ್ಲಿ ಭೂಕಂಪನ ಆಗಿದ್ದರೆ. ಜನವರಿ 5ರಂದು ತಜಕಿಸ್ತಾನದಲ್ಲಿ ಭೂಕಂಪನ ಆಗಿರುವುದು ವರದಿಯಾಗಿತ್ತು. ಆದರೆ ಇಲ್ಲಿ ತೀವ್ರತರದ ಭೂಕಂಪನ ಸಂಭವಿಸಿರಲಿಲ್ಲ. ಹೀಗಾಗಿ ಯಾವುದೇ ದೊಡ್ಡ ಅನಾಹುತ ಸಂಭವಿಸಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+