ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ನಿಷೇಧ 50 ದಿನ, ಸಮಸ್ಯೆ ಸರಿಹೋಗಿಲ್ಲ, ಸ್ಥಿತಿ ಸಹಜವಾಗಿಲ್ಲ

ನೋಟು ನಿಷೇಧ ನಂತರದ ಐವತ್ತು ದಿನಗಳು ಮುಗಿದಿವೆ. ಪರಿಸ್ಥಿತಿಯಲ್ಲಿ ತುಂಬ ಸುಧಾರಣೆ ಏನೂ ಕಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಭವ್ಯ ಭಾರತದ ಪರಿಕಲ್ಪನೆಗೆ ಎಷ್ಟು ತಿಂಗಳು ಕಾಯಬೇಕೋ ಎಂಬ ಪ್ರಶ್ನೆ ಎದುರಾಗಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಶುಕ್ರವಾರ ಬೆಳಗ್ಗೆ ನೀವು ಹಾಸಿಗೆ ಬಿಟ್ಟು ಏಳುವ ಹೊತ್ತಿಗೆ 500, 1000 ರುಪಾಯಿಗಳ ಅಂತಿಮ ಕ್ಷಣಗಳನ್ನು ಘೋಷಿಸಿ 51 ದಿನ ಪೂರ್ತಿ ಆಗಿರುತ್ತದೆ. ಎಲ್ಲವೂ ಸರಿಹೋಗುತ್ತೆ ಎಂಬ ಗಡುವು ಕೂಡ ಮುಗಿದಿರುತ್ತದೆ. ಬ್ಯಾಂಕ್ ಗಳಲ್ಲಿ ನಗದು ಕೊರತೆ ಇನ್ನೂ ಮುಂದುವರಿದಿದೆ. ಅದರಲ್ಲೂ 500, 100 ರುಪಾಯಿ ನೋಟುಗಳ ತೀವ್ರ ಅಭಾವವಿದೆ.

ಐವತ್ತು ದಿನಗಳ ಗಡುವು ನೀಡಿದ್ದರಲ್ಲಾ, ಅದು ಮುಗಿಯಿತು ಅಂತ ನಗದು ತೆಗೆದುಕೊಳ್ಳುವ ಮಿತಿಯನ್ನು ಸಡಿಲಿಸಬೇಡಿ ಎಂದು ಬ್ಯಾಂಕ್ ಗಳು ವಿತ್ತ ಸಚಿವಾಲಯಕ್ಕೆ ಪತ್ರ ಬರೆದು ಕೇಳಿಕೊಂಡಿವೆ. 'ನನಗೆ ಐವತ್ತು ದಿನ ಸಮಯ ಕೊಡಿ. ನೀವು ಬಯಸಿದಂಥ ಭಾರತವನ್ನು ನಿಮಗೆ ಕೊಡ್ತೀನಿ.' ಎಂದಿದ್ದರು ಪ್ರಧಾನಿ ನರೇಂದ್ರ ಮೋದಿ.[ರಾಹುಲ್ ಗಾಂಧಿ ಕೇಳಿದ 5 ಪ್ರಶ್ನೆಗಳಿಗೆ ಮೋದಿ ಉತ್ತರಿಸುವರೆ?]

Narendra Modi

ಆ ಗಡುವು ಬುಧವಾರ ರಾತ್ರಿಗೆ ಮುಕ್ತಾಯವಾಯಿತು. ಬ್ಯಾಂಕ್, ಎಟಿಎಂಗಳ ಮುಂದಿನ ಸರತಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಆದರೆ ನಗದು ಸಮಸ್ಯೆ ಇನ್ನೂ ಕೆಲ ದಿನ ಮುಂದುವರಿಯುತ್ತದೆ ಎಂದು ಬ್ಯಾಂಕ್ ಗಳ ತಿಳಿಸಿವೆ. ಐವತ್ತು ದಿನಗಳು ಕಳೆದ ನಂತರ ಕೂಡ ಹಣ ತೆಗೆದುಕೊಳ್ಳುವ ಮಿತಿ ಕನಿಷ್ಠ ಇನ್ನೂ ಕೆಲ ತಿಂಗಳು ಮುಂದುವರಿಸಬೇಕು ಎಂಬುದು ಬ್ಯಾಂಕ್ ಗಳ ಬೇಡಿಕೆ.

ಪರಿಸ್ಥಿತಿ ಸಹಜವಾಗಿಲ್ಲ

ಪರಿಸ್ಥಿತಿ ಸಹಜವಾಗಿಲ್ಲ

ನಗದು ಪೂರೈಕೆ ಹೆಚ್ಚಳ ಆಗುವವರೆಗೆ ಸಹಜ ಸ್ಥಿತಿಗೆ ಬರುವುದು ಕಷ್ಟ ಎಂದು ಕೂಡ ಈಗಾಗಲೇ ಹೇಳಲಾಗಿದೆ. ಹಾಗಿದ್ದರೆ ಸದ್ಯದ ಸ್ಥಿತಿಯ ಬಗ್ಗೆ ತಿಳಿಯೋಣ. ಐವತ್ತು ದಿನಗಳ ನಂತರ ಕೂಡ ಜನರು ಅಪನಗದೀಕರಣದ ಬಗ್ಗೆ ಮಾತನಾಡ್ತಿದ್ದಾರೆ. ಇದರ ಅರ್ಥ ಏನೆಂದರೆ ಪರಿಸ್ಥಿತಿ ಇನ್ನೂ ಸಹಜವಾಗಿಲ್ಲ.

