• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

24 ಗಂಟೆಯಲ್ಲಿ ಭಾರತದಲ್ಲಿ 45,674 ಹೊಸ ಕೋವಿಡ್ ಪ್ರಕರಣ

|

ನವದೆಹಲಿ, ನವೆಂಬರ್ 08 : ಭಾರತದಲ್ಲಿ 45,674 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.

ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 85,07,754ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಕಳೆದ 24 ಗಂಟೆಗಳ ಕೋವಿಡ್ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ 559 ಜನರು ದೇಶದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 1,26,121.

ಆರ್. ಆರ್. ನಗರ ಚುನಾವಣೆ; ಎಲ್ಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ

ದೇಶದಲ್ಲಿನ ಸಕ್ರಿಯ ಪ್ರಕ್ರಣಗಳ ಸಂಖ್ಯೆ 5,12,665. ಕಳೆದ 24 ಗಂಟೆಗಳಿಗೆ ಹೋಲಿಕೆ ಮಾಡಿದರೆ 3,967 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ. ಒಟ್ಟು ಗುಣಮುಖರಾದವರ ಸಂಖ್ಯೆ 78,68,968, ಕಳೆದ 24 ಗಂಟೆಯಲ್ಲಿ 49,082 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಉಡುಪಿ; ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧವಾಗಿದೆ ವಿಶೇಷ ಕೊಠಡಿ

ಭಾರತದಲ್ಲಿ ನವೆಂಬರ್ 7ರ ತನಕ 11,77,36,791 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಶನಿವಾರ 11,94,487 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ರಾಜ್ಯಗಳ ಪಟ್ಟಿ : ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಶನಿವಾರ ರಾಜ್ಯದಲ್ಲಿ 3959 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 17,14,273ಕ್ಕೆ ಏರಿಕೆಯಾಗಿದೆ.

ಕೋವಿಡ್; ಬೆಂಗಳೂರಲ್ಲಿ ಸಾವು, ಸಕ್ರಿಯ ಪ್ರಕರಣದಲ್ಲಿ ಇಳಿಕೆ

   China ಹೊಸ Railway ಮಾರ್ಗ ಭಾರತದ ತೀರ ಹತ್ತಿರದಲ್ಲಿ ಹಾದು ಹೋಗುತ್ತಿದೆಯೇಯಾ | Oneindia Kannada

   ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ. ಶನಿವಾರ ರಾಜ್ಯದಲ್ಲಿ 2,258 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,44,147. ಸಕ್ರಿಯ ಪ್ರಕರಣಗಳು 33,320.

   ಆಂಧ್ರ ಪ್ರದೇಶದಲ್ಲಿ 8,40,730. ತಮಿಳುನಾಡಿನಲ್ಲಿ 7,41,488. ಉತ್ತರ ಪ್ರದೇಶದಲ್ಲಿ 4,95,421. ಕೇರಳದಲ್ಲಿ 4,80,670 ಕೋವಿಡ್ ಸೋಂಕಿನ ಪ್ರಕರಣಗಳಿವೆ.

   English summary
   India's COVID 19 case tally raised to 85,07,754 with 45,674 new infections in last 24 hours. Total active cases 5,12,665.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X