Get Updates
Get notified of breaking news, exclusive insights, and must-see stories!

Bhopal Gas Tragedy: 40 ವರ್ಷಗಳ ಬಳಿಕ 377 ಟನ್ ತ್ಯಾಜ್ಯ ಸ್ಥಳಾಂತರ

ಭೋಪಾಲ್, ಜನವರಿ 02 : ಭಾರತದ ಇತಿಹಾಸದಲ್ಲಿ ಭೋಪಾಲ್ ಅನಿಲ ದುರಂತವನ್ನು ಎಂದಿಗೂ ಮರೆಯಲಾಗದು. 5,500 ಜನರನ್ನು ಬಲಿಪಡೆದ ಈ ಘೋರ ದುರಂತದ ತ್ಯಾಜ್ಯವನ್ನು ಈಗ ವಿಲೇವಾರಿ ಮಾಡಲಾಗಿದೆ. ಮಧ್ಯ ಪ್ರದೇಶದ ಹೈಕೋರ್ಟ್ ತ್ಯಾಜ್ಯ ವಿಲೇವಾರಿ ಮಾಡದ ಸರ್ಕಾರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತ್ತು. ಡಿಸೆಂಬರ್ 3 ರಿಂದ 4 ವಾರಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಆದೇಶವನ್ನು ನೀಡಿತ್ತು.

ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು 100 ಕಾರ್ಮಿಕರು 30 ನಿಮಿಷಗಳಲ್ಲಿ 12 ಲಾರಿಗಳಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಹಾನಿಕಾರಕ 377 ಟನ್ ತ್ಯಾಜ್ಯವನ್ನು ಸಂಗ್ರಹ ಮಾಡಿ, ಸ್ಥಳಾಂತರ ಮಾಡಿದ್ದಾರೆ. ಈ ಕಾರ್ಯಾಚರಣೆಯನ್ನು ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಇಲಾಖೆಯ ನಿರ್ವಹಣೆ ಮಾಡಿದೆ.

40 Years After Bhopal Gas Disaster Toxic Waste Leaves Union Carbide Factory For Disposal

ಸದ್ಯ ಕೆಲಸ ನಿಲ್ಲಿಸಿರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಅನಿಲ ದುರಂತ ನಡೆದ 40 ವರ್ಷಗಳ ಬಳಿಕ ತ್ಯಾಜ್ಯಗಳನ್ನು ಸ್ಥಳಾಂತರ ಮಾಡಲಾಗಿದೆ. ಈ ತ್ಯಾಜ್ಯಗಳನ್ನು ಸೀಲ್ ಮಾಡಿ ಭೋಪಾಲ್‌ನಿಂದ ಸುಮಾರು 250 ಕಿ. ಮೀ. ದೂರದಲ್ಲಿರುವ ದಾರ್ ಜಿಲ್ಲೆಗೆ ಸ್ಥಳಾಂತರ ಮಾಡಲಾಗಿದೆ.

1984ರ ದುರಂತ: 1984ರ ಡಿಸೆಂಬರ್ 2ರ ಮಧ್ಯರಾತ್ರಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಾನಿಲ ಸೋರಿಕೆಯಾಗಿತ್ತು. ಈ ಭೀಕರ ದುರಂತದಲ್ಲಿ 5,500 ಜನರು ಸಾವನ್ನಪ್ಪಿದ್ದರು. ಇಂದಿಗೂ ಸಹ ವಿಶ್ವದ ಮಹಾ ದುರಂತದಲ್ಲಿ ಭೋಪಾಲ್ ಅನಿಲ ದುರಂತ ಸ್ಥಾನವನ್ನು ಪಡೆದಿದೆ.

ಈ ದುರಂತದ ಬಳಿಕ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ 40 ವರ್ಷಗಳು ಕಳೆದರೂ ಸಹ ಕಾರ್ಖಾನೆಯಿಂದ ತ್ಯಾಜ್ಯವನ್ನು ಸ್ಥಳಾಂತರ ಮಾಡಿರಲಿಲ್ಲ. ಈ ಕುರಿತು ಮಧ್ಯ ಪ್ರದೇಶ ಹೈಕೋರ್ಟ್‌, ಸುಪ್ರೀಂಕೋರ್ಟ್‌ಗೆ ಸಹ ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು.

ಈ ತ್ಯಾಜ್ಯ ಸ್ಥಳಾಂತರ ಮಾಡುವ ಕುರಿತು ಸುಪ್ರೀಂಕೋರ್ಟ್ ಹಲವು ನಿರ್ದೇಶನ ನೀಡಿತ್ತು. ಆದರೆ ರಾಜ್ಯ ಸರ್ಕಾರದ ಕ್ರಮ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಮತ್ತೊಂದು ದುರಂತ ಸಂಭವಿಸುವ ಮೊದಲು ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿತ್ತು.

ಡಿಸೆಂಬರ್ 3 ರಿಂದ 4 ವಾರಗಳಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ತ್ಯಾಜ್ಯ ಸ್ಥಳಾಂತರವಾಗಬೇಕು. ಈ ಕುರಿತು ಕೋರ್ಟ್‌ಗೆ ವರದಿಯನ್ನು ಸಲ್ಲಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು. ಈಗ ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಇಲಾಖೆ 377 ಟನ್ ತ್ಯಾಜ್ಯವನ್ನು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದಾರ್ ಜಿಲ್ಲೆಗೆ ಸ್ಥಳಾಂತರ ಮಾಡಿದೆ.

ದಾರ್ ಜಿಲ್ಲೆಯ ಪೀತಂಪುರದಲ್ಲಿ ಕೈಗಾರಿಕಾ ಪ್ರದೇಶವಿದೆ. ಇಲ್ಲಿ ಈ ತ್ಯಾಜ್ಯಗಳನ್ನು ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಿಲೇವಾರಿ ಮಾಡಲಾಗುತ್ತದೆ. 12 ಟ್ರಕ್‌ಗಳಲ್ಲಿ ಸೀಲ್ ಮಾಡಿ, 377 ಟನ್ ತ್ಯಾಜ್ಯವನ್ನು ಕೈಗಾರಿಕಾ ಪ್ರದೇಶಕ್ಕೆ ತೆಗೆದುಕೊಂಡು ಬರಲಾಗಿದೆ.

ಮುಂದಿನ ಪ್ರಕಿಯೆಯ ಕುರಿತು ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಸ್ವತಂತ್ರ ಕುಮಾರ್ ಸಿಂಗ್ ಮಾತನಾಡಿದ್ದಾರೆ. "ಪೀತಂಪುರದ ನಿಗದಿತ ಪ್ರದೇಶದಲ್ಲಿ ಮೊದಲಿಗೆ ಈ ತ್ಯಾಜ್ಯವನ್ನು ಸುಡಲಾಗುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಮಾಲಿನ್ಯ ತಡೆಯಲು ಹೊಗೆಯನ್ನು 4 ಹಂತಗಳಲ್ಲಿ ಸಂಸ್ಕರಣೆ ಮಾಡಿ ಹೊರಗೆ ಬಿಡಲಾಗುತ್ತದೆ" ಎಂದು ಹೇಳಿದ್ದಾರೆ.

"377 ಟನ್ ತ್ಯಾಜ್ಯ ಸುಟ್ಟ ಬಳಿಕ ಅದರ ಬೂದಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬೂದಿಯಲ್ಲಿಯೂ ಅಪಾಯಕಾರಿ ಅಂಶಗಳು ಇರುವುದು ಪತ್ತೆಯಾದರೆ ಮಣ್ಣು ಮತ್ತು ನೀರಿಗೆ ಈ ಬೂದಿ ಸೇರದಂತೆ ಅದನ್ನು ಹೂಳಲಾಗುತ್ತದೆ" ಎಂದು ತಿಳಿಸಿದ್ದಾರೆ.

ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಮೀಥೈಲ್ ಐಸೂಸೈನೇಟ್ ಎಂಬ ವಿಷಾನಿಲ ಸೋರಿಕೆಯಾಗಿತ್ತು. ದುರಂತದಲ್ಲಿ 5,500 ಜನರು ಸಾವನ್ನಪ್ಪಿದರು. ಆದರೆ ಇಂದಿಗೂ ಸಹ ಈ ದುರಂತದ ಅಡ್ಡ ಪರಿಣಾಮಗಳು ಜನರ ಮೇಲೆ ಆಗುತ್ತಿವೆ. ಈ ದುರಂತದಲ್ಲಿ ಬದುಕಿದ ಹಲವು ಜನರು ಈಗಲೂ ಗಂಭೀರ ಆರೋಗ್ಯ ಸಮಸ್ಯೆಗೆ ಸಿಲುಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+