ವಂದೇ ಭಾರತ್ ಮಿಷನ್; ದೇಶಕ್ಕೆ ವಾಪಸ್ ಆದವರು ಎಷ್ಟು ಜನ?

ನವದೆಹಲಿ, ಮೇ 12 : ಲಾಕ್ ಡೌನ್ ಪರಿಣಾಮ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರಲು ಸರ್ಕಾರ 'ವಂದೇ ಭಾರತ್ ಮಿಷನ್' ಆರಂಭ ಮಾಡಿತ್ತು. ಇದುವರೆಗೂ ದೇಶಕ್ಕೆ 6037 ಜನರು ವಾಪಸ್ ಆಗಿದ್ದಾರೆ.

ಏರ್ ಇಂಡಿಯಾದ 42 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 24 ಒಟ್ಟು 64 ವಿಮಾನಗಳು ವಂದೇ ಭಾರತ್ ಮಿಷನ್ ಅಡಿ ಹಾರಾಟ ನಡೆಸಿವೆ. ಮೇ 7ರಿಂದ ಇದುವರೆಗೂ 6037 ಜನರನ್ನು ಭಾರತಕ್ಕೆ ವಾಪಸ್ ಕರೆ ತಂದಿವೆ.

ವಂದೇ ಭಾರತ್ ಮಿಷನ್ ಅಡಿ ಒಟ್ಟು 12 ದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ರಾಯಭಾಯ ಕಚೇರಿ ಮೂಲಕ ಭಾರತಕ್ಕೆ ಬರಲು ಜನರು ನೋಂದಣಿ ಮಾಡಿಕೊಂಡಿದ್ದರು. ತುರ್ತು ಅಗತ್ಯ ಇರುವವರನ್ನು ಮೊದಲು ಕರೆತರಲಾಗಿದೆ.

 6037 Indians Brought Back Under Vande Bharat Mission

ಅಮೆರಿಕ, ಯುಕೆ, ಬಾಂಗ್ಲಾದೇಶ, ಸಿಂಗಪುರ, ಸೌದಿ ಅರೇಬಿಯಾ, ಕುವೈತ್, ಫಿಲಿಫೈನ್ಸ್, ಯುಎಇ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಂದ 14,800 ಜನರನ್ನು ಮೊದಲ ಹಂತದಲ್ಲಿ ಕರೆತರಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.

ವಿದೇಶದಿಂದ ಬರುವವರು ಟಿಕೆಟ್‌ಗೆ ಅವರೇ ಹಣವನ್ನು ಪಾವತಿ ಮಾಡಬೇಕು. ಭಾರತದ ವಿವಿಧ ನಗರಕ್ಕೆ ಬರುವ ಅವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಆರೋಗ್ಯ ತಪಾಸಣೆ ನಡೆಸಿಯೇ ಎಲ್ಲರನ್ನೂ ಕರೆತರಲಾಗುತ್ತಿದೆ.

ಕೇಂದ್ರ ಸರ್ಕಾರ ಮೇ 16 ರಿಂದ 22ರ ತನಕ 2ನೇ ಹಂತದ ವಂದೇ ಭಾರತ ಮಿಷನ್ ಕಾರ್ಯಾಚರಣೆ ನಡೆಸಲಿದೆ. 31 ದೇಶಗಳಿಂದ 149 ವಿಮಾನಗಳಲ್ಲಿ ಜನರು ಭಾರತಕ್ಕೆ ಆಗಮಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+