ಜಮ್ಮ ಮತ್ತು ಕಾಶ್ಮೀರ: ಐವರು ಉಗ್ರರ ಹತ್ಯೆ
ನವದೆಹಲಿ, ಜೂನ್ 10: ಜಮ್ಮು ಮತ್ತು ಕಾಶ್ಮೀರದ ಉಪ್ವಾರದಲ್ಲಿ ಗಡಿ ನುಸುಳುತ್ತಿದ್ದ ಐವರು ಉಗ್ರರನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಭಾರತೀಯ ಸೇನೆಯ ಯೋಧರು ಭಾರತದ ಗಡಿ ನುಸುಳುತ್ತಿದ್ದ ಪಾಕಿಸ್ತಾನದ ಐದು ಉಗ್ರರನ್ನು ಸದೆಬಡಿದಿದ್ದಾರೆ. ಉಗ್ರರಿಂದ ಸಾಕಷ್ಟು ಶಾಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಕೊಟ್ಲಿ ಜಿಲ್ಲೆಯಲ್ಲಿ ಪಾಕಿಸ್ತಾನಿ ಯೋಧರು ಕಾಶ್ಮೀರದ ಕೆಲವು ಭಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ವಿರೋಧಿಸಿ ಅಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾತ್ರಿ ವೇಳೆ ಭಾರತೀಯ ಸೇನೆಯ ಕಣ್ತಪ್ಪಿಸಿ ದಾಳಿ ನಡೆಸಲು ಪಾಕಿಸ್ತಾನದ ಸೇನೆ ಹೊಸ ತಂತ್ರ ನಡೆಸುತ್ತಿದೆ. ರಾತ್ರಿ ವೇಳೆ ವಸ್ತುಗಳನ್ನು ಗ್ರಹಿಸುವ ಉಪಕರಣಗಳ ಕಣ್ಣಿಗೆ ಮಣ್ಣೆರಚಿ ಒಳನುಸುಳಿ ದಾಳಿ ನಡೆಸಲು ವಿಶಿಷ್ಟ ಉಡುಪನ್ನು ಪಾಕಿಸ್ತಾನ ಸೇನೆ ಬಳಸುತ್ತಿದೆ. ಈ ತಂತ್ರವನ್ನು ಬಳಸಿಯೇ ಇತ್ತೀಚೆಗೆ ಗಡಿ ಭಾಗದಲ್ಲಿ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್ ಒಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ ಎರಡು ದಿನಗಳ ಹಿಂದೆ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು.












Click it and Unblock the Notifications