ಹಿಮಾಚಲ ಪ್ರದೇಶದ ಭವಿಷ್ಯ ಬರೆಯಲಿದ್ದಾರೆ 50 ಲಕ್ಷ ಮತದಾರರು

Posted By: Gururaj
Subscribe to Oneindia Kannada

ಶಿಮ್ಲಾ, ನವೆಂಬರ್ 9 : ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಮತದಾನ ಆರಂಭವಾಗಿದೆ. 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. 50 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

LIVE: ಹಿಮಾಚಲ ಪ್ರದೇಶ: ವೀರಭದ್ರ ಸಿಂಗ್, ಧುಮಾಲ್ ಮತಚಲಾವಣೆ

ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. 7,525 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 337 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಲಿದೆ. 19ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

50 Lakh voters will seal the fate of 337 candidates including 19 women

50,25,941 ಮತದಾರರು 2017ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 25,31,321 ಪುರುಷರು, 24,57,032 ಮಹಿಳಾ ಮತದಾರರಿದ್ದಾರೆ.

ಹಿಮಾಚಲ ಪ್ರದೇಶ ಡಿಜಿಪಿಯಿಂದ ಶಾಂತಿಯುತ ಮತದಾನದ ಭರವಸೆ

ರಾಜ್ಯದ ಪ್ರತಿಪಕ್ಷವಾಗಿರುವ ಬಿಜೆಪಿ ಚುನಾವಣೆಗೆ ಮೊದಲೇ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. '60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತೇವೆ' ಎಂದು ಪ್ರೇಮ್ ಕುಮಾರ್ ಹೇಳಿದರು.

ಧರ್ಮಶಾಲಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದು, ಅತೀ ಹೆಚ್ಚು ಅಭ್ಯರ್ಥಿಗಳಿರುವ ಕ್ಷೇತ್ರವಿದಾಗಿದೆ. 337 ಅಭ್ಯರ್ಥಿಗಳ ಪೈಕಿ 112 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾನಕ್ಕಾಗಿ 7,525 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ 136 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Voting under way for Himachal Pradesh assembly elections 2017. 50 Lakh voters will seal the fate of 337 candidates including 19 women.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