ಭಾರತದಲ್ಲಿ ಇಂದು 44,878 ಕೊರೊನಾ ಸೋಂಕಿತರು ಪತ್ತೆ

ನವದೆಹಲಿ, ನವೆಂಬರ್ 13: ಭಾರತದಲ್ಲಿ ಇಂದು 44,878 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 87 ಲಕ್ಷಕ್ಕೆ ಏರಿಕೆಯಾಗಿದೆ.

ಒಂದೇ ದಿನದಲ್ಲಿ 547 ಮಂದಿ ಸಾವ್ನನಪ್ಪಿದ್ದಾರೆ. ಒಟ್ಟು 87,28,795 ಪ್ರಕರಣಗಳಿವೆ. 4,84,547 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಆಸ್ಪತ್ರೆಯಿಂದ 81,15,580 ಮಂದಿ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 49,079 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,28,688 ಮಂದಿ ಮೃತಪಟ್ಟಿದ್ದಾರೆ.

ನವೆಂಬರ್ 12ರವರೆಗೆ 12,31,01,739 ಮಾದರಿಗಳನ್ನು ಪರೀಕ್ಷಿಸಲಾಗಿದೆ. ನವೆಂಬರ್ 12ರಂದು 11,39,230 ಮಾದರಿಗಳನ್ನು ಪರೀಕ್ಷಿಸಲಾಯಿತು. ಗುರುವಾರದ ಕೊರೊನಾ ಸೋಂಕಿತ ಪ್ರಕರಣಗಳ ಮಾಹಿತಿ: ಭಾರತದಲ್ಲಿ ಗುರುವಾರ 47,905 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಇಲ್ಲಿಯವರೆಗೆ ದೇಶದಲ್ಲಿ 86,83,917 ಕೊರೊನಾ ಸೋಂಕಿತರಿದ್ದರು. 24 ಗಂಟೆಯಲ್ಲಿ 550 ಮಂದಿ ಮೃತಪಟ್ಟಿದ್ದರು, ಒಟ್ಟು 1,28,121 ಮಂದಿ ಸಾವನ್ನಪ್ಪಿದ್ದರು.

44,878 New Coronavirus Cases Reported In Last 24 Hours

ಜಗತ್ತಿನ ಗಮನ ಸೆಳೆದಿರುವ ರಷ್ಯಾದ ಸ್ಪುಟ್ನಿಕ್ V ಕೊರೊನಾ ವೈರಸ್ ಲಸಿಕೆ ಭಾರತಕ್ಕೆ ಬಂದಿದೆ. ಹೈದರಾಬಾದ್ ಮೂಲದ ಔಷಧೀಯ ಕಂಪೆನಿ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಭಾರತದಲ್ಲಿ 2/3 ಹಂತದ ಮಾನವ ಪ್ರಯೋಗಗಳನ್ನು ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸ್ಪುಟ್ನಿಕ್ ಲಸಿಕೆಗಳು ಭಾರತಕ್ಕೆ ಸರಬರಾಜಾಗಿವೆ.

ಡಾ. ರೆಡ್ಡೀಸ್ ಮತ್ತು ಸ್ಪುಟ್ನಿಕ್ V ಚಿಹ್ನೆಗಳನ್ನು ಒಳಗೊಂಡ ಸಣ್ಣ ಕಂಟೇನರ್‌ಗಳನ್ನು ವಾಹನವೊಂದರಿಂದ ಇಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸಂಪರ್ಕಿಸಿದಾಗ ಡಾ. ರೆಡ್ಡೀಸ್‌ನ ಹಿರಿಯ ಅಧಿಕಾರಿಯೊಬ್ಬರು ಸ್ಪುಟ್ನಿಕ್ ಲಸಿಕೆಗಳು ಭಾರತಕ್ಕೆ ಬಂದಿರುವುದನ್ನು ಖಚಿತಪಡಿಸಿದರು. ಹಾಗೆಯೇ ಭಾರತದಲ್ಲಿ ಶೀಘ್ರದಲ್ಲಿಯೇ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸುವುದಾಗಿ ತಿಳಿಸಿದರು ಎಂದು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+