ಎಟಿಎಂಗಳ ಸ್ಥಿತಿ ಚಿಂತಾಜನಕ

ಎಟಿಎಂಗಳ ಸ್ಥಿತಿ ಚಿಂತಾಜನಕ

ಎಟಿಎಂಗಳು ಈಗಲೂ ಚಿಂತಾಜನಕ ಸ್ಥಿತಿಯಲ್ಲೇ ಇವೆ. 2 ಲಕ್ಷ ಎಟಿಎಂಗಳ ಪೈಕಿ ಕೆಲಸ ಮಾಡುತ್ತಿರುವುದು ಶೇ 60ರಷ್ಟು ಮಾತ್ರ. ನಗದು ಬೇಡಿಕೆ ಹಾಗೂ ಪೂರೈಕೆ ಮಧ್ಯೆ ಹೋಲಿಕೆ ಮಾಡಲಾಗದಷ್ಟು ವ್ಯತ್ಯಾಸ ಇದೆ. ಅಪನಗದೀಕರಣ ಘೋಷಣೆ ನಂತರ 15 ಲಕ್ಷ ಕೋಟಿ ರುಪಾಯಿ ಹಿಂಪಡೆಯಲಾಯಿತು. ಆದರೆ ಹೊಸ ನೋಟುಗಳು ಬಂದಿರುವುದು 6.5 ಲಕ್ಷ ಕೋಟಿ ರುಪಾಯಿ ಮಾತ್ರ.

ಗ್ರಾಮೀಣ ಭಾಗದಲ್ಲಿ ತೀರಾ ಕಷ್ಟ

ಗ್ರಾಮೀಣ ಭಾಗದಲ್ಲಿ ತೀರಾ ಕಷ್ಟ

ಸರಕಾರ ಡಿಜಿಟಲ್ ಪಾವತಿಗೆ ಪ್ರೋತ್ಸಾಹ ನೀಡುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅದು ಯಶಸ್ವಿ ಆಗೋದು ಸಾಧ್ಯವೇ ಇಲ್ಲ. ಗ್ರಾಮೀಣ ಭಾಗದಲ್ಲಿನ ಸ್ಥಿತಿ ತೀರಾ ಗಂಭೀರವಾಗಿದೆ. ವೇತನ ಪಾವತಿಯೇ ದೊಡ್ಡ ತಲೆನೋವಾಗಿದೆ. ಒಟ್ಟು 5.60 ಕೋಟಿ ಮಂದಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಶೇ 10ರಷ್ಟು ಮಾತ್ರ ಸಂಘಟಿತ ವಲಯದವರು.

ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ

ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ

ಅದರರ್ಥ ಆ ಶೇ 10ರಷ್ಟು ಮಂದಿ ಮಾತ್ರ ಅವರ ಬ್ಯಾಂಕ್ ಖಾತೆಗೆ ವೇತನ ಪಡೆಯುತ್ತಾರೆ. ಇನ್ನು ಐವತ್ತು ದಿನದಲ್ಲಿ ಬದಲಾದ ನಿಯಮಗಳು ಜನರನ್ನು ಗೊಂದಲದಲ್ಲಿ ಮುಳುಗಿಸಿದೆ. ಕನಿಷ್ಠ 62 ಸಲ ನಿಯಮಗಳು ಬದಲಾಗಿವೆ. ಅದು ಯಾವ ಪರಿ ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಜನರು 'ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಆಡಿಕೊಳ್ಳುವಂತೆ ಆಗಿದೆ.

ಜನವರಿ ಕೊನೆಗೆ ಸರಿಯಾಗಬಹುದು

ಜನವರಿ ಕೊನೆಗೆ ಸರಿಯಾಗಬಹುದು

ತಜ್ಞರ ಪ್ರಕಾರ ಜನವರಿ ಕೊನೆ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು. ಆದರೆ ಅದು ಕೂಡ ಹೊಸ ನೋಟುಗಳ ಬೇಡಿಕೆ ಹಾಗೂ ಪೂರೈಕೆ ಎರಡೂ ಸರಿಯಾದರೆ ಮತ್ತು ಬ್ಯಾಂಕ್ ಗಳಿಗೆ ಹೊಸ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದರೆ ಮಾತ್ರ.

English summary
When you wake up on Friday , 51 days since the announcement on demonetisation was made and expect all will be normal. Banks have still been reporting a cash crunch especially where the Rs 500 and 100 notes are concerned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X