Heart attack in Chardham: ಚಾರ್‌ಧಾಮ್ ಯಾತ್ರೆಯಲ್ಲಿ ಹೃದಯಾಘಾತ: 72 ಗಂಟೆಗಳಲ್ಲಿ 4 ಭಕ್ತರು ಸಾವು!
ಭಾನುವಾರ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲು ತೆರೆಯುವುದರೊಂದಿಗೆ ಚಾರ್‌ಧಾಮ್ ಯಾತ್ರೆ ಆರಂಭವಾಗಿದೆ. ಚಾರ್‌ಧಾಮ್‌ಗೆ ಭೇಟಿ ನೀಡಲು ಪ್ರತಿದಿನ ಸಾವಿರಾರು ಜನರು ಉತ್ತರಖಂಡಕ್ಕೆ ತೆರಳುತ್ತಿದ್ದಾರೆ. ಯಮುನೋತ್ರಿ ಧಾಮದ ಬಾಗಿಲು ತೆರೆದು ಕೇವಲ ಎರಡು ದಿನಗಳು ಕಳೆದಿವೆ. ಅದಾಗಲೆ ಇಲ್ಲಿಯವರೆಗೆ ಇಲ್ಲಿಗೆ ಭೇಟಿ ನೀಡಲು ಬಂದ ಭಕ್ತರ ಪೈಕಿ 4 ಭಕ್ತರು ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ.
ಮೇ 10 ರಂದು ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಧಾಮದ ಬಾಗಿಲು ತೆರೆಯಲಾಯಿತು. ಮೇ 10 ರಂದು ಯಮುನೋತ್ರಿ ಧಾಮದ ವಿವಿಧ ಸ್ಥಳಗಳಲ್ಲಿ ಇಬ್ಬರು ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಯಾತ್ರೆಯ ಎರಡನೇ ದಿನವಾದ ಮೇ 11 ಶನಿವಾರದಂದು ಯಮುನೋತ್ರಿ ಧಾಮದಲ್ಲಿ ಮತ್ತೊಬ್ಬ ಭಕ್ತ ಸಾವನ್ನಪ್ಪಿದ್ದಾನೆ. ಓರ್ವ ಮಹಿಳಾ ಯಾತ್ರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೀಗಾಗಿ ಚಾರ್‌ಧಾಮ್ ಯಾತ್ರೆಗೆ ಆಗಮಿಸುವ ಹೃದಯ ಸಂಬಂಧಿ ಸಮಸ್ಯೆಗಳು ಇರುವ ಭಕ್ತರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಗಿದೆ. ಚಾರ್ ಧಾಮ್ ಯಾತ್ರೆಗೆ ತೆರಳುವ ಜನರು ತಮ್ಮ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು.
ವಿಶೇಷವಾಗಿ ವಯಸ್ಸಾದವರು ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ವೈದ್ಯರು ನೀಡಿದ ಕೆಲವು ಸಲಹೆಗಳನ್ನು ನೀವು ಅಳವಡಿಸಿಕೊಂಡು ಯಾತ್ರೆ ಮಾಡಬೇಕು ಎಂದು ಹೃದ್ರೋಗ ತಜ್ಞ ಡಾ.ವಿಕಾಸ್ ಠಾಕ್ರನ್ ಅವರು ಹೇಳಿದರು. ನೀವು ಚಾರ್ಧಾಮ್ ಯಾತ್ರೆಗೆ ಹೋಗುತ್ತಿದ್ದರೆ, ನಿಮ್ಮ ಹೃದಯದ ಆರೋಗ್ಯವನ್ನು ಯಾವ ರೀತಿ ಕಾಳಜಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಯಾತ್ರೆ ವೇಳೆ ಹೃದಯದ ಬಗ್ಗೆ ಕಾಳಜಿ ಹೇಗೆ ತೆಗೆದುಕೊಳ್ಳಬೇಕು?
1. ನೀರು ಕುಡಿಯಿರಿ-
ಪ್ರಯಾಣದ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಿರಿ ಎಂದು ಡಾ.ವಿಕಾಸ್ ಥಾಕ್ರನ್ ಹೇಳುತ್ತಾರೆ.

2. ಹಣ್ಣುಗಳನ್ನು ತಿನ್ನಿರಿ-
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳನ್ನು ಹೆಚ್ಚು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆರೋಗ್ಯಕರ ಆಹಾರ ಯಾವಾಗಲೂ ಹೃದಯಕ್ಕೆ ಮುಖ್ಯವಾಗಿದ್ದು, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಅವರು ಹೇಳಿದರು.
3. ನಿದ್ರೆ-
ಹೃದಯ ಸದೃಢವಾಗಿರಲು ನಿದ್ದೆ ಅಗತ್ಯ. ವೈದ್ಯರ ಪ್ರಕಾರ, ನಿಮ್ಮ ಜೀವನಶೈಲಿಯಲ್ಲಿ ತಡವಾಗಿ ಮಲಗುವ ಅಭ್ಯಾಸವನ್ನು ನೀವು ಹೊಂದಿದ್ದರೆ, ಅದು ನಿಮಗೆ ಹಾನಿಕಾರಕವಾಗಿದೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಸಾಕಷ್ಟು ಮತ್ತು ನಿಯಮಿತವಾಗಿ ನಿದ್ರೆ ಮಾಡುವುದು ಮುಖ್ಯ. ಉತ್ತಮ ನಿದ್ರೆ ಹೃದಯಾಘಾತದ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ.
4. ಅಗತ್ಯ ಔಷಧಗಳು-
ನಿಮ್ಮ ಬಿಪಿ, ಶುಗರ್ ಆಗಾಗ ಪರೀಕ್ಷಿಸಿಕೊಳ್ಳಬೇಕು. ಈ ಮೂರು ವಿಷಯಗಳನ್ನು ನೆನಪಿಟ್ಟುಕೊಳ್ಳುವುದರ ಜೊತೆಗೆ ನಿಯಮಿತವಾಗಿ ಇತರ ಔಷಧಿಗಳಿಂದ ನೀವು ತಪ್ಪಿಸಿಕೊಳ್ಳಬಾರದು. ಇದು ಹೃದಯದ ಮೇಲೂ ಪರಿಣಾಮ ಬೀರುತ್ತದೆ.

5. ತಪಾಸಣೆ-
ಡಾ. ವಿಕಾಸ್ ಥಾಕ್ರನ್ ಅವರ ಪ್ರಕಾರ ಪ್ರಯಾಣದ ಸಮಯದಲ್ಲಿ ನಿಮಗೆ ಅಸ್ವಸ್ಥತೆ ಅಥವಾ ಇತರ ಸಮಸ್ಯೆಗಳನ್ನು ಅನುಭವಿಸಿದರೆ, ತಕ್ಷಣವೇ ಹತ್ತಿರದ ಶಿಬಿರದಲ್ಲಿ ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಇದು ಯಾತ್ರೆ ವೇಳೆ ಪ್ರತಿಯೊಬ್ಬರು ಮಾಡಬೇಕಾದ ಮೊದಲ ಕೆಲಸವಾಗಿದೆ. ಉತ್ತರಖಂಡದಲ್ಲಿ ತಂಪಾದ ವಾತಾವರಣ ಹೆಚ್ಚಾಗಿರುವುದರಿಂದ ಬಹುಬೇಗ ರಕ್ತ ಹೆಪ್ಪು ಗಟ್ಟುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಸಮಸ್ಯೆ ಇರುವವರು ಜಾಗೃತರಾಗಿರಬೇಕು.












Click it and Unblock the Notifications