ಒಂದೇ ದಿನ 56 ಜನರ ಬಲಿಪಡೆದ ಬಿಹಾರದ ಬರ ಸಿಡಿಲು!

ಪಾಟ್ನಾ, ಜೂನ್ 22: ಬರ ಸಿಡಿಲು ಅಂದ್ರೆ ಇದೆ ಆಗಿರಬಹುದು. ಬಿಹಾರದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಜತೆಗೆ ಅನೇಕ ಜನರ ಜೀವ-ಜೀವನವನ್ನು ಬಲಿಪಡೆಯುತ್ತಿದ್ದಾನೆ. ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು ಒಟ್ಟು 56 ಮಂದಿ ಮೃತಪಟ್ಟಿದ್ದಾರೆ.

ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. ಆದರೆ ರಾಜಧಾನಿಯಿಂದ ದೂರದಲ್ಲಿರುವ ಹಲವು ಪ್ರದೇಶಗಳಿಗೆ ರಕ್ಷಣಾ ಸಿಬ್ಬಂದಿ ಇನ್ನೂ ತಲುಪಿಲ್ಲವಾದ್ದರಿಂದ ಸಾವು ನೋವಿನ ಸ್ಪಷ್ಟ ಅಂದಾಜು ಸಿಗುತ್ತಿಲ್ಲ ಎಂದು ವಿಪತ್ತು ನಿರ್ವಹಣಾ ಪ್ರಧಾನ ಕಾರ್ಯದರ್ಶಿ ವ್ಯಾಸ್ ತಿಳಿಸಿದ್ದಾರೆ.[ಹುಬ್ಬಳ್ಳಿಯಲ್ಲಿ ಜಿಟಿಜಿಟಿ ಮಳೆಗೆ ನಲಿದಾಡಿದ ಮಿರ್ಚಿ ಮಂಡಕ್ಕಿ]

rain

ಒಂದೇ ಸಿಡಿಲಿಗೆ ರೋಹ್ಟಾಸ್ ಜಿಲ್ಲೆಯ ಯಲ್ಲಿ 5 ಜನ ಮೃತಪಟ್ಟಿದ್ದಾರೆ. ಪಾಟ್ನಾದ ಔರಂಗಾಬಾದ್ ಬಳಿ ನಾಲ್ಕು ಜನರ ಜೀವವನ್ನು ಸಿಡಿಲು ಹೊತ್ತೊಯ್ದಿದೆ ಎಂದು ವಿಪತ್ತು ನಿರ್ವಹಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.[ಬೆಂಗಳೂರಿನಲ್ಲಿ ಒಂದೇ ಗಂಟೆಯಲ್ಲಿ 81 ಮಿ.ಮೀ. ಮಳೆ!]

ಬುಕ್ಸಾರ್, ಸರನ್, ಕೈಮುರ್, ಸಹರಸಾ, ಕತಿಯಾರ್ ಜಿಲ್ಲೆಗಳಲ್ಲೂ ಮಳೆ ರುದ್ರ ತಾಂಡವವಾಡುತ್ತಿದೆ. ಕೋಸಿ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿಯೂ ಎದುರಾಗಿದೆ.

ಸಾವನಪ್ಪಿದ ಸದಸ್ಯರ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಲಾ ನಾಲ್ಕು ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ. ರಕ್ಷಣಾ ತಂಡಗಳು ಪರಿಹಾರ ಕಾರ್ಯಾಚರಣೆ ಕೈಗೆತ್ತಿಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+