ಕೇರಳದಲ್ಲಿ ಆರೋಪಿಗಳಿಂದ ಲಂಚ ಪಡೆದ ನಾಲ್ವರು ಕರ್ನಾಟಕ ಪೊಲೀಸರು ವಶಕ್ಕೆ!
ತಿರುವನಂತಪುರಂ, ಆಗಸ್ಟ್. 03: ವಂಚನೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಕೇರಳಕ್ಕೆ ತೆರಳಿದ್ದ ಕರ್ನಾಟಕ ಪೊಲೀಸರು ಆರೋಪಿಗಳಿಂದಲೇ ಲಂಚ ಪಡೆದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ರಾಜ್ಯದಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲು ಕರ್ನಾಟಕದ ತಂಡ ಆಗಸ್ಟ್ 1 ರಂದು ಕೇರಳದ ಕೊಚ್ಚಿಗೆ ತಲುಪಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜ್ಯ ಪೊಲೀಸ್ ತಂಡವು ಅಕ್ರಮವಾಗಿ ಇಬ್ಬರು ಆರೋಪಿಗಳಿಂದ 3.95 ರೂಪಾಯಿ ಲಂಚ ಪಡೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರಿನ ಆಧಾರದ ಮೇಲೆ ಕೊಚ್ಚಿಯಲ್ಲಿರುವ ಕಲಮಸ್ಸೆರಿ ಪೊಲೀಸರು ಬುಧವಾರ ಸಂಜೆ ನಾಲ್ವರು ಪೊಲೀಸರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಸ್ಟಡಿಯಲ್ಲಿರುವ ಪೊಲೀಸ್ ಅಧಿಕಾರಿಗಳ ವಿವರಗಳು ಮತ್ತು ಅವರು ಕೊಚ್ಚಿಗೆ ಭೇಟಿ ನೀಡುವ ಉದ್ದೇಶವನ್ನು ಪರಿಶೀಲಿಸಲು ರಾಜ್ಯ ಪೊಲೀಸರು ಕರ್ನಾಟಕ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ ಬೇಬಿ ಪಿ ವಿ ಅವರನ್ಉ ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದೆ. ಉದ್ದೇಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಕರಣ ದಾಖಲಾಗಿತ್ತು. ಬಂಧಿತರ ಗುರುತು ಪರಿಶೀಲನೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್‌ಫೀಲ್ಡ್‌ನಿಂದ ಕರ್ನಾಟಕ ತಂಡವು ಆರೋಪಿಗಾಳಾದ ಅಖಿಲ್ ಮತ್ತು ನಿಖಿಲ್ ಎಂಬುವವರನ್ನು ಬಂಧಿಸಲು ರಾಜ್ಯಕ್ಕೆ ಬಂದಿದೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ. ಕರ್ನಾಟಕ ಪೊಲೀಸ್ ಅಧಿಕಾರಿಗಳು ಪ್ರಕರಣ ಇತ್ಯರ್ಥಕ್ಕೆ 25 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾರೆ. ಆರೋಪಿಗಳಲ್ಲಿ ಒಬ್ಬರಿಂದ ಒಂದು ಲಕ್ಷ ರೂ ಪಡೆದು, ಇತರ ಆರೋಪಿಯ ತಂದೆಯಿಂದ 3 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಇದಾದ ನಂತರ ಅವರು ಕೇರಳ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.












Click it and Unblock the Notifications