ಬ್ಯಾಂಕ್ ಮೆಸೇಜ್ ಎಂದು ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ಹಣ ಕಳೆದುಕೊಂಡ ಗ್ರಾಹಕರು!
ನಕಲಿ ಸಂದೇಶಗಳ ಮೂಲಕ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಮೂರು ದಿನಗಳಲ್ಲಿ ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ
ಮುಂಬೈ, ಮಾರ್ಚ್ 05: ಮುಂಬೈನ ಖಾಸಗಿ ಬ್ಯಾಂಕ್‌ನ ಕನಿಷ್ಠ 40 ಗ್ರಾಹಕರು ತಮ್ಮ ಕೆವೈಸಿ ಮತ್ತು ಪ್ಯಾನ್ ವಿವರಗಳನ್ನು ಅಪ್‌ಡೇಟ್ ಮಾಡಲು ಹೋಗಿ ಲಕ್ಷಾಂತರ ರೂಪಾಯಿ ಹಣವನ್ನು ಬರೀ ಮೂರು ದಿನಗಳಲ್ಲಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ನಕಲಿ ಮೆಸೇಜ್‌ಗಳ ಮೂಲಕ ಕಳುಹಿಸಲಾದ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಂಚನೆಗೆ ಒಳಗಾಗಿದ್ದಾರೆ.
ನಕಲಿ ಸಂದೇಶಗಳ ಮೂಲಕ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಮೂರು ದಿನಗಳಲ್ಲಿ ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್ ಗ್ರಾಹಕರು ತಮ್ಮ ಗುರುತನ್ನು ಪರಿಶೀಲಿಸಲು ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಬ್ಯಾಂಕ್ ಗ್ರಾಹಕರ ಗೌಪ್ಯ ವಿವರಗಳನ್ನು ಕೇಳುವ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಮುಂಬೈ ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಂಚಕರು ತಮ್ಮ ಕೆವೈಸಿ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಅಪ್‌ಡೇಟ್ ಮಾಡದಿದ್ದಕ್ಕಾಗಿ ತಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿ ಮೆಸೇಜ್‌ಗಳನ್ನು ಕಳುಹಿಸಿ ಗ್ರಾಹಕರನ್ನು ಆತಂಕಕ್ಕೆ ತಳ್ಳಿದ್ದಾರೆ. ಬಳಿಕ ನಕಲಿ ಮೆಸೇಜ್‌ಗಳ ಮೂಲಕ ಕಳುಹಿಸಲಾದ ಲಿಂಕ್‌ಗಳನ್ನು ಕಳುಹಿಸಿದ್ದಾರೆ. ಗ್ರಾಹಕರು ಅದನ್ನು ಕ್ಲಿಕ್ ಮಾಡಿದ ಕಾರಣ ಹಣ ಕಳೆದುಕೊಂಡಿದ್ದಾರೆ.
ಈ ನಕಲಿ ಲಿಂಕ್‌ಗಳು ಗ್ರಾಹಕರನ್ನು ತಮ್ಮ ಬ್ಯಾಂಕ್‌ನ ನಕಲಿ ವೆಬ್‌ಸೈಟ್‌ಗೆ ಪ್ರವೇಶ ನೀಡುತ್ತದೆ. ಅಲ್ಲಿ ಅವರ ಗ್ರಾಹಕ ಐಡಿ, ಪಾಸ್‌ವರ್ಡ್ ಮತ್ತು ಇತರ ಗೌಪ್ಯ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ. ಇಂತಹ ವಂಚನೆಗೆ ಒಳಗಾದ 40 ಸಂತ್ರಸ್ತರಲ್ಲಿ ಕಿರುತೆರೆ ನಟಿ ಶ್ವೇತಾ ಮೆಮನ್ ಕೂಡ ಸೇರಿದ್ದಾರೆ. ಈ ಬಗ್ಗೆ ಅವರು ದೂರು ದಾಖಲಿಸಿದ್ದಾರೆ.
ತನ್ನ ದೂರಿನಲ್ಲಿ, ಕಿರುತೆರೆ ನಟಿ ಶ್ವೇತಾ ಮೆಮನ್ ಅವರು ಕಳೆದ ಗುರುವಾರ ತನ್ನ ಬ್ಯಾಂಕ್‌ನಿಂದ ಬಂದಿದೆ ಎಂದು ನಂಬಿ ನಕಲಿ ಸಂದೇಶದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ತೆರೆದ ಪೋರ್ಟಲ್‌ನಲ್ಲಿ, ತನ್ನ ಗ್ರಾಹಕ ಐಡಿ, ಪಾಸ್‌ವರ್ಡ್‌ಗಳು ಮತ್ತು ಒಟಿಪಿ ಅನ್ನು ನಮೂದಿಸಿದ್ದಾರೆ. ಬಳಿಕ ಬ್ಯಾಂಕ್ ಅಧಿಕಾರಿಯಂತೆ ನಟಿಸುತ್ತಿದ್ದ ಮಹಿಳೆಯೊಬ್ಬರಿಂದ ತನಗೆ ಫೋನ್ ಕರೆ ಬಂದಿತ್ತು, ಆಕೆ ತನ್ನ ಮೊಬೈಲ್‌ಗೆ ಬಂದಿದ್ದ ಮತ್ತೊಂದು ಒಟಿಪಿ ಹಾಕಲು ಹೇಳಿದ್ದರು. ಅದನ್ನು ನಮೂದಿಸಿದ ಬೆನ್ನಲ್ಲೆ ತನ್ನ ಅಕೌಂಟ್‌ನಿಂದ 57,636 ರೂಪಾಯಿ ಕಟ್ ಆಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications