ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಎರಡೇ ವಾರದಲ್ಲಿ 158 ಮಂದಿಯಲ್ಲಿ ರೂಪಾಂತರಿ ಸೋಂಕು ಪತ್ತೆ

|
Google Oneindia Kannada News

ನವದೆಹಲಿ, ಮಾರ್ಚ್ 18: ದೇಶದಲ್ಲಿ ಕೊರೊನಾ ಸೋಂಕಿನ ಜತೆಗೆ ರೂಪಾಂತರಿ ಸೋಂಕು ಪ್ರಕರಣಗಳು ಕೂಡಾ ಹೆಚ್ಚಾಗುತ್ತಿದೆ. ದೇಶದಲ್ಲಿ ಈಗ ಬ್ರೆಜಿಲ್, ಬ್ರಿಟನ್‌ನ ರೂಪಾಂತರಿ ಸೋಂಕು ಹೆಚ್ಚಾಗುತ್ತಿದ್ದು, ಎರಡು ವಾರಗಳಲ್ಲಿ 158 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ, ಇದುವರೆಗೆ 400 ಮಂದಿಗೆ ಸೋಂಕು ತಗುಲಿದೆ.

ದೇಶಾದ್ಯಂತ 30 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಮಹಾರಾಷ್ಟ್ರ, ಪಂಜಾಬ್, ಕೇರಳದಂತಹ ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆತಂಕ ಹೆಚ್ಚಾಗಿದೆ. ದೇಶದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಗುರುವಾರ ಭಾರತದಲ್ಲಿ ಬರೋಬ್ಬರಿ 35,871 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಈ ವರ್ಷದ ಅತಿ ಗರಿಷ್ಠ ಏಕದಿನದ ಪ್ರಕರಣವಾಗಿದೆ.

ಹುಟ್ಟುತ್ತಲೇ ಮಗುವಿನಲ್ಲಿತ್ತು ಕೊರೊನಾವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಹುಟ್ಟುತ್ತಲೇ ಮಗುವಿನಲ್ಲಿತ್ತು ಕೊರೊನಾವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ

ಇನ್ನು ಒಂದೇ ದಿನ ವೈರಸ್ 172 ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾವಿನ ಸಂಖ್ಯೆ 1,59,216ಕ್ಕೆ ಏರಿಕೆಯಾಗಿದೆ.

ಈ ನಡುವೆ ಒಟ್ಟಾರೆ 1,14,74,605 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 17,741 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,10,63,025ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 2,52,364 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ದೇಶದಲ್ಲಿ 400 ರೂಪಾಂತರಿ ಸೋಂಕು ಪತ್ತೆ

ದೇಶದಲ್ಲಿ 400 ರೂಪಾಂತರಿ ಸೋಂಕು ಪತ್ತೆ

ಸ್ವಲ್ಪ ಸ್ವಲ್ಪವೇ ಏರಿಕೆಯಾಗಿ ಇದೀಗ ಸೋಂಕಿತರ ಸಂಖ್ಯೆ 400ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರ ಜೊತೆಗೆ ದೇಶದ ಹಲವಾರು ಭಾಗಗಳಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹಠಾತ್ತನೆ ಏರಿಕೆಯಾಗಿದೆ. ಆತಂಕಕಾರಿ ಸಂಗತಿ ಅಂದರೆ 400 ಪ್ರಕರಣಗಳಲ್ಲಿ 158 ಪ್ರಕರಣಗಳು ಕಳೆದ ಎರಡು ವಾರಗಳಲ್ಲಿ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿದೇಶಗಳಿಂದ ಬಂದ ವೈರಸ್‌ಗಳಿಂದ ಆತಂಕ

ವಿದೇಶಗಳಿಂದ ಬಂದ ವೈರಸ್‌ಗಳಿಂದ ಆತಂಕ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗ ಪಡೆಯುತ್ತಿದ್ದಂತೆ ವಿದೇಶಗಳಿಂದ ಬಂದ ವೈರಸ್‌ನಿಂದಲೂ ಕೊರೊನಾ ಸೋಂಕು ಹರಡುತ್ತಿರುವುದು ಇನ್ನಷ್ಟು ಕಳವಳ ಸೃಷ್ಟಿಸಿದೆ. ಹೌದು, ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶಗಳ ಮೂರು ಹೊಸ ಕೊರೊನಾ ರೂಪಾಂತರಗಳು ದೇಶಕ್ಕೆ ಈಗಾಗಲೇ ಲಗ್ಗೆ ಇಟ್ಟಿದ್ದು, 400 ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕು

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕು

ಒಂದು ಕಡೆ ರೂಪಾಂತರಿ ಕೊರೊನಾ ಅಟ್ಟಹಾಸ ಮುಂದುವರಿಸಿದರೆ ಮತ್ತೊಂದು ಕಡೆ ದೇಶಕ್ಕೆ ವಕ್ಕರಿಸಿರುವ ಕೊರೊನಾ ಸೋಂಕು ಹೆಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ಬುಧವಾರದ ವರದಿ ಪ್ರಕಾರ ಹೊಸದಾಗಿ 23,179 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಎರಡೇ ವಾರಗಳಲ್ಲಿ ಸೋಂಕು ಹೆಚ್ಚಳ

ಎರಡೇ ವಾರಗಳಲ್ಲಿ ಸೋಂಕು ಹೆಚ್ಚಳ

ದಿನದಿಂದ ದಿನಕ್ಕೆ ಸಂಖ್ಯೆ ಏರುತ್ತಲೇ ಇದೆ. ಡಿಸೆಂಬರ್‌ ಹೊತ್ತಿಗೆ ಬ್ರೆಜಿಲ್‌ ಹಾಗೂ ಬ್ರಿಟನ್‌ನ ಹೊಸ ಮಾದರಿಯ ರೂಪಾಂತರಿ ಕೊರೊನಾ ನಮ್ಮ ದೇಶಕ್ಕೆ ಲಗ್ಗೆ ಇಟ್ಟಿದೆ. ಮಾರ್ಚ್ 4 ರಂದು ಒಟ್ಟು 242 ಮಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು ದಕ್ಷಿಣ ಆಫ್ರಿಕಾದ ರೂಪಾಂತರದ ಮೊದಲ ಪ್ರಕರಣವ ಹೊಸದಿಲ್ಲಿಯಲ್ಲಿ ಮಂಗಳವಾರ ಪತ್ತೆಯಾಗಿತ್ತು, ಇನ್ನು ಮಾರ್ಚ್ 4ರಂದು ಒಟ್ಟು 242 ಮಂದಿಯಲ್ಲಿ ರೂಪಾಂತರಿ ಕೊರೊನಾ ಇರುವುದು ದೃಢಪಟ್ಟಿತ್ತು.

English summary
Four hundred coronavirus patients in India have so far have been found to be affected with three mutant variants first detected in the United Kingdom, South Africa and Brazil, the government said today amid a worrying surge in several parts of the country. Of these, 158 cases were reported in the last two weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X